ಸಾಂದರ್ಭಿಕ ಚಿತ್ರ
ಪ್ರತಿಯೊಬ್ಬ ಭಕ್ತರು ಒಂದೊಂದು ರೀತಿಯಲ್ಲಿ ದೇವರನ್ನು ಪೂಜಿಸುತ್ತಾರೆ. ಭಕ್ತರು ಭಗವಂತನನ್ನು ಮೆಚ್ಚಿಸಲು ಮೆಚ್ಚಿಸಲು ಹೂವು, ಹಣ್ಣು ಸೇರಿದಂತೆ ನಾನಾ ಪದಾರ್ಥಗಳನ್ನು ಅರ್ಪಿಸುತ್ತಾರೆ. ಆದರೆ ಪ್ರತಿಯೊಂದು ಪೂಜೆಗೂ ಹೂ ಇರಲೇ ಬೇಕು. ಅಲ್ಲದೆ ಶಾರದ ತಿಲಕದಲ್ಲಿ ಈ ಹೂವುಗಳನ್ನು” ದೈವಸ್ಯ ಮಸ್ತಕಂ ಕುರ್ಯಾತ್ಕುಸುಮೋಪಾಹಿತಾಂ ಸದಾ” ಎಂದು ಬಣ್ಣಿಸಿದ್ದಾರೆ. ಹೀಗಾಗಿ ನಾವಿಂದು ದೇವರಿಗೆ ಇಷ್ಟವಾಗುವ ಹೂಗಳ ಪರಿಚಯ ಮಾಡಿಕೊಡುತ್ತಿದ್ದೇವೆ.
ಪ್ರತಿಯೊಬ್ಬ ದೇವರಿಗೂ ಅವರಿಗೆ ಇಷ್ಟವಾದ ಹೂವಿದೆ. ಲಕ್ಷ್ಮಿ ಪೂಜೆಗೆ ಕಮಲದ ಹೂವನ್ನು ಮಾತ್ರ ಅರ್ಪಿಸಲಾಗುತ್ತದೆ, ಅದೇ ರೀತಿ ಶಿವನ ಆರಾಧನೆಯಲ್ಲಿ ಧಾತುರಕ್ಕೆ ವಿಶೇಷ ಮಹತ್ವವಿದೆ. ಯಾವ ದೇವತೆಗೆ ಯಾವ ಹೂವು ಇಷ್ಟ, ಅದರ ಮೂಲಕ ನಿಮ್ಮ ಇಷ್ಟಾರ್ಥವನ್ನು ಈಡೇರಿಸಿಕೊಳ್ಳುವುದು ಹೇಗೆ ಇಲ್ಲಿ ತಿಳಿಯಿರಿ.
ಹನುಮಂತನಿಗೆ ಅರ್ಪಿಸಬೇಕಾದ ಹೂವು
ಮಲ್ಲಿಗೆ ಹೂವು ನೋಡಲು ಎಷ್ಟು ಸುಂದರವಾಗಿದೆಯೋ, ಅಷ್ಟೇ ಇಷ್ಟ ಈ ಹೂ ಕಂಡರೆ ಹನುಮಂತನಿಗೆ. ಹನುಮಾನ್ಗೆ ಮಲ್ಲಿಗೆ ಹೂ ಹೆಚ್ಚು ಪ್ರಿಯ ಎನ್ನಲಾಗುತ್ತೆ.
ತಾಯಿ ಸರಸ್ವತಿಗೆ ಇಷ್ಟವಾಗುವ ಹೂವು
ನೀವು ತಾಯಿ ಸರಸ್ವತಿಯನ್ನು ಪೂಜಿಸಿದರೆ ಮತ್ತು ಅವಳ ಅನುಗ್ರಹಕ್ಕೆ ಪಾತ್ರರಾಗಲು ಪೂಜೆಯಲ್ಲಿ ಪಲಾಶ(palash) ಹೂವುಗಳನ್ನು ಬಳಸಬೇಕು. ಈ ಹೂವುಗಳನ್ನು ಜ್ಞಾನದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಹೂಗಳಿಂದ ಪೂಜೆ ಮಾಡಿದ್ರೆ ತಾಯಿ ಸಂತೋಷಗೊಳ್ಳುತ್ತಾಳೆ.
