ಬೆಂಗಳೂರು: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಹೆಮ್ಮಾರಿ ಕೊರೊನಾ ಶರವೇಗದಲ್ಲಿ ಹರಡುತ್ತಿದೆ. ಜಿಲ್ಲೆಗಳಲ್ಲಿ ಕಣ್ಣಿಗೆ ಕಾಣದ ವೈರಸ್​ ಅನ್ನ ಕಟ್ಟಿಹಾಕೋಕೆ ಜಿಲ್ಲಾಡಳಿತಗಳು ಮುಂಜಾಗೃತ ಕ್ರಮ ತೆಗೆದುಕೊಳ್ತೀವಿ. ಸದ್ಯ ಇದೀಗ ಜಿಲ್ಲಾಡಳಿತಗಳು ತಮ್ಮ ತಮ್ಮ ಜಿಲ್ಲೆಗೆ ತಾವೇ ಸಂಪೂರ್ಣ ಲಾಕ್​ಡೌನ್​ ಘೋಷಿಸೋ ಮೂಲಕ ಕೊರೊನಾ ನಿಯಂತ್ರಿಸೋಕೆ ಪಣ ತೊಟ್ಟಿವೆ. ಸರ್ಕಾರ ಘೋಷಿಸಿರೋ ಲಾಕ್​ಡೌನ್​ನಿಂದಾಗಿಯೂ ಕೊರೊನಾ ಕಂಟ್ರೋಲ್​ ಆಗ್ತಿಲ್ಲ. ಜಿಲ್ಲೆಗಳಲ್ಲೂ ತನ್ನ ಆರ್ಭಟ ಶುರುವಿಟ್ಕೊಂಡಿದೆ. ಈ ಹಿನ್ನೆಲೆ, ಕೆಲ ಜಿಲ್ಲೆಗಳು ಖುದ್ದು ತಾವೇ ಸಂಪೂರ್ಣ ಲಾಕ್​ಡೌನ್​​ ಘೋಷಿಸಿಕೊಂಡಿವೆ.

ಧಾರವಾಡ ಜಿಲ್ಲೆ ಎರಡು ದಿನ ಸಂಪೂರ್ಣ ಲಾಕ್​
ಧಾರವಾಡ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಳವಾಗ್ತಿರೋದ್ರಿಂದ, ಎರಡು ದಿನ ಸಂಪೂರ್ಣ ಬಂದ್​ಗೆ ಧಾರವಾಡ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಶನಿವಾರ ಮತ್ತು ಭಾನುವಾರ ಕಂಪ್ಲೀಟ್ ಲಾಕ್​ಡೌನ್​​ಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಆದೇಶಿಸಿದ್ದಾರೆ.

ಬೆಣ್ಣೆ ನಗರಿ ನಾಲ್ಕು ದಿನ ಸಂಪೂರ್ಣ ಸ್ತಬ್ಧ
ಕೊರೊನಾ ಕಂಟ್ರೋಲ್​ಗೆ ಬೆಣ್ಣೆ ನಗರಿ ದಾವಣಗೆರೆಯಲ್ಲೂ ಮತ್ತಷ್ಟು ಟಫ್​ ರೂಲ್ಸ್​ ಮಾಡಲಾಗಿದೆ. ದಾವಣಗೆರೆಯಲ್ಲಿ 4 ದಿನ ಸಂಪೂರ್ಣ ಲಾಕ್​ಡೌನ್​​ ಘೋಷಿಸಲಾಗಿದೆ. ಇಂದಿನಿಂದ ಮೇ.24 ರವರೆಗೆ ದಾವಣಗೆರೆ ಫುಲ್ ಲಾಕ್​ ಆಗಲಿದೆ.

ಹಾವೇರಿಯಲ್ಲೂ ಸಂಪೂರ್ಣ ಲಾಕ್​ಡೌನ್​ ಜಾರಿ
ಹಾವೇರಿಯಲ್ಲೂ ಇಂದಿನಿಂದ 24ರವರೆಗೂ ಲಾಕ್​​ಡೌನ್​ ಜಾರಿಯಿರೋದ್ರಿಂದ ಜಿಲ್ಲೆ ಸಂಪೂರ್ಣ ಸ್ತಬ್ಧವಾಗಿದೆ. ಬ್ಯಾರಿಕೇಡ್ ಹಾಕಿ ನಗರದ ಪ್ರಮುಖ ರಸ್ತೆಗಳನ್ನು ಪೊಲೀಸರು ಬಂದ್ ಮಾಡಿದ್ರು. ನಗರದ ಹೊಸಮನಿ ಸಿದ್ದಪ್ಪ ಸರ್ಕಲ್ ನಲ್ಲಿ ಪೊಲೀಸರು ಫುಲ್ ಆ್ಯಕ್ಟೀವ್ ಇದ್ದೂ, ಅನಗತ್ಯವಾಗಿ ರೋಡಿಗಿಳಿತಿರೋರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ರು.

ಗುಳೇದಗುಡ್ಡ ತಾಲೂಕು 3 ದಿನ ಸಂಪೂರ್ಣ ಸ್ತಬ್ಧ
ಇತ್ತ ಬಾಗಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನಲ್ಲಿ ಮಹಾಮಾರಿ ಕೊರೊನಾ ಆರ್ಭಟ ಮುಂದುವರೆದಿದ್ದು ಸೋಂಕಿತರ ಸಂಖ್ಯೆ ದಿನದಿಂದ ಹೆಚ್ಚಾಗುತ್ತಿದೆ. ಈ ಹಿನ್ನಲೆಯಲ್ಲಿ ಗುಳೇದಗುಡ್ಡ ತಾಲೂಕಲ್ಲಿ ಲಾಕ್​ಡೌನ್​ ಜಾರಿಯಾಗಿದೆ. ವಾರದಲ್ಲಿ ಮೂರು ದಿನ ತಾಲ್ಲೂಕ ಸಂಪೂರ್ಣ ಬಂದ್ ಆಗಲಿದೆ. ಒಟ್ಟಿನಲ್ಲಿ ಕೊರೊನಾ ಮಟ್ಟಹಾಕಲು ಜಿಲ್ಲಾಡಳಿತಗಳೇ ಎಚ್ಚೆತ್ತುಕೊಂಡು ಮುಂಜಾಗೃತ ಕ್ರಮ ಕೈಗೊಂಡಿವೆ. ಇಂದಿನಿಂದ ಆದರೂ ಜಿಲ್ಲೆಗಳಲ್ಲಿ ಹೆಚ್ಚಾಗ್ತಿರೋ ಕೊರೊನಾ ಸಂಖ್ಯೆ ಕಡಿಮೆಯಾಗುತ್ತಾ ಕಾದುನೋಡಬೇಕಿದೆ.

The post ಯಾವ ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್​ಡೌನ್ ಜಾರಿ..? ಇಲ್ಲಿದೆ ಕಂಪ್ಲೀಟ್​​ ಡೀಟೇಲ್ಸ್ appeared first on News First Kannada.

Source: newsfirstlive.com

Source link