ಕಿವೀಸ್ T20 ಸರಣಿಗೆ ಯುವಕರ ತಂಡವನ್ನೇ ಪ್ರಕಟಿಸಿದೆ. ಆ ಮೂಲಕ ಭವಿಷ್ಯದ ತಂಡದ ಕಟ್ಟಲು ತಯಾರಿ ನಡೆಸ್ತಿದೆ. ಇದೀಗ ಟೆಸ್ಟ್ ತಂಡಕ್ಕೂ ಇದೇ ರೀತಿ ಯೋಜನೆ ರೂಪಿಸಲು ಬಿಸಿಸಿಐ ನಿರ್ಧರಿಸಿದೆ. ಹಾಗಾಗಿ ಈ ಅನುಭವಿ ಬ್ಯಾಟ್ಸ್ಮನ್ಗಳನ್ನ ಕೈ ಬಿಡಲು ಚಿಂತಿಸಿದೆ. ಆ ಆಟಗಾರರು ಯಾರು? ಹೀಗೊಂದು ಪ್ರಶ್ನೆ ಶುರುವಾಗಿದೆ.
ಟೀಮ್ ಇಂಡಿಯಾ ಟೆಸ್ಟ್ ತಂಡದ ಬಲ ಅಂದರೆ, ಅಜಿಂಕ್ಯಾ ರಹಾನೆ ಮತ್ತು ಚೇತೇಶ್ವರ್ ಪೂಜಾರ. ಟೀಮ್ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದ ಅದೆಷ್ಟೋ ಬಾರಿ ಪಾರು ಮಾಡಿದ್ದು, ಈ ಆಪತ್ಭಾಂದವರೇ. ಸೋಲುವ ಹಂತದಲ್ಲಿದ್ದ ಪಂದ್ಯಗಳನ್ನೂ ಗೆಲ್ಲಿಸಿಕೊಟ್ಟ ಹೆಗ್ಗಳಿಕೆ ಕೂಡ, ಈ ಜೋಡೆತ್ತುಗಳದ್ದೇ. ಆದರೀಗ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ, ಈ ಅನುಭವಿ ಆಟಗಾರರನ್ನ ಕೈ ಬಿಡಲು, ಬಿಸಿಸಿಐ ಮತ್ತು ಆಯ್ಕೆ ಸಮಿತಿ ನಿರ್ಧರಿಸಿದಂತಿದೆ.
ರಹಾನೆ-ಪೂಜಾರಗೆ ಮುಳುವಾಗಿರೋದು ಕಳಪೆ ಪ್ರದರ್ಶನ.!
ಕಳೆದೆರಡು ವರ್ಷಗಳಿಂದ ಸದ್ದು ಮಾಡುತ್ತಿಲ್ಲ ಈ ಜೋಡೆತ್ತು.!
ಟೀಮ್ ಇಂಡಿಯಾದ ಈ ಆಪತ್ಭಾಂದವರಿಗೆ ಮುಳುವಾಗಿರೋದು, ಅವರ ಬ್ಯಾಡ್ ಪರ್ಫಾಮೆನ್ಸ್. ಕಳೆದೆರಡು ವರ್ಷಗಳಲ್ಲಿ ನಡೆದ ದೇಶ-ವಿದೇಶಗಳ ಸರಣಿಗಳಲ್ಲಿ, ತಂಡಕ್ಕೆ ಈ ಇಬ್ಬರೂ ನೆರವಾಗಿದ್ದೇ ಇಲ್ಲ. ಅಷ್ಟರಮಟ್ಟಿಗೆ ಕೆಟ್ಟ ಪ್ರದರ್ಶನ ನೀಡಿದ್ದಾರೆ. 2 ವರ್ಷಗಳಲ್ಲಿ ರಹಾನೆ 20 ಟೆಸ್ಟ್ ಪಂದ್ಯಗಳಲ್ಲಿ 32.16 ಸರಾಸರಿಯಲ್ಲಿ 997 ರನ್ ಗಳಿಸಿದ್ರೆ, ಪೂಜಾರ ಅಷ್ಟೇ ಪಂದ್ಯಗಳಲ್ಲಿ 30.54 ಸರಾಸರಿಯಲ್ಲಿ, 1008 ರನ್ ಕಲೆ ಹಾಕಲಷ್ಟೆ ಶಕ್ತರಾಗಿದ್ದಾರೆ.
