ಯುಪಿ, ಬಿಹಾರ್ ಭಯ್ಯಾ ಹೇಳಿಕೆ ತಿರುಚಲಾಗಿದೆ: ಪಂಜಾಬ್ ಸಿಎಂ ಚರಣ್​ಜಿತ್ ಸಿಂಗ್ ಚನ್ನಿ | UP Bihar bhaiya remark was twisted says Punjab CM Charanjit Singh Channi


ಯುಪಿ, ಬಿಹಾರ್ ಭಯ್ಯಾ ಹೇಳಿಕೆ ತಿರುಚಲಾಗಿದೆ: ಪಂಜಾಬ್ ಸಿಎಂ ಚರಣ್​ಜಿತ್ ಸಿಂಗ್  ಚನ್ನಿ

ಚರಣ್​ಜಿತ್ ಸಿಂಗ್ ಚನ್ನಿ

ದೆಹಲಿ: ಯುಪಿ, ಬಿಹಾರ ಮತ್ತು ದೆಹಲಿಯ ಭಯ್ಯಾಗಳನ್ನು ರಾಜ್ಯಕ್ಕೆ ಪ್ರವೇಶಿಸಲು ಬಿಡಬೇಡಿ ಎಂದು ಪಂಜಾಬಿಗಳಿಗೆ ಕರೆ ನೀಡಿದ ಕೆಲವು ದಿನಗಳ ನಂತರ, ಮುಖ್ಯಮಂತ್ರಿ ಚರಣ್​ಜಿತ್ ಸಿಂಗ್ ಚನ್ನಿ(Charanjit Singh Channi) ಗುರುವಾರ ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂದು ಹೇಳಿದ್ದಾರೆ. ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೊದಲ್ಲಿ ಚನ್ನಿ, “ನನ್ನ ಹೇಳಿಕೆಯು ರಾಜ್ಯದಲ್ಲಿ ಅಡ್ಡಿಪಡಿಸುವ ಕೆಲವು ವ್ಯಕ್ತಿಗಳಿಗೆ ಮಾತ್ರ ನಿರ್ದೇಶಿಸಲ್ಪಟ್ಟಿದೆ, ಆದರೆ ಅದನ್ನು ತಿರುಚಲಾಗಿದೆ. ಯುಪಿ ಮತ್ತು ಬಿಹಾರದ ನನ್ನ ಸಹೋದರರು ಮತ್ತು ಸಹೋದರಿಯರು ಪಂಜಾಬ್ (Punjab) ನಿರ್ಮಾಣಕ್ಕೆ ಕೊಡುಗೆ ನೀಡಿದ್ದಾರೆ. ನಾವು ತಲೆಮಾರುಗಳಿಂದ ಒಟ್ಟಿಗೆ ಇದ್ದೇವೆ ಮತ್ತು ನಾನು ಅವರೆಲ್ಲರನ್ನು ನನ್ನ ಸ್ವಂತ ಕುಟುಂಬದ ಸದಸ್ಯರಂತೆ ಪ್ರೀತಿಸುತ್ತೇನೆ ಮತ್ತು ಗೌರವಿಸುತ್ತೇನೆ ಎಂದಿದ್ದಾರೆ. ಮಂಗಳವಾರ ಸಂಜೆ ಪಕ್ಷದ ಅಭ್ಯರ್ಥಿ ಮತ್ತು ಪಂಜಾಬ್ ಯೂತ್ ಕಾಂಗ್ರೆಸ್ ಮುಖ್ಯಸ್ಥ ಬೃಂದರ್ ಸಿಂಗ್ ಧಿಲ್ಲೋನ್ ಪರವಾಗಿ ಪ್ರಿಯಾಂಕಾ(Priyanka Gandhi) ನಡೆಸಿದ ರೋಡ್ ಶೋದಲ್ಲಿ ಚನ್ನಿ ಅವರು ಪ್ರಿಯಾಂಕಾ ಪಂಜಾಬ್‌ನ ಸೊಸೆ. ಅವರು ನಮ್ಮ ಪಂಜಾಬ್ ನವರು. ಆದ್ದರಿಂದ ಪಂಜಾಬಿಗಳೇ, ಒಗ್ಗೂಡಿ. ಯುಪಿ, ಬಿಹಾರ ಮತ್ತು ದೆಹಲಿಯ ಭಯ್ಯಾಗಳು ಇಲ್ಲಿ ಆಳ್ವಿಕೆ ನಡೆಸಲು ಬಯಸುತ್ತಾರೆ. ಆದರೆ ನಾವು ಅವರನ್ನು ಪ್ರವೇಶಿಸಲು ಬಿಡುವುದಿಲ್ಲ ಎಂದು ಹೇಳಿದ್ದರು. ಚನ್ನಿ ಅವರ ಟೀಕೆಯನ್ನು ಪ್ರತಿಸ್ಪರ್ಧಿಗಳಾದ ಎಎಪಿ ಮತ್ತು ಬಿಜೆಪಿ ಖಂಡಿಸಿದ್ದು, ಅವರು ಮತ್ತು ಪ್ರಿಯಾಂಕಾ “ನಿರ್ದಿಷ್ಟ ಸಮುದಾಯವನ್ನು” ಗುರಿಯಾಗಿಸಿಕೊಂಡು “ಯುಪಿ ಮತ್ತು ಬಿಹಾರದ ಜನರನ್ನು” “ಬಹಿಷ್ಕರಿಸಲು” ಕರೆ ನೀಡುತ್ತಿರುವುದು “ನಾಚಿಕೆಗೇಡಿನ ಸಂಗತಿ” ಎಂದು ಹೇಳಿದರು. ಚನ್ನಿ ವಲಸಿಗರಿಗೆ “ಭಯ್ಯಾಸ್” ಎಂಬ ಪದವನ್ನು ಬಳಸುತ್ತಿದ್ದಾರೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಎಎಪಿ ನಾಯಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪಂಜಾಬ್ ಅನ್ನು ಆಳಲು ಬಯಸುವ ವಲಸಿಗರು ಎಂದು ಉಲ್ಲೇಖಿಸಿದ್ದಾರೆ.

