ಕೊರೊನಾದಿಂದ ರದ್ದಾದ ಐಪಿಎಲ್​ನ ಅರ್ಧ ಭಾಗವನ್ನು ಯುಎಇನಲ್ಲಿ ನಡೆಸೋಕೆ ನಿರ್ಧರಿಸಲಾಗಿದೆ. ಈ ಬೆನ್ನಲ್ಲೆ ಭಾರತ ಆತಿಥ್ಯ ವಹಿಸಬೇಕಿದ್ದ ಟಿ20 ವಿಶ್ವಕಪ್​ ಟೂರ್ನಿಯನ್ನ ಯುಎಇಗೆ ಸ್ಥಳಾಂತರಿಸಲಾಗಿದೆ. ಆದರೆ ಟೂರ್ನಿ ಯುಎಇನಲ್ಲಿ ಆಯೋಜನೆಯಾದ್ರು ಎಲ್ಲಾ ಹಕ್ಕುಗಳನ್ನ ಬಿಸಿಸಿಐ ಹೊಂದಿರಲಿದೆ.

ಅಕ್ಟೋಬರ್ 17ರಂದು ಆರಂಭವಾಗಲಿರುವ ಟಿ20 ವಿಶ್ವಕಪ್, ನವೆಂಬರ್ 14ಕ್ಕೆ ಮುಕ್ತಾಯಗೊಳ್ಳಲಿದೆ. ಭಾರತದಲ್ಲಿ ಕೊರೊನಾ ಹಾವಳಿ ನಿಯಂತ್ರಣಕ್ಕೆ ಬಾರದ ಕಾರಣ ಐಪಿಎಲ್​ನಂತೆ ವಿಶ್ವಕಪ್​​​ ಅನ್ನು ಯುಎಇನಲ್ಲಿ ನಡೆಸೋಕೆ ಬಿಸಿಸಿಐ ನಿರ್ಧಾರ ಕೈಗೊಂಡಿದೆ. ಜೂನ್​​ 1ರಂದು ನಡೆದ ಐಸಿಸಿ ಸಭೆಯಲ್ಲಿ ಒಂದು ತಿಂಗಳ ಕಾಲಾವಕಾಶ ಪಡೆದಿದ್ದ ಬಿಸಿಸಿಐ, ಇದೀಗ ಯುಎಇನಲ್ಲಿ ಟೂರ್ನಿ ಆಯೋಜಿಸಲು ತೀರ್ಮಾನಿಸಿದೆ.

ಟಿ20 ವರ್ಲ್ಡ್​ಕಪ್​​ಗೆ ಭಾರತವೇ ಆತಿಥ್ಯ ವಹಿಸಲಿದೆ. ಹಾಗಾಗಿ ದೇಶ ಅಥವಾ ದೇಶದ ಹೊರಗಡೆ ಎಲ್ಲೇ ಟೂರ್ನಿಯನ್ನ ಆಯೋಜಿಸಿದ್ರೂ ಬಿಸಿಸಿಐ ಬಳಿಯೇ ಆಯೋಜನೆ ಹಕ್ಕು ಇರಲಿದೆ. ಸದ್ಯ ಕೊರೊನಾದಿಂದ ಸ್ಥಗಿತಗೊಂಡಿರುವ ಇಂಡಿಯನ್​ ಪ್ರೀಮಿಯರ್​ ಲೀಗ್​ ಸೆಪ್ಟೆಂಬರ್​ 19ರಿಂದ ಆರಂಭವಾಗಿ ಅಕ್ಟೋಬರ್​​ 15ರವರಗೆ ನಡೆಸೋಕೆ ಬಿಸಿಸಿಐ ಮುಂದಾಗಿದೆ. ಆದರೆ ಈ ಎರಡೂ ಟೂರ್ನಿಗಳ ಆಯೋಜನೆಗೆ ಸಂಬಂಧಿಸಿದ ಅಧಿಕೃತ ಮಾಹಿತಿಗಳು ಇನ್ನೂ ಹೊರಬಿದ್ದಿಲ್ಲ..!

The post ಯುಎಇನಲ್ಲಿ ಅ.17 ರಿಂದ ಟಿ20 ವಿಶ್ವಕಪ್​ ಆರಂಭ.. ನ.14ಕ್ಕೆ ಫೈನಲ್​​​ appeared first on News First Kannada.

Source: newsfirstlive.com

Source link