ಈ ಎರಡು ವರ್ಷಗಳ ಹಿಂದೆ ಈ ಆಪತ್ಭಾಂದವರು, ಪ್ರತಿ ಸರಣಿಯಲ್ಲೂ 50ಕ್ಕೂ ಹೆಚ್ಚು ಸರಾಸರಿ ಹೊಂದುತ್ತಿದ್ರು. ಆದ್ರೀಗ ಈ ಜೋಡೆತ್ತುಗಳ ಬ್ಯಾಟ್ ಮಂಕಾಗಿದ್ದು, ರನ್ ಬರ ಎದುರಿಸುತ್ತಿದ್ದಾರೆ. ತಂಡದಲ್ಲಿ ಚಾನ್ಸ್ ಮೇಲೆ ಚಾನ್ಸ್ ಪಡೆದರೂ ನಿರೀಕ್ಷಿತ ಪ್ರದರ್ಶನ ನೀಡದ ಇವರಿಬ್ಬರಿಗೂ, ಗೇಟ್ಪಾಸ್ ನೀಡುವ ನಿರ್ಧಾರಕ್ಕೆ ಆಯ್ಕೆ ಸಮಿತಿ ಮುಂದಾಗಿದೆ. ಇವರ ಸ್ಲಾಟ್ಗೆ ಯುವ ಆಟಗಾರರನ್ನ ಕಣಕ್ಕಿಳಿಸೋಕೂ ಮುಂದಾಗಿದೆ. ಈ ಪಟ್ಟಿಯಲ್ಲಿ ಶುಭ್ಮನ್ ಗಿಲ್, ಮಯಾಂಕ್ ಅಗರ್ವಾಲ್, ಹನುಮ ವಿಹಾರಿ ಇದ್ದಾರೆ.
ಯೆಸ್.! ಈ ನಾಲ್ವರ ಹೆಸರು ರಹಾನೆ-ಪೂಜಾರ ಜಾಗದಲ್ಲಿ ಫೈನಲೈಸ್ ಆಗಿದೆ ಎಂದು ಹೇಳಲಾಗಿದೆ. ಜೊತೆಗೆ ಗೊಂದಲವೂ ಏರ್ಪಟ್ಟಿದೆ. ರೋಹಿತ್ಗೆ ಜೋಡಿಯಾಗಿ ರಾಹುಲ್, ಪ್ರೂವ್ ಮಾಡಿದ್ದು, ಅದ್ಭುತ ಇನ್ನಿಂಗ್ಸ್ ಕಟ್ಟುವ ಭರವಸೆ ಮೂಡಿಸಿದ್ದಾರೆ. ಇತ್ತ ಮಯಾಂಕ್ ಮತ್ತು ಗಿಲ್ ಕೂಡ ಓಪನರ್ಗಳಾಗಿ ಅಬ್ಬರಿಸಿದ್ದಾರೆ. ಹಾಗೇ ಗಿಲ್ರನ್ನ ಓಪನಿಂಗ್ ಆಡಿಸಿ ರಾಹುಲ್ರನ್ನ ಮಿಡಲ್ ಆರ್ಡರ್ನಲ್ಲಿ ಕಣಕ್ಕಿಳಿಸೋಕೂ, ಪ್ಲಾನ್ ಮಾಡಲಾಗಿದೆ.
ಇನ್ನ ಲೋವರ್ ಆರ್ಡರ್ನಲ್ಲಿ ಬ್ಯಾಟ್ ಬೀಸಿದ ಅನುಭವ ಇರುವ ಹನುಮ ವಿಹಾರಿ, ಅದೇ ಸ್ಲಾಟ್ನಲ್ಲಿ ಫಿಕ್ಸ್ ಆಗೋ ಸಾಧ್ಯತೆ ಹೆಚ್ಚಿದೆ. ಒಟ್ನಲ್ಲಿ ಟೆಸ್ಟ್ ಸ್ಪೆಷಲಿಸ್ಟ್ಗಳಿಗೆ ಗೇಟ್ಪಾಸ್ ನೀಡಲು ಪ್ಲಾನ್ ಮಾಡ್ತಿರುವ ಸೆಲೆಕ್ಟರ್ಸ್, ಹಿರಿಯರ ಜಾಗಕ್ಕೆ ಯುವ ಆಟಗಾರರನ್ನ ರಿಪ್ಲೇಸ್ ಮಾಡೋಕೆ ಪ್ಲಾನ್ ಮಾಡ್ತಿದ್ದಾರೆ. ಆದ್ರೆ ಇದು ಸಾಧ್ಯನಾ ಅನ್ನೋದನ್ನ, ಕಾದುನೋಡಬೇಕಿದೆ.