ಯುವಕನ ಮೆದುಳು ನಿಷ್ಕ್ರಿಯ: ಅಂಗಾಂಗ ದಾನದಿಂದ 5 ಮಂದಿಯ ಜೀವ ಉಳೀತು | Tamil Nadu: Brain Dead Student From Theni Gives new life to 5 people


ಅಪಘಾತದಿಂದಾಗಿ ಮೆದುಳು ನಿಷ್ಕ್ರಿಯಗೊಂಡಿದ್ದ 18 ವರ್ಷದ ವಿದ್ಯಾರ್ಥಿಯ ಅಂಗಗಳು ಐವರ ಪ್ರಾಣವನ್ನು ಕಾಪಾಡಿದೆ. ಮೆದುಳು ನಿಷ್ಕ್ರಿಯಗೊಂಡ ಹಿನ್ನೆಲೆಯಲ್ಲಿ ತಮ್ಮ ಮಗನ ಅಂಗ ದಾನ ಮಾಡಲು ಮುಂದಾದ ಪಾಲಕರ ಮನೋಸ್ಥೈರ್ಯ ಮತ್ತು ಮಾನವೀಯತೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ

ಚೆನ್ನೈ: ಅಪಘಾತದಿಂದಾಗಿ ಮೆದುಳು ನಿಷ್ಕ್ರಿಯಗೊಂಡಿದ್ದ 18 ವರ್ಷದ ವಿದ್ಯಾರ್ಥಿಯ ಅಂಗಗಳು ಐವರ ಪ್ರಾಣವನ್ನು ಕಾಪಾಡಿದೆ. ಮೆದುಳು ನಿಷ್ಕ್ರಿಯಗೊಂಡ ಹಿನ್ನೆಲೆಯಲ್ಲಿ ತಮ್ಮ ಮಗನ ಅಂಗಾಂಗ ದಾನ ಮಾಡಲು ಮುಂದಾದ ಪಾಲಕರ ಮನೋಸ್ಥೈರ್ಯ ಮತ್ತು ಮಾನವೀಯತೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಘಟನೆ ತಮಿಳುನಾಡಿನಲ್ಲಿ ನಡೆದಿದ್ದು, ಸಕ್ತಿಕುಮಾರ್ ಅಂಗದಾನ ಮಾಡಿದ ವಿದ್ಯಾರ್ಥಿ, ಥೇನಿ ಜಿಲ್ಲೆಯ ಉತ್ತಮಪಾಳ್ಯ ನಿವಾಸಿಯಾಗಿದ್ದಾರೆ. ಕಳೆದ ಶನಿವಾರ ಅಪಘಾತ ಸಂಭವಿಸಿತ್ತು, ಬಳಿಕ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ಥಿತಿ ಗಂಭೀರವಾಗಿದ್ದ ಕಾರಣ ಬಳಿಕ ಮದುರೈನ ಮೀನಾಕ್ಷಿ ಮಿಷನ್ ಹಾಸ್ಪಿಟಲ್ ಆಂಡ್ ರಿಸರ್ಚ್​ಗೆ ರವಾನಿಸಲಾಗಿತ್ತು.

ಮೆದುಳಿಗೆ ಸಂಬಂಧಿಸಿದಂತೆ ಕೆಲವು ಪರೀಕ್ಷೆಗಳನ್ನು ಮಾಡಲಾಗಿತ್ತು, ಬಳಿಕ ಬ್ರೈನ್ ಡೆಡ್ ಎಂದು ಘೋಷಿಸಲಾಗಿತ್ತು. ಸೋಮವಾರದವರೆಗೂ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿರಲಿಲ್ಲ. ಸಕ್ತಿಕುಮಾರ್ ಸಾವಿನ ಬಳಿಕ ಅಂಗಾಂಗ ದಾನದ ಕುರಿತು ಪೋಷಕರಿಗೆ ವೈದ್ಯರು ಜಾಗೃತಿ ಮೂಡಿಸಿದರು. ಬಳಿಕ ಅವರು ಒಪ್ಪಿಕೊಂಡು ಅಂಗಾಂಗ ದಾನ ಮಾಡಿದರು.

ಅದೇ ಆಸ್ಪತ್ರೆಯಲ್ಲಿ ದಾಖಳಾಗಿದ್ದ ರೋಗಿಗೆ ಸಕ್ತಿಕುಮಾರ್ ಅವರ ಕಿಡ್ನಿ ಹಾಗೂ ಲಿವರ್​ ಅನ್ನು ನೀಡಲಾಗಿತ್ತು, ಮತ್ತೊಂದು ಕಿಡ್ನಿಯನ್ನು ತಿರುಚಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಯಿತು, ಚೆನ್ನೈನ ಅಪೋಲೊ ಆಸ್ಪತ್ರೆಗೆ ಹೃದಯ ಹಾಗೂ ಶ್ವಾಸಕೋಶವನ್ನು ಕಳುಹಿಸಿಕೊಡಲಾಯಿತು.

ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

TV9 Kannada


Leave a Reply

Your email address will not be published.