ಮೈಸೂರು: ಇಂದು ಬೆಳಗ್ಗೆ ನಿರ್ಮಾಪಕ ಉಮಾಪತಿ ಅವರು ದೊಡ್ಮನೆ ಆಸ್ತಿ ವಿಚಾರವಾಗಿ ತಮ್ಮ ಮಧ್ಯೆ ಇರುವ ಮುನಿಸು ಹೊರ ಹಾಕಿದ ಬೆನ್ನಲ್ಲೇ ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು, ಯಾವುದೇ ಕಾರಣಕ್ಕೂ ದೊಡ್ಮನೆ ಹಾಗೂ ನಮಗೂ ಹೋಲಿಕೆ ಮಾಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.

ಮೈಸೂರಿನ ತಮ್ಮ ಫಾರ್ಮ್ ಹೌಸ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮರ್ಡರ್ ಮಾಡಿದ್ದೀನಾ ಎಂದು ಪ್ರಶ್ನಿಸಿದರು. ನಾನು ಯಾರ ಪರ ವಿರೋಧ ಮಾತನಾಡಿಲ್ಲ. ನಾನು ಕಷ್ಟಪಟ್ಟು ಮಾಡಿರುವ ಆಸ್ತಿ ಇದು. ಇದರ ಬಗ್ಗೆ ಯಾರದರೂ ಮಾತನಾಡಿದರೆ ಸುಮ್ಮನೆ ಇರುವುದಿಲ್ಲ. ಇಂದ್ರಜಿತ್ ಅವರು ಮೊದಲು ಆರೋಪಗಳನ್ನು ಸಾಬೀತುಪಡಿಸಲಿ ಮತ್ತೆ ಮಾತನಾಡುತ್ತೇನೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ನನ್ನ ಬಳಿಯಲ್ಲಿದ್ದ ಆಸ್ತಿ ದರ್ಶನ್ ಕೇಳಿದ್ದು ನಿಜ, ಕೊಡಲ್ಲ ಅಂದಿದ್ದೆ: ನಿರ್ಮಾಪಕ ಉಮಾಪತಿ

ಇಂಡಸ್ಟ್ರೀ ಯಾರ ಅಪ್ಪನ ಸೊತ್ತು ಅಲ್ಲ. ಕಲೆಗೆ ಬೆಲೆ ಇದ್ದರಷ್ಟೇ ಇಲ್ಲಿ ಇರಬಹುದು ಅಷ್ಟೆ. ತಪ್ಪು ನಾನು ಮಾಡಿದ್ದರೆ ಕ್ಷಮೆ ಕೇಳುತ್ತೇನೆ ಇಲ್ಲದಿದ್ದರೆ ನಾನ್ಯಾಕೆ ಕೇಳಬೇಕು ಎಂದು ಹೇಳಿದರು. ಇದನ್ನೂ ಓದಿ: ಇಂದೇ ಸ್ಟಿಂಗ್ ಆಪರೇಷನ್ ಮಾಡಿದರೂ ನಾನು ಹೆದರಲ್ಲ: ದರ್ಶನ್

ಯಾವುದೇ ಕರಣಕ್ಕೂ ನಮಗೂ ದೊಡ್ಮನೆಗೂ ಹೋಲಿಕೆ ಮಾಡಬೇಡಿ. ಅವರ ವಿಚಾರವಾಗಿ ನನ್ನ ಹೆಸರನ್ನು ತೆಗೆಯಬೇಡಿ. ಈ ವಿಷಯ ದೊಡ್ಮನೆ ಕಡೆ ಹೋಗಿದ್ದಕ್ಕೆ ನಾನು ಮಾತನಾಡಿದ್ದು. ಇನ್ನೂ ಈ ವಿಷಯ ಬೇರೆ ಕಡೆ ಹೋಗುವ ಮುಂಚೆ ನಾನು ಮಾತನಾಡಲು ಬಂದಿದ್ದೇನೆ. 2006ರಲ್ಲಿ ನನ್ನ ಇಮೇಜ್ ಕೆಟ್ಟು ಹೋಗಿತ್ತು. ನಾವು ಸರಿಯಾಗಿದ್ದರೆ ಯಾರು ಕೂಡ ಯಾರ ಇಮೇಜ್ ಕೂಡ ಕೆಡಿಸಲು ಸಾಧ್ಯವಿಲ್ಲ ಎಂದರು. ಇದನ್ನೂ ಓದಿ: ಇಂದ್ರಜಿತ್ ಅಪ್ಪನಿಗೆ ಹುಟ್ಟಿದವರಾಗಿದ್ರೆ ದಾಖಲೆ ರಿಲೀಸ್ ಮಾಡಲಿ: ದರ್ಶನ್ ನೇರ ಸವಾಲ್

ಮೊದಲು 25 ಕೋಟಿ ಪ್ರಾಪರ್ಟಿ ವಿಷಯ ಮುಗಿಯಲಿ. ಇನ್ನು ಹೋಟೆಲಿನಲ್ಲಿ ನಾನು ಯಾರಿಗೆ ಹೊಡೆದೆ ಎಂಬ ಆರೋಪ ಇದೆ, ಮೊದಲು ಅವನು ಬಂದು ಮೇಡಿಕಲ್ ಸರ್ಟಿಫಿಕೆಟ್ ತೋರಿಸಲಿ. ಆರ್ಡರ್ ಕೊಟ್ಟಿದ್ದು ಲೇಟ್ ಆಗಿತ್ತು, ಅದಕ್ಕೆ ಸಣ್ಣ ವಿಚಾರವಾಗಿ ಗಲಾಟೆ ನಡೆದಿದೆ. ಆದರೆ ಅವರು ಆರೋಪ ಮಾಡಿರುವಂತೆ ಏನೋ ಆಗಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ದರ್ಶನ್ ಕ್ಷಮೆ ಕೇಳಲಿ, ಮುಂದುವರಿಸಿದ್ರೆ ಹೆಚ್ಚಿನ ತೇಜೋವಧೆ – ಇಂದ್ರಜಿತ್

150 ಸಂಪಾದನೆ ಮಾಡಿ ಇಲ್ಲಿವರೆಗು ಬಂದಿದ್ದೇನೆ ನನ್ನ ಆಸ್ತಿಯನ್ನು ನೋಡಿಕೊಳ್ಳುವುದು ನನಗೆ ಮುಖ್ಯ. ನಾನು ನನ್ನ ಅಭಿಮಾನಿಗಳಿಗೆ ಗೊತ್ತಾಗಬೇಕೆಂದು ಇಷ್ಟು ಮಾತನಾಡಿದ್ದೇನೆ. ಕಲಾವಿದರು ಒಬ್ಬರು ಕೂಡ ನಮ್ಮ ವಿಚಾರವಾಗಿ ಮಾತನಾಡಿಲ್ಲ ಅವರು ಮಾತನಾಡಲ್ಲ ಎಂದು ದರ್ಶನ್ ಕಿಡಿಕಾರಿದರು.

The post ಯಾವುದೇ ಕಾರಣಕ್ಕೂ ನಮಗೂ, ದೊಡ್ಮನೆಗೂ ಹೋಲಿಕೆ ಮಾಡ್ಬೇಡಿ: ಚಾಲೆಂಜಿಂಗ್ ಸ್ಟಾರ್ ಎಚ್ಚರಿಕೆ appeared first on Public TV.

Source: publictv.in

Source link