‘‘ಸೇಸಮ್ಮ ಸೇಸಮ್ಮ ಬಾಗಿಲು ತೆಗಿಯಮ್ಮ’’ ಹಾಡನ್ನ ಡಿಕೆ ಸಿನಿಮಾದಲ್ಲಿ ಕನ್ನಡ ಕಲಾ ರಸಿಕರು ಕೇಳೇ ಕೇಳಿರುತ್ತಾರೆ. ಬಾಲಿವುಡ್​​​ನ ಬ್ಲೂ ಡಾಲ್​ ಸನ್ನಿ ಲಿಯೋನ್ ಇದ್ದ ಕಾರಣ ಈ ಹಾಡನ್ನ ತುಸು ಹೆಚ್ಚಾಗಿಯೇ ಚಿತ್ರರಸಿಕರು ನೋಡಿರ್ತಾರೆ ಎಂದು ಹೇಳಬಹುದು. ಈಗ ಮತ್ತೆ ಸೇಸಮ್ಮ ಹಾಡು ಕನ್ನಡ ಚಿತ್ರ ಜಗತ್ತಿನಲ್ಲಿ ಬಳಕೆಗೆ ಬಂದಿದೆ.

ಹೌದು.. ಮತ್ತೊಂದು ಸೇಸಮ್ಮ ಸಾಲಿನ ಹಾಡು ಸ್ಯಾಂಡಲ್​​​ವುಡ್​​ನಲ್ಲಿ ಹೊರಬಂದಿದೆ. ಸೈಕೋ ಖ್ಯಾತಿಯ ಸಿನಿಮಾ ಸುಂದ್ರಿ ಅನಿತಾ ಭಟ್ ನಟನೆಯ ‘‘ಜೂಟಾಟ’’ ಸಿನಿಮಾದಲ್ಲಿ ‘‘ಸೇಸಮ್ಮ ಸೇಸಮ್ಮ’’ ಸಾಲಿನ ಐಟಂ ಸಾಂಗ್ ಒಂದು ಹೊರ ಬಂದಿದೆ.
ಸಿ.ಎಂ ಪ್ರೊಡಕ್ಷನ್ ನಡಿ ನಿರ್ಮಾಣವಾಗಿರೋ ಅಥರ್ವ್ ಆರ್ಯ ನಿರ್ದೇಶನದ ಜೂಟಾಟ ಸಿನಿಮಾದ ಸೇಸಮ್ಮ ಸೇಸಮ್ಮ ಹಾಡು ಈಗ ವೈರಲ್ ಆಗ್ತಿದೆ. ಖ್ಯಾತ ಗಾಯಕಿ ಅನನ್ಯ ಭಟ್ ಹಾಡಿರುವ ಪ್ರದ್ಯೋತನ್ ಸಂಗೀತ ಸಂಯೋಜನೆ ಹಾಡು ಇದಾಗಿದೆ.

‘ಟಗರು’ ಸಿನಿಮಾದ ನಂತರ ಸಾಲು ಸಾಲು ಸಿನಿಮಾಗಳಲ್ಲಿ ನಟಿ ಅನಿತಾ ಭಟ್ ಬ್ಯುಸಿಯಾಗಿದ್ದಾರೆ. ಅನಿತಾ ಭಟ್ ನಟನೆಯ ‘ಬಳೆ ಪೇಟೆ’ ಹಾಗೂ ಜೂಟಾಟ ಸಿನಿಮಾಗಳು ರಿಲೀಸ್​​​ಗೆ ಸಿದ್ಧವಾಗುತ್ತಿವೆ..

The post ಯುವಕರ ಹಾರ್ಟ್​​ಬೀಟ್​ ಹೆಚ್ಚಿಸಲು ಮತ್ತೆ ಬಂದಳು ‘ಸೇಸಮ್ಮ’ appeared first on News First Kannada.

Source: newsfirstlive.com

Source link