ಯುವಕರನ್ನ ಐಸಿಸ್ ಉಗ್ರ ಸಂಘಟನೆಯತ್ತ ಸೆಳೆಯುತ್ತಿದ್ದ ಉಗ್ರ ಅರೆಸ್ಟ್


ಬೆಂಗಳೂರು: ನಿಷೇಧಿತ ಐಸಿಸ್ ಉಗ್ರ ಸಂಘಟನೆಯ ಮತ್ತೊಬ್ಬ ಶಂಕಿತ ಬಂಧನನ್ನು ಎನ್​​ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ) ಅಧಿಕಾರಿಗಳು ಬಂಧಿಸಿದ್ದಾರೆ.

ಬೆಂಗಳೂರು ನಿವಾಸಿಯಾಗಿದ್ದ ಜೋಹೈಬ್ ಹಮೀದ್ ಶಕೀಲ್ ಮನ್ನಾ (32) ಬಂಧನಕ್ಕೊಳಗಾದ ಶಂಕಿತ ಉಗ್ರನಾಗಿದ್ದು, ಎನ್​​ಐಎ ಅಧಿಕಾರಿಗಳು 2020ರಿಂದಲೂ ಶಂಕಿತ ಉಗ್ರನಿಗಾಗಿ ಶೋಧ ನಡೆಸುತ್ತಿದ್ದರು. ಆದರೆ ಹಲವು ತಿಂಗಳುಗಳಿಂದ ಆರೋಪಿ ತಲೆಮರೆಸಿಕೊಂಡಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ಬಂಧಿತ ನಿಷೇಧಿತ ಉಗ್ರಸಂಘಟನೆಗಳಾದ ಐಸಿಸ್ , ಐಎಸ್ಐಎಲ್ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದ ಎನ್ನಲಾಗಿದ್ದು, ಮುಸ್ಲಿಂ ಯುವಕರನ್ನ ಸೆಳೆದು ಐಸಿಸ್ ಸಂಘಟನೆಗೆ ಕಳುಹಿಸುತ್ತಿದ್ದನಂತೆ. ಇದಕ್ಕಾಗಿ ಕುರಾನ್ ಸರ್ಕಲ್ ಅನ್ನೋ ಗ್ರೂಪ್‌ ಮೂಲಕ ಯುವಕರನ್ನ ಕಾಂಟ್ಯಾಕ್ಟ್ ಮಾಡ್ತಿದ್ದನಂತೆ. ಈ ಮೂಲಕ ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗುವಂತೆ ಪ್ರಚೋದನೆ ನೀಡ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ಸಿರಿಯಾದ ಮುಸ್ಲಿಂ ಜನಾಂಗದವರ ಮೇಲೆ ನಡೆಯುತ್ತಿರೋ ಹಿಂಸಾಚಾರದ ದೃಶ್ಯಗಳನ್ನ ತೋರಿಸುತ್ತಿದ್ದ ಈತ ಯುವಕರ ಬ್ರೈಮ್​ ವಾಶ್​ ಮಾಡಿ, ಅವರನ್ನು ಟರ್ಕಿ ಮೂಲಕ ಸಿರಿಯಾ ದೇಶಕ್ಕೆ ಕಳಿಸ್ತಿದ್ದ ಎನ್ನಲಾಗಿದೆ. ಸದ್ಯ ಶಂಕಿತ ಉಗ್ರ ಜೋಹೈಬ್ ಮನ್ನಾನನ್ನ ಬಂಧಿಸಿರೋ ಎನ್​​​ಐಎ ಅಧಿಕಾರಿಗಳು ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ.

News First Live Kannada


Leave a Reply

Your email address will not be published. Required fields are marked *