ಯಾವುದೇ ಜಿಲ್ಲೆ ಉಸ್ತುವಾರಿ ಬೇಕೆಂದು ಕೇಳಿಲ್ಲ- ಸೋಮಣ್ಣ ಹೇಳಿಕೆಗೆ ಆರ್​.ಅಶೋಕ್​​ ಸ್ಪಷ್ಟನೆ

ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಯಾರ ಬಳಿಯೂ ಇದೇ ಜಿಲ್ಲೆಯ ಉಸ್ತುವಾರಿ ಬೇಕೆಂದು ಕೇಳಿಲ್ಲ ಎಂದು ಕಂದಾಯ ಸಚಿವ ಆರ್​.ಅಶೋಕ್​ ಸ್ಪಷ್ಟಪಡಿಸಿದ್ದಾರೆ.

ಸೋಮಣ್ಣ ಅವರ ಹೇಳಿಕೆ ಕುರಿಂತಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಅಶೋಕ್​ ಅವರು, ಬೆಂಗಳೂರಿನ ಉಸ್ತುವಾರಿ ಬಗ್ಗೆ ಸೋಮಣ್ಣ ಮಾತನಾಡಿದ್ದಾರೆ. ಮಾಧ್ಯಮಗಳಿಂದ ಈ ಬಗ್ಗೆ ಗೊತ್ತಾಗಿದೆ. ಜಿಲ್ಲೆಗಳ ಉಸ್ತುವಾರಿ ಹಂಚಿಕೆ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟದ್ದು. ಈ‌ ಬಗ್ಗೆ ನಾನು ಏನೂ ಮಾತನಾಡುವುದಿಲ್ಲ. ಸಿಎಂ ಇಲ್ಲವೇ ಯಾರ ಬಳಿಯೂ ಇದೇ ಜಿಲ್ಲೆಯ ಉಸ್ತುವಾರಿ ಬೇಕೆಂದು ಕೇಳಿಲ್ಲ. ಈ ಹಿಂದೆ ಬೆಂಗಳೂರು ಗ್ರಾಮಾಂತರ ಉಸ್ತುವಾರಿ ವಹಿಸಿಕೊಂಡಿದ್ದೆ. ಅದನ್ನ ಎಂಟಿಬಿ ನಾಗರಾಜ್ ಅವರಿಗೆ ಬಿಟ್ಟುಕೊಟ್ಟಿದ್ದೇನೆ. ಯಾವುದೇ ಜಿಲ್ಲೆಯ ಉಸ್ತುವಾರಿ ಜವಾಬ್ದಾರಿ ಇಲ್ಲದೆ ಕೆಲಸ ಮಾಡುತ್ತಿದ್ದೇನೆ.

ಯಾವ ಸಚಿವರು, ಶಾಸಕರ ಸಭೆ ಕರೆದಾಗ ಪೂರ್ವ ನಿಯೋಜಿತ ಕಾರ್ಯಕ್ರಮ ಇಲ್ಲವೇ ಬೇರೆ ಜಿಲ್ಲೆಗಳ ಪ್ರವಾಸದ ವೇಳೆ ಹೋಗಲು ಆಗಿರುವುದಿಲ್ಲ. ಉಳಿದ ಸಮಯದಲ್ಲಿ ಸಭೆ ಕರೆದಾಗ ಹೋಗುವ ಪರಿಪಾಠ ನನ್ನಲ್ಲಿ ಇದೆ. ಉಸ್ತುವಾರಿ ಹಂಚಿಕೆ ಮುಖ್ಯಮಂತ್ರಿಗಳ ಪರಮಾಧಿಕಾರ. ಸಿಎಂ ತೀರ್ಮಾನಕ್ಕೆ ನಾನು ಬದ್ಧ.. ಇದರಲ್ಲಿ ಸಂಕೋಚವಾಗಲಿ ದ್ವೇಷವಾಗಲಿ ಯಾವುದೂ ಇಲ್ಲ. ಯಾರಿಗೇ ಉಸ್ತುವಾರಿ ಕೊಟ್ಟರೂ ಒಟ್ಟಿಗೆ ಕೆಲಸ ಮಾಡುತ್ತೇವೆ ಎಂದರು.

News First Live Kannada

Leave a comment

Your email address will not be published. Required fields are marked *