ನವದೆಹಲಿ: ಒಂದೆಡೆ ಇಸ್ರೇಲ್ ಪ್ಯಾಲೆಸ್ತೇನ್ ನಡುವೆ ಯುದ್ಧ ನಡೆಯುತ್ತಿದೆ.. ಎಲ್ಲೆಂದರಲ್ಲಿಗೆ ಬಂದು ಬೀಳುತ್ತಿರುವ ಮಿಸೈಲ್​ಗಳಿಂದಾಗಿ ಹಲವಾರು ಇಸ್ರೇಲಿಗರು ಸಾವನ್ನಪ್ಪುತ್ತಿದ್ದಾರೆ.. ಪ್ರತಿಯಾಗಿ ಇಸ್ರೇಲಿ ಸೈನಿಕರು ಹಮಾಸ್ ಉಗ್ರರ ರುಂಡ ಚೆಂಡಾಡುತ್ತಿದ್ದಾರೆ.. ಇದರ ಮಧ್ಯೆಯೂ ಇಸ್ರೇಲ್ ಭಾರತಕ್ಕೆ ಮತ್ತೆ 3 ಟನ್ ಆಕ್ಸಿಜನ್ ಡಿವೈಸ್​ಗಳನ್ನ ಕಳುಹಿಸಿಕೊಡುವ ಮೂಲಕ ಸಹಾಯಹಸ್ತ ಚಾಚಿದೆ.

ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭಾರತ ಮತ್ತು ಇಸ್ರೇಲ್​ ನಡುವಿನ ಸ್ನೇಹ ಸಂಬಂಧ ಮತ್ತಷ್ಟು ಗಟ್ಟಿಯಾಗಿದೆ. ತನ್ನ ವೈರಿಯೊಂದಿಗ ಕಾದಾಡುತ್ತಿರುವ ಇಸ್ರೇಲ್ ಇತ್ತ ಮಿತ್ರ ದೇಶ ಭಾರತದ ಸಂಕಷ್ಟಕ್ಕೂ ನೆರವಾಗಿದೆ. ಆಕ್ಸಿಜನ್ ಡಿವೈಸ್ ಭಾರತಕ್ಕೆ ಬಂದಿಳಿದಿರುವ ಕುರಿತು ಇಸ್ರೇಲ್​ ರಾಯಭಾರಿ ರೋನ್ ಮಾಲ್ಕ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.

ಇನ್ನು ಮೊನ್ನೆ ತಾನೆ ಕರ್ನಾಟಕಕ್ಕೂ ಸಹಾಯ ಮಾಡಿದ್ದ ಇಸ್ರೇಲ್, ಆಕ್ಸಿಜೆನ್ ಕಾಂನ್ಸಂಟ್ರೇಟರ್ ಸೇರಿದಂತೆ ಸಾಕಷ್ಟು ಔಷಧ, ಮೆಡಿಕಲ್ ಸಲಕರಣೆಯನ್ನು ಕೂಡ ಒದಗಿಸಿತ್ತು.

The post ಯುದ್ಧದ ನಡುವೆಯೂ ಭಾರತಕ್ಕೆ ಸಹಾಯ ಮಾಡುವುದನ್ನು ಮರೆಯದ ಇಸ್ರೇಲ್; ನೋಡಿ ಎಷ್ಟೆಲ್ಲ ಕೊಟ್ಟಿದೆ.. appeared first on News First Kannada.

Source: newsfirstlive.com

Source link