ಯುಪಿಯಲ್ಲಿ ಭಾರೀ ದುರಂತ: ನಕಲಿ ಮದ್ಯ ಸೇವಿಸಿ ಸಾವನ್ನಪ್ಪಿದವರ ಸಂಖ್ಯೆ 35 ಕ್ಕೆ ಏರಿಕೆ

ಯುಪಿಯಲ್ಲಿ ಭಾರೀ ದುರಂತ: ನಕಲಿ ಮದ್ಯ ಸೇವಿಸಿ ಸಾವನ್ನಪ್ಪಿದವರ ಸಂಖ್ಯೆ 35 ಕ್ಕೆ ಏರಿಕೆ

ಆಗ್ರಾ: ಉತ್ತರ ಪ್ರದೇಶದ ಅಲಿಘರ್​ನಲ್ಲಿ ಕಳೆದ ಶುಕ್ರವಾರದಿಂದ ನಕಲಿ ಮದ್ಯ ಸೇವಿಸಿ ಸರಣಿ ಸಾವುಗಳು ಸಂಭವಿಸಿದ್ದು ಜನರಲ್ಲಿ ಆತಂಕ ಮೂಡಿಸಿದೆ. ಶುಕ್ರವಾರ ನಕಲಿ ಮದ್ಯ ಸೇವಿಸಿ 8 ಮಂದಿ ಸಾವನ್ನಪ್ಪಿ 5 ಮಂದಿಯ ಸ್ಥಿತಿ ಗಂಭೀರವಾಗಿತ್ತು. ಈ ಸಾವಿನ ಸಂಖ್ಯೆ ಇದೀಗ 35 ಕ್ಕೆ ದಾಟಿತ್ತು ದೇಶವೇ ಬೆಚ್ಚಿಬೀಳುವಂತಾಗಿದೆ.

ಅಲ್ಲದೇ ಈ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಅಲ್ಲಿನ ಚೀಫ್ ಮೆಡಿಕಲ್ ಆಫೀಸರ್ ಬಿ ಪಿ ಕಲ್ಯಾಣ್ ಹೇಳಿದ್ದಾರೆ. ಇನ್ನು ನಕಲಿ ಮದ್ಯದ ಮೇಲೆ ಗುಡ್​ ಈವ್ನಿಂಗ್(ಶುಭಸಂಜೆ) ಎಂದು ಬರೆಯಲಾಗಿತ್ತು ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿ ವಿಪಿನ್ ಯಾದವ್ ಎಂಬುವನನ್ನ ಬಂಧಿಸಲಾಗಿತ್ತು ಈ ನಕಲಿ ಮದ್ಯವನ್ನ ಅಲಿಘರ್​ನ ಅಧೋನ್ ಎಂಬ ಹಳ್ಳಿಯ ಫ್ಯಾಕ್ಟರಿಯೊಂದರಲ್ಲಿ ತಯಾರಿಸಲಾಗುತ್ತಿತ್ತು ಎಂದ ಮಾಹಿತಿ ನೀಡಿದ್ದಾನೆ.

ಇದನ್ನೂ ಓದಿ: ನಕಲಿ ಮದ್ಯ ಸೇವಿಸಿ 8 ಮಂದಿ ದುರ್ಮರಣ; ಐವರು ಗಂಭೀರ

ಘಟನೆಗೆ ಸಂಬಂಧಿಸಿದಂತೆ ಅಬಕಾರಿ ಆಯುಕ್ತ ಜಿ. ಗುರುಪ್ರಸಾದ್ ಹೆಸರಿನ ಅಧಿಕಾರಿಯನ್ನ ವಜಾ ಕೆಲಸದಿಂದ ವಜಾ ಮಾಡಲಾಗಿದೆ. ಅಲ್ಲದೇ ಇನ್ನಿಬ್ಬರು ಹಿರಿಯ ಅಧಿಕಾರಿಗಳನ್ನೂ ಸಹ ಸಸ್ಪೆಂಡ್ ಮಾಡಲಾಗಿದೆ.

ಅಷ್ಟೇ ಅಲ್ಲದೆ ಮದ್ಯ ಮಾರಾಟ ಮಾಡಿದ ಆರೋಪದ ಹಿನ್ನೆಲೆ 16 ಲಿಕ್ಕರ್ ಶಾಪ್​ಗಳ ರೆಜಿಸ್ಟ್ರೇಷನ್​ ಕ್ಯಾನ್ಸಲ್ ಮಾಡಲಾಗಿದೆ. ಸ್ಥಳೀಯ ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟರ್ ರಂಜೀತ್ ಸಿಂಗ್ ಸಾವನ್ನಪ್ಪಿದವರ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ. ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಖೆ ನಡೆಸುವಂತೆ ಒತ್ತಾಯಿಸಿದ್ದು.. ಸಾವಿನ ಸಂಖ್ಯೆ 71 ಇದೆ.. ಅಧಿಕಾರಿಗಳು ಒತ್ತಾಯ ಹಾಕಿ ತಪ್ಪು ಸಂಖ್ಯೆ ನೀಡುತ್ತಿದ್ದಾರೆಂದು ಕಾಂಗ್ರೆಸ್ ನಾಯಕ ವಿವೇಕ್ ಬನ್ಸಾಲ್ ಆರೋಪಿಸಿದ್ದಾರೆ.

The post ಯುಪಿಯಲ್ಲಿ ಭಾರೀ ದುರಂತ: ನಕಲಿ ಮದ್ಯ ಸೇವಿಸಿ ಸಾವನ್ನಪ್ಪಿದವರ ಸಂಖ್ಯೆ 35 ಕ್ಕೆ ಏರಿಕೆ appeared first on News First Kannada.

Source: newsfirstlive.com

Source link