ರಾಯಚೂರು: ನಿದ್ದೆ ಬಾರದೆ ಮಧ್ಯರಾತ್ರಿ ಮನೆಯಿಂದ ಹೊರ ಬಂದ ಯುವಕನನ್ನ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ರಾಯಚೂರು ತಾಲೂಕಿನ ಮರ್ಚಡ್ ಗ್ರಾಮದಲ್ಲಿ ನಡೆದಿದೆ.

ತಾಯಪ್ಪ (26) ಕೊಲೆಯಾದ ಯುವಕನಾಗಿದ್ದಾನೆ. ಯುವಕನನ್ನ ಅಪಹರಿಸಿ ಕೊಲೆ ಮಾಡಿ ಗ್ರಾಮದ ಮಬ್ಬೇಲಮ್ಮ ದೇವಾಲಯದ ಬಳಿ ಶವ ಎಸೆದು ಹೋಗಲಾಗಿದೆ. ಕತ್ತು ಹಾಗೂ ಹೊಟ್ಟೆ ,ಬೆನ್ನು ಭಾಗದಲ್ಲಿ ಗಂಭೀರವಾಗಿ ಗಾಯಗೊಳಿಸಿ ಕೊಲೆ ಮಾಡಲಾಗಿದೆ.

ಮದುವೆಗೆ ಹೆಣ್ಣು ಹುಡುಕುತ್ತಿದ್ದ ತಾಯಪ್ಪ ಎರಡು ದಿನಗಳ ಕೆಳಗೆ ಮನೆಯಲ್ಲಿ ಮಾರೆಮ್ಮ ದೇವಿಗೆ ಪೂಜೆ ಮಾಡಿಸಿದ್ದನು. ರಾತ್ರಿ ನಿದ್ದೆ ಬಾರದೆ ಮನೆಯಿಂದ ಹೊರಗೆ ಬಂದವನು ಶವವಾಗಿದ್ದಾನೆ. ತಾಯಪ್ಪ ಕೊಲೆಯಾಗಿರುವುದು ಕುಟುಂಬದವರಿಗೆ ದಿಕ್ಕು ಕಾಣದಂತಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ಪತ್ನಿಯ ತಿಥಿ ದಿನವೇ ಪತಿ ಸಾವು -ಇಬ್ಬರು ಮಕ್ಕಳು ಅನಾಥ

 

ಕೊಲೆ ಆರೋಪಿಗಳ ಮಾಹಿತಿ, ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ ಅತ್ಯಂತ ಧಾರುಣವಾಗಿ ಕೊಲೆ ಮಾಡಲಾಗಿದೆ. ರಾಯಚೂರಿನ ರಿಮ್ಸ್ ಆಸ್ಪತ್ರೆ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಪತಿ ಆತ್ಮಹತ್ಯೆಗೆ ಶರಣು

The post ಯುವಕನ ಬರ್ಬರ ಕೊಲೆ- ದೇವಾಲಯ ಮುಂದೆ ಶವ ಪತ್ತೆ appeared first on Public TV.

Source: publictv.in

Source link