ಯಾವ ಪುಣ್ಯದ ಹಣದಲ್ಲಿ ರಾಧಿಕಾ ಅವರಿಗೆ ನೂರಾರು ಕೋಟಿ‌ ಕೊಟ್ಟರು: ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ಕೆ ರಾಜು ಕಿಡಿ | Ex MLA K Raju slams HD Kumaraswamy on Radhika Kumaraswamy issue JDS Karnataka Politics


ಯಾವ ಪುಣ್ಯದ ಹಣದಲ್ಲಿ ರಾಧಿಕಾ ಅವರಿಗೆ ನೂರಾರು ಕೋಟಿ‌ ಕೊಟ್ಟರು: ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ಕೆ ರಾಜು ಕಿಡಿ

ಜೆಡಿಎಸ್ ನಾಯಕ ಹೆಚ್​.ಡಿ. ಕುಮಾರಸ್ವಾಮಿ

ರಾಮನಗರ: ಹಿರಿಯ ನಾಯಕರ ಸಮಾಧಿ ಮೇಲೆ ಹೆಚ್.ಡಿ. ಕುಮಾರಸ್ವಾಮಿ ಸೌಧವನ್ನು ಕಟ್ಟಿಕೊಂಡಿದ್ದಾರೆ. ನಾನು ರಾಜಕೀಯಕ್ಕೆ ಬಂದಾಗ ಹೆಚ್‌.ಡಿ. ಕುಮಾರಸ್ವಾಮಿ ಎಲ್ಲಿದ್ದರೋ ಗೊತ್ತಿಲ್ಲ. ದೇವೇಗೌಡರ ಮಗನೆಂಬ ಕಾರಣಕ್ಕೆ ಜನ ಅವರನ್ನ ಗುರುತಿಸಿದ್ರು. ಕುಮಾರಸ್ವಾಮಿಯನ್ನು ನಾವೇ ರಾಮನಗರಕ್ಕೆ ಕರೆತಂದೆವು. ಅವರು ಒಬ್ಬರ ಮೇಲೆ ಒಬ್ಬರನ್ನ ಎತ್ತಿಕಟ್ಟಿ ಯಶಸ್ವಿಯಾದರು ಎಂದು ಮಾಜಿ ಸಿಎಂ ಹಾಗೂ ಜೆಡಿಎಸ್ ನಾಯಕ ಹೆಚ್‌.ಡಿ. ಕುಮಾರಸ್ವಾಮಿ ವಿರುದ್ಧ ಮಾಜಿ ಶಾಸಕ ಕೆ. ರಾಜು ಕಿಡಿಕಾರಿದ್ದಾರೆ.

ನನಗೆ ಜಿಲ್ಲಾ ಪಂಚಾಯತ್ ಟಿಕೆಟ್ ನೀಡಿ ಸೋಲಿಸಲು ಹೇಳಿದ್ರು. ಅವರು ಹೇಳಿದಂತೆ ಕೇಳುವವರನ್ನ ಮಾತ್ರ ಹೆಚ್.ಡಿ. ಕುಮಾರಸ್ವಾಮಿ ಬೆಳೆಸುತ್ತಾರೆ. ಕಾಂಗ್ರೆಸ್ ಬೆಂಬಲದಿಂದ ಹೆಚ್​ಡಿಕೆ 2ನೇ ಬಾರಿಗೆ ಸಿಎಂ ಆದರು. ಆಮೇಲೆ ಕುಮಾರಸ್ವಾಮಿ ಹಣ ಮಾಡುವ ದಂಧೆಗೆ ಇಳಿದರು. ಮಂಡ್ಯದಲ್ಲಿ ಮಗನನ್ನು ಗೆಲ್ಲಿಸಿಕೊಳ್ಳುವುದಕ್ಕೆ ಹೆಚ್​ಡಿಕೆಗೆ ಆಗಲಿಲ್ಲ. ನೂರಾರು ಕೋಟಿ ಸುರಿದರೂ ಮಗನನ್ನು ಗೆಲ್ಲಿಸಿಕೊಳ್ಳಲಾಗಲಿಲ್ಲ ಎಂದು ಹೇಳಿದ್ದಾರೆ.

ಮಾಜಿ ಪ್ರಧಾನಿ‌ ದೇವೇಗೌಡರು ಸೋಲಲು ಹೆಚ್​.ಡಿ. ಕುಮಾರಸ್ವಾಮಿ ಕಾರಣ. ಕುಮಾರಸ್ವಾಮಿಯವರ ಆಕ್ರಮ ನೋಡಿ ಜನರು ಸೋಲಿಸಿದ್ರು. ಸುಳ್ಳಿನ ಸರಮಾಲೆ ಕಟ್ಟಿ ರಾಜಕೀಯ ಬೆಳೆ ಬೇಯಿಸಿಕೊಳ್ಳುತ್ತಾರೆ. ಏಕವಚನದಲ್ಲೇ ಮಾತಾಡುತ್ತಾರೆಂದು ಹೆಚ್‌ಡಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹೆಚ್‌ಡಿಕೆ ಜನರಿಗೆ ಮೋಡಿ ಮಾಡಿ ರಾಜಕೀಯ ಮಾಡಿದ್ದಾರೆ ಎಂದು ರಾಮನಗರದಲ್ಲಿ ಮಾಜಿ ಶಾಸಕ ಕೆ.ರಾಜು ಹೇಳಿದ್ದಾರೆ.

ಮುಖ್ಯಮಂತ್ರಿ ಸ್ಥಾನದಲ್ಲಿ‌ದ್ದವರು ರಾಧಿಕಾ ಅವರನ್ನು ಮದುವೆ ಆದರು. ಆದರೆ ರಾಧಿಕಾ ಕುಮಾರಸ್ವಾಮಿಯಿಂದ ದೂರವಾಗಲೂ ನೂರಾರು ಕೋಟಿ ರೂಪಾಯಿ ಕೊಟ್ಟರು. ಯಾವ ಪುಣ್ಯದ ಹಣದಲ್ಲಿ ರಾಧಿಕಾ ಕುಮಾರಸ್ವಾಮಿ ಅವರಿಗೆ ನೂರಾರು ಕೋಟಿ‌ ಕೊಟ್ಟರೆಂದು ರಾಜ್ಯದ ಜನರಿಗೆ ತಿಳಿಸಬೇಕೆಂದು ಮಾಜಿ ಶಾಸಕ ಕೆ.ರಾಜು ಆಗ್ರಹ ವ್ಯಕ್ತಪಡಿಸಿದ್ದಾರೆ.

TV9 Kannada


Leave a Reply

Your email address will not be published.