ಯುವತಿಗೆ ಪ್ರಜ್ಞೆ ತಪ್ಪಿಸಿ ವಿವಸ್ತ್ರಗೊಳಿಸಿ ಫೋಟೋ ತೆಗೆದು ವಂಚನೆ; ಗಂಡ-ಹೆಂಡತಿ ವಿರುದ್ಧ ದೂರು

ಯುವತಿಗೆ ಪ್ರಜ್ಞೆ ತಪ್ಪಿಸಿ ವಿವಸ್ತ್ರಗೊಳಿಸಿ ಫೋಟೋ ತೆಗೆದು ವಂಚನೆ; ಗಂಡ-ಹೆಂಡತಿ ವಿರುದ್ಧ ದೂರು

ಬೆಂಗಳೂರು: ನಗರದಲ್ಲಿ ಅಮಾಯಕ ಯುವತಿಯರನ್ನ ವಂಚಿಸೋ​ ಖರ್ತನಾಕ್ ಕಪಲ್​ಗಳ ಕೃತ್ಯ ಬೆಳಕಿಗೆ ಬಂದಿದೆ. ಗಂಡ ಹೆಂಡತಿ ಇಬ್ಬರೂ ಸೇರಿ ಯುವತಿಯರನ್ನ ಯಾಮಾರಿಸಿ ಅವರಿಂದ ಹಣಕ್ಕೆ ಡಿಮ್ಯಾಂಡ್ ಇಡುತ್ತಿದ್ದರು ಎನ್ನಲಾಗಿದೆ.

ಹೆಂಡತಿ ಚೆಂದವಾದ ಯುವತಿಯರನ್ನ ಫೇಸ್ಬುಕ್​ನಲ್ಲಿ ಪರಿಚಯ ಮಾಡಿಕೊಂಡು ನಂತರ ಅವರನ್ನ ಹಬ್ಬಕ್ಕೆ ಮನೆಗೆ ಬನ್ನಿ ಅಂತ ಕರೆದು ಜ್ಯೂಸ್ ಕುಡಿಸುತ್ತಿದ್ದಳು.. ಜ್ಯೂಸ್​ನಲ್ಲಿ ನಿದ್ರೆ ಹತ್ತುವಂತ ಮಾತ್ರೆ ಮಿಕ್ಸ್ ಮಾಡಿಕೊಡುತ್ತಿದ್ದರು ಎಂದು ಆರೋಪಿಸಲಾಗಿದೆ. ಜ್ಯೂಸ್ ಕುಡಿದು ನಿದ್ರಾಸ್ಥಿತಿಗೆ ಜಾರಿದ ಯುವತಿಯ ಜೊತೆ ಗಂಡ ಅಶ್ಲೀಲವಾಗಿ ಫೋಟೋ ತೆಗೆಸಿಕೊಂಡು ನಂತರ ಅದೇ ಫೋಟೋಗಳನ್ನ ಇಟ್ಟುಕೊಂಡು ಹಣಕೀಳುತ್ತಿದ್ದರು ಎನ್ನಲಾಗಿದೆ. ಪತ್ನಿ ಮತ್ತು ಪತಿ ಕೃಷ್ಣ ಎಂಬುವವರೇ ಹೀಗೆ ವಂಚನೆ ಮಾಡುತ್ತಿದ್ದ ಆರೋಪಿಗಳಂತೆ.

ಇತ್ತೀಚೆಗೆ ಪತ್ನಿ ಫೇಸ್​ಬುಕ್​ನಲ್ಲಿ ಯುವತಿಯೊಬ್ಬಳನ್ನ ಪರಿಚಯ ಮಾಡಿಕೊಂಡು ಆಕೆಯನ್ನ ಮನೆಗೆ ಕರೆಸಿ ಜ್ಯೂಸ್ ಕುಡಿಸಿದ್ದಳು.. ಕಾವ್ಯಳ ಗಂಡ ಕೃಷ್ಣ ಹಾಗೂ ಸಾಗರ್ ಎಂಬಾತ ಮನೆಯಲ್ಲೇ ಇದ್ದರು.. ಜ್ಯೂಸ್ ಕುಡಿದು ನಿದ್ರಾಸ್ಥಿತಿಗೆ ತೆರಳಿದ ಯುವತಿಯನ್ನ ವಿವಸ್ತ್ರಗೊಳಿಸಿ ಆಕೆಯ ಜೊತೆ ಕೃಷ್ಣ ವಿವಿಧ ಭಂಗಿಗಳಲ್ಲಿ ಅಶ್ಲೀಲವಾಗಿ ಫೋಟೋ ತೆಗೆಸಿಕೊಂಡಿದ್ದಾನೆ.. ಸಾಗರ್ ಎಂಬಾತ ಫೋಟೋಗಳನ್ನ ತೆಗೆದಿದ್ದಾನೆ ಎನ್ನಲಾಗಿದೆ.

ಇನ್ನು ಯುವತಿಗೆ ಫೋಟೋ ತೋರಿಸಿ ಆಕೆಯ ಬಳಿ ಇದ್ದ ಚಿನ್ನದ ಉಂಗುರ, ಚಿನ್ನದ ಚೈನ್ ಹಾಗೂ ಎಟಿಎಂ ಕಾರ್ಡ್​ಗಳನ್ನ ಆರೋಪಿಗಳು ಕಸಿದಿದ್ದು.. ಖಾಸಗಿ ಫೋಟೋಗಳನ್ನ ನಿನ್ನ ಪೋಷಕರಗೆ ತೋರಿಸ್ತೀವಿ ಅಂತ ಹೆದರಿಸಿ 6 ತಿಂಗಳಿಂದ 4 ಲಕ್ಷಕ್ಕೂ ಅಧಿಕ ಹಣ ವಸೂಲಿ ಮಾಡಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ.

ಅಲ್ಲದೇ ಯುವತಿಯ ಜೊತೆಯಲ್ಲಿ ಕೃಷ್ಣ ಇರುವ ವಿಡಿಯೋ ತೋರಿಸಿ ಯುವತಿಗೆ ಲೈಂಗಿಕ ಕಿರುಕುಳವನ್ನೂ ನೀಡಿದ್ದಾನಂತೆ. ಜೊತೆಗೆ ಕೇಳಿದಷ್ಟು ಹಣ ಕೊಡದಿದ್ದರೆ ವಿಡಿಯೋ, ಫೋಟೋಗಳನ್ನ ವೈರಲ್ ಮಾಡೋದಾಗಿ ಟಾರ್ಚರ್ ನೀಡಿದ್ದಾರೆ ಎಂದು ನೊಂದ ಯುವತಿ ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

The post ಯುವತಿಗೆ ಪ್ರಜ್ಞೆ ತಪ್ಪಿಸಿ ವಿವಸ್ತ್ರಗೊಳಿಸಿ ಫೋಟೋ ತೆಗೆದು ವಂಚನೆ; ಗಂಡ-ಹೆಂಡತಿ ವಿರುದ್ಧ ದೂರು appeared first on News First Kannada.

Source: newsfirstlive.com

Source link