ಎರಡು ದಿನಗಳ ಹಿಂದೆ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು, “ಇವರು ಭಯ್ಯಾಗಳಿದ್ದಂತೆ. ನಾವು ಅವರನ್ನು ಪಂಜಾಬ್‌ಗೆ ಕರೆತರುತ್ತೇವೆ, ಅವರನ್ನು ಗೌರವಿಸುತ್ತೇವೆ, ಅವರನ್ನು ನೋಡಿಕೊಳ್ಳುತ್ತೇವೆ. ಆದರೆ ಅವರು ನಮ್ಮನ್ನು ಆಳಲು ನಾವು ಅನುಮತಿಸುವುದಿಲ್ಲ ಎಂದಿದ್ದರು.

ಉತ್ತರ ಪ್ರದೇಶ, ಬಿಹಾರ ಮತ್ತು ದೆಹಲಿಯ “ಭಯ್ಯಾ” ಗಳನ್ನು ರಾಜ್ಯಕ್ಕೆ ಪ್ರವೇಶಿಸಲು ಬಿಡಬೇಡಿ ಎಂದು ಚನ್ನಿ ಪಂಜಾಬ್‌ನಲ್ಲಿ ಚುನಾವಣಾ ರ್ಯಾಲಿಯಲ್ಲಿ ಜನರನ್ನು ಕೇಳುವ ಮೂಲಕ ವಿವಾದವನ್ನು ಹುಟ್ಟುಹಾಕಿದ್ದರು . ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ, ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮಂಗಳವಾರ ರೂಪನಗರದಲ್ಲಿ ರೋಡ್‌ಶೋನಲ್ಲಿ ಟೀಕೆಗಳನ್ನು ಮಾಡಿದಾಗ ಚನ್ನಿ ಪಕ್ಕದಲ್ಲಿ ಚಪ್ಪಾಳೆ ತಟ್ಟುತ್ತಿದ್ದರು.

