ಮೈಸೂರು: ಯಾವುದೇ ಆಸ್ಪತ್ರೆಯಲ್ಲಿ ಬೆಡ್ ಸಿಗದೆ ಆಟೋದಲ್ಲೇ ನಾನ್ ಕೋವಿಡ್ ವ್ಯಕ್ತಿ ಪ್ರಾಣ ಬಿಟ್ಟಿರೋ ಘಟನೆ ಬೆಳಗೊಳದ ಬಳಿ ನಡೆದಿದೆ. ಶ್ರೀಕಾಂತ್(34) ಮೃತ ದುರ್ದೈವಿ.

ಜಿಲ್ಲೆಯ ಕೆಆರ್​ನಗರ ತಾಲ್ಲೂಕಿನ ಮಿರ್ಲೆ ಗ್ರಾಮದ ನಿವಾಸಿಯಾಗಿದ್ದ ಶ್ರೀಕಾಂತ್​ ಮನೆಗೆ ಬಣ್ಣ ಹೊಡೆಯುವ ಕೆಲಸ ಮಾಡುತ್ತಿದ್ದ. ಬೆಳಗೊಳದ ಬಳಿ ಮನೆಗೆ ಬಣ್ಣ ಹೊಡೆಯುವಾಗ ಏಣಿಯಿಂದ ಕೆಳಗೆ ಬಿದ್ದಿದ್ದ ಶ್ರೀಕಾಂತ್​ಗೆ ಕೈ ಸೇರಿ ದೇಹದ ಹಲವು ಕಡೆ ಗಂಭೀರ ಗಾಯಗಳಾಗಿತ್ತು. ತಕ್ಷಣ ಆಸ್ಪತ್ರೆ ಸೇರೀಸೋದಕ್ಕೆ ಕರೆದುಕೊಂಡು ಹೋದ್ರೆ, ಕೋವಿಡ್ ಹಿನ್ನೆಲೆ ಯಾವ ಆಸ್ಪತ್ರೆಯಲ್ಲೂ ಚಿಕಿತ್ಸೆ ಕೊಡಲಿಲ್ಲ ಅನ್ನೋ ಆರೋಪವನ್ನ ಕುಟುಂಬಸ್ಥರು ಮಾಡ್ತಿದ್ದಾರೆ. ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದು, ಅಲೆದು ಶ್ರೀಕಾಂತ್​ ಆಟೋದಲ್ಲೇ ಪ್ರಾಣ ಬಿಟ್ಟಿದ್ದಾನೆ ಎನ್ನಲಾಗಿದೆ.

The post ಯಾವ ಆಸ್ಪತ್ರೆಯಲ್ಲೂ ಸಿಗಲಿಲ್ಲ ಚಿಕಿತ್ಸೆ, ಗಾಯಗೊಂಡಿದ್ದ​ ವ್ಯಕ್ತಿ ಆಟೋದಲ್ಲೇ ಸಾವು appeared first on News First Kannada.

Source: newsfirstlive.com

Source link