ಬೆಂಗಳೂರು: ನನ್ನ ಹತ್ಯೆಗೆ ಸಂಚು ರೂಪಿಸಿದ ಈ ಪ್ರಕರಣವನ್ನು ನಾನು ಯಾವುದೇ ಕಾರಣಕ್ಕೂ ಕೈ ಬಿಡುವುದಿಲ್ಲ ಎಂದು ಬಿಜೆಪಿ ಶಾಸಕ ಎಸ್. ಆರ್. ವಿಶ್ವನಾಥ್ ತಿಳಿಸುದ್ದಾರೆ.
ವಿಚಾರಣೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ ನನ್ನ ಬಳಿ ಇದ್ದ ದಾಖಲೆಗಳನ್ನು ನೀಡಿದ್ದೇನೆ ಪೆಂಡ್ರೈವ್ನ ಒರಿಜನಲ್ ಕಾಪಿ ಹಸ್ತಾಂತರ ಮಾಡಿದ್ದೇನೆ. ಅವ್ರು ಕರೆದಾಗಲೆಲ್ಲಾ ನಾನು ಬರಬೇಕು ಅಂತ ಹೇಳಿದ್ದಾರೆ. ಸದ್ಯ ಕುಳ್ಳ ದೇವರಾಜ ನನಗೆ ಕ್ಷಮಾಪಣೆ ಪತ್ರ ಕೂಡ ಬರೆದಿದ್ದಾನೆ. ಆ ತಪ್ಪೊಪ್ಪಿಗೆ ಪತ್ರದಲ್ಲಿ ಆಂಧ್ರದ ಮೂವರ ಹೆಸರನ್ನು ಕೂಡ ಉಲ್ಲೇಖಿಸಿದ್ದಾನೆ ನಾನು ಆ ಕಾಪಿಯನ್ನು ಕೂಡ ಪೊಲೀಸರಿಗೆ ನೀಡಿದ್ದೇನೆ.
ಇನ್ನು ನನ್ನ ದೂರಿನಲ್ಲಿ ಎಲ್ಲರ ಹೆಸರನ್ನು ಹಾಕಿದ್ದೇನೆ. ನಾನು ದಿಢೀರ್ ನೆ ಅವರನ್ನ ಬಂಧಿಸಿ ಒಳಗೆ ಹಾಕಿ ಅಂತ ಹೇಳಲ್ಲ. ಪೊಲೀಸರು ತಮ್ಮ ತನಿಖೆಯನ್ನ ನಡೆಸಲಿ ಇದರಲ್ಲಿ ಯಾರ್ಯಾರಿದ್ದಾರೆ ಅವರೆಲ್ಲ ಹೊರಗೆ ಬರಲಿ. ಯಾವುದೇ ಕಾರಣಕ್ಕೂ ನನ್ನ ಹತ್ಯೆಗೆ ಸಂಚು ರೂಪಿಸಿದ ಪ್ರಕರಣವನ್ನು ಕೈ ಬಿಡೋದಿಲ್ಲ ಎಂದಿದ್ದಾರೆ.