ಶಿವನಿಗೆ ಪ್ರಿಯವಾದ ಹೂವು
ಧಾತುರಾ ಹೂ ಶಿವನಿಗೆ ಪ್ರಿಯವಾದುದು. ಆದರೆ ಧಾತುರಾವನ್ನು ಹೊರತುಪಡಿಸಿ, ಅಕಂಡದ ಹೂವು ಶಿವನಿಗೆ ಹೆಚ್ಚು ಇಷ್ಟ. ಇದನ್ನು ಕಿರೀಟ ಹೂವು ಎಂದು ಕರೆಯಲಾಗುತ್ತದೆ. ಭಕ್ತರು ಈ ಹೂವನ್ನು ಭಗವಂತನಿಗೆ ವಿಶೇಷವಾಗಿ ಅರ್ಪಿಸುತ್ತಾರೆ.
ಕೃಷ್ಣನಿಗೆ ಪ್ರಿಯವಾದ ಹೂ
ಭಗವಾನ್ ಕೃಷ್ಣನಿಗೆ ಅತಿ ಪ್ರಿಯವಾದದ್ದು ತುಳಸಿ. ಕೃಷ್ಣನ ಪೂಜೆಯಲ್ಲಿ ಅವರ ಪ್ರೀತಿಯ ತುಳಸಿಯನ್ನು ಮರೆಯದೇ ಬಳಸಬೇಕು. ಹಾಗೂ ಇದನ್ನು ಎಲ್ಲಾ ರೀತಿಯ ಪ್ರಸಾದದಲ್ಲಿ ಹಾಕಲಾಗುತ್ತದೆ.
ಗಣೇಶನ ಪ್ರಿಯವಾದ ಹೂವು
ಎಲ್ಲಾ ದೇವತೆಗಳಿಗಿಂತ ಮೊದಲು ಗಣಪತಿಯನ್ನು ಪೂಜಿಸಲಾಗುತ್ತದೆ. ಗಣಪತಿಯ ನೆಚ್ಚಿನ ಹೂವು ಕೆಂಪು ಅಥವಾ ಬಿಳಿ ದಾಸವಾಳ ಜೊತೆಗೆ ಚೆಂಡು ಹೂ. ಇವುಗಳನ್ನು ಗಣೇಶನಿಗೆ ಅರ್ಪಿಸುವುದರಿಂದ ಗಣೇಶ ತನ್ನ ಕೃಪೆಯನ್ನು ನೀಡುತ್ತಾನೆ ಎನ್ನಲಾಗಿದೆ.
ಕಾಳಿ ದೇವಿಯ ಇಷ್ಟದ ಹೂವು
ಕಾಳಿ ಮಾತೆಯ ಪೂಜೆಗೆ ಕೆಂಪು ದಾಸವಾಳದ ಹೂವನ್ನು ಅರ್ಪಿಸಬೇಕು. ಈ ಹೂವನ್ನು ತಾಯಿಗೆ ಅರ್ಪಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಇದನ್ನು ದುರ್ಗಾ ದೇವಿಗೆ ಕೂಡ ಅರ್ಪಿಸಲಾಗುತ್ತದೆ.
ಲಕ್ಷ್ಮಿ ದೇವಿಗೆ ಪ್ರಿಯವಾಗುವ ಹೂವು
ಲಕ್ಷ್ಮಿಯನ್ನು ಪೂಜಿಸುವವರು ಕಮಲವನ್ನು ಮರೆಯುವಂತಿಲ್ಲ. ಏಕೆಂದರೆ ಲಕ್ಷ್ಮೀ ದೇವಿ ಕಮಲದ ಮೇಲೆ ಕುಳಿತುಕೊಳ್ಳುತ್ತಾಳೆ. ಲಕ್ಷ್ಮಿ ದೇವಿಗೆ ಕಮಲದ ಹೂ ಅತ್ಯಂತ ಪ್ರಿಯ. ಆದ್ದರಿಂದ ಅವಳ ಪೂಜೆಗೆ ಇದು ಅಗತ್ಯವೆಂದು ಪರಿಗಣಿಸಲಾಗಿದೆ.
ವಿಷ್ಣುವಿಗೆ ಪ್ರಿಯವಾದ ಹೂವು
ಪಾರಿಜಾತ ಪುಷ್ಪವನ್ನು ಭಗವಾನ್ ವಿಷ್ಣುವಿನ ನೆಚ್ಚಿನ ಹೂವು ಎಂದು ಪರಿಗಣಿಸಲಾಗಿದೆ. ಸಮುದ್ರ ಮಂಥನದ ಸಮಯದಲ್ಲಿ ಈ ಮರವು ಹೊರಬಂದಿತ್ತು, ಆದ್ದರಿಂದ ಇದು ಅವರ ನೆಚ್ಚಿನ ಹೂವು ಎಂದು ಹೇಳಲಾಗುತ್ತದೆ. ನಂತರ ಶ್ರೀ ಕೃಷ್ಣ ಇದನ್ನು ಭೂಮಿಗೆ ತಂದನು.