ಯುದ್ಧನೌಕೆಯಲ್ಲಿ ಸ್ಫೋಟ, ಭಾರತೀಯ ನೌಕಾಪಡೆಯ ಮೂವರು ಯೋಧರು ಹುತಾತ್ಮ | Explosion in indian navy destroyer ins ranvir 3 navy sailor killed dmg


ಯುದ್ಧನೌಕೆಯಲ್ಲಿ ಸ್ಫೋಟ, ಭಾರತೀಯ ನೌಕಾಪಡೆಯ ಮೂವರು ಯೋಧರು ಹುತಾತ್ಮ

ಭಾರತೀಯ ನೌಕಾಪಡೆಯ ಐಎನ್​ಎಸ್ ರಣವೀರ್ ಯುದ್ಧನೌಕೆ

ದೆಹಲಿ: ಭಾರತೀಯ ನೌಕಾಪಡೆಯ ದಾಳಿ ನೌಕೆ ಐಎನ್​ಎಸ್ ರಣವೀರ್​ನಲ್ಲಿ ಮಂಗಳವಾರ ಸಂಭವಿಸಿದ ಸ್ಫೋಟದಲ್ಲಿ ಮೂವರು ಯೋಧರು ಹುತಾತ್ಮರಾಗಿದ್ದಾರೆ. ಮುಂಬೈನಲ್ಲಿ ನೌಕಾಪಡೆಯ ಧಕ್ಕೆಯಲ್ಲಿ ನಡೆದಿರುವ ಈ ದುರಂತದಲ್ಲಿ ಮೂವರು ಸಾವನ್ನಪ್ಪಿರುವುದನ್ನು ರಕ್ಷಣಾ ಇಲಾಖೆಯು ಪತ್ರಿಕಾ ಹೇಳಿಕೆಯಲ್ಲಿ ದೃಢಪಡಿಸಿದೆ. ಯುದ್ಧನೌಕೆಯ ಕಂಪಾರ್ಟ್​ಮೆಂಟ್​ ಒಂದರಲ್ಲಿ ಸ್ಫೋಟ ಸಂಭವಿಸಿದೆ. ಆದರೆ ನೌಕೆಗೆ ದೊಡ್ಡಮಟ್ಟದಲ್ಲಿ ಹಾನಿಯಾಗಿಲ್ಲ ಎಂದು ಕೇಂದ್ರ ಸರ್ಕಾರ ವಿವರಿಸಿದೆ.

ನೌಕೆಯಲ್ಲಿದ್ದ ಇತರ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು ಎಂದು ರಕ್ಷಣಾ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಯಾವುದೇ ಶಸ್ತ್ರಾಸ್ತ್ರ ಅಥವಾ ಮದ್ದುಗುಂಡುಗಳಿಂದ ಈ ಸ್ಫೋಟ ಸಂಭವಿಸಿಲ್ಲ. ಸ್ಫೋಟದ ಬಗ್ಗೆ ಸಮಗ್ರ ತನಿಖೆ ನಡೆಸಲು ನೌಕಾಪಡೆಯು ವಿಚಾರಣಾ ಆಯೋಗವನ್ನು ರಚಿಸಿದೆ.

ನೌಕಾಪಡೆಯ ಪೂರ್ವ ಕಮಾಂಡ್​ನಲ್ಲಿ ನವೆಂಬರ್ 2021ರಿಂದ ಕರ್ತವ್ಯಕ್ಕೆ ನಿಯೋಜಿಸಲಾಗಿರುವ ಐಎನ್​ಎಸ್ ರಣವೀರ್ ತನ್ನ ನಿಯೋಜಿತ ಸಂಚಾರ ಮುಗಿಸಿಕೊಂಡು ಶೀಘ್ರದಲ್ಲಿಯೇ ತನ್ನ ಮೂಲನೆಲೆಗೆ ಮರಳಬೇಕಿತ್ತು. ಘಟನೆಯಲ್ಲಿ 11 ಸಿಬ್ಬಂದಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

TV9 Kannada


Leave a Reply

Your email address will not be published. Required fields are marked *