ಪ್ರಿಯಾಂಕಾ ಗಾಂಧಿ ಪಂಜಾಬ್‌ನ ಸೊಸೆ. ಇಲ್ಲಿ ಆಡಳಿತ ನಡೆಸಲು ಬಂದಿರುವ ‘ಉತ್ತರ ಪ್ರದೇಶ, ಬಿಹಾರ, ದೆಹಲಿ ದೇ ಭಯ್ಯಾಗಳನ್ನು ರಾಜ್ಯಕ್ಕೆ ಪ್ರವೇಶಿಸಲು ಬಿಡುವುದಿಲ್ಲ ಎಂದು ಚನ್ನಿ ಹೇಳಿಕೆ ನೀಡಿದ್ದು, ಇದು ಆಪ್ ನಾಯಕರನ್ನು ಗುರಿಯಾಗಿಸಿಕೊಂಡಿದೆ. ಈ ಹೇಳಿಕೆ ಪ್ರತಿಪಕ್ಷ ಬಿಜೆಪಿ, ಅಕಾಲಿದಳ ಮತ್ತು ಎಎಪಿಯಿಂದ ತೀವ್ರ ಟೀಕೆಗೆ ಗುರಿಯಾಗಿದೆ. ಎಎಪಿ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿಕೆಯನ್ನು “ತುಂಬಾ ನಾಚಿಕೆಗೇಡು” ಎಂದು ಬಣ್ಣಿಸಿದ್ದಾರೆ.

ಇದು ತುಂಬಾ ನಾಚಿಕೆಗೇಡಿನ ಸಂಗತಿಯಾಗಿದೆ. ಯಾವುದೇ ವ್ಯಕ್ತಿ ಅಥವಾ ಯಾವುದೇ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡ ಹೇಳಿಕೆಗಳನ್ನು ನಾವು ಬಲವಾಗಿ ಖಂಡಿಸುತ್ತೇವೆ” ಎಂದು ಕೇಜ್ರಿವಾಲ್ ಹೇಳಿದ್ದಾರೆ.  “ಪ್ರಿಯಾಂಕಾ ಗಾಂಧಿ ಯುಪಿಯಿಂದ ಬಂದವರು ಎಂದು ಎಎಪಿಯ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ಹೇಳಿದ್ದಾರೆ. ಅದೇ ವೇಳೆ ಕೇಜ್ರಿವಾಲ್, ಹಾಗಾದರೆ ಪ್ರಿಯಾಂಕಾ ಕೂಡಾ ಭಯ್ಯಾ ಎಂದಿದ್ದಾರೆ.

ಈ ವಿಡಿಯೊವನ್ನು ಶೇರ್ ಮಾಡಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪ್ರಿಯಾಂಕಾ ಗಾಂಧಿಯನ್ನು ಗುರಿಯಾಗಿಸಿಕೊಂಡು ಟ್ವೀಟ್ ಮಾಡಿರುವ ಅವರು, “ಪ್ರಿಯಾಂಕಾ ವಾದ್ರಾ ಉತ್ತರ ಪ್ರದೇಶಕ್ಕೆ ಹೋಗಿ ತನ್ನನ್ನು ಯುಪಿ ಕೀ ಬೇಟಿ (ಯುಪಿಯ ಮಗಳು) ಎಂದು ಕರೆದುಕೊಳ್ಳುತ್ತಾರೆ ಮತ್ತು ಪಂಜಾಬ್‌ನಲ್ಲಿ ಯುಪಿ-ಬಿಹಾರ ಜನರು ಅವಮಾನಿಸಿದಾಗ ಚಪ್ಪಾಳೆ ತಟ್ಟುತ್ತಾರೆ. ಇದು ಅವರ ಡಬಲ್ ಫೇಸ್ ಎಂದಿದ್ದಾರೆ.

ಪಂಜಾಬ್‌ನ 117 ವಿಧಾನಸಭಾ ಸ್ಥಾನಗಳಿಗೆ ಫೆಬ್ರವರಿ 20 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

TV9 Kannada


Leave a Reply

Your email address will not be published. Required fields are marked *