ಯುವತಿಯನ್ನು ಅಪಹರಿಸಿ ನಿರಂತರ ಅತ್ಯಾಚಾರ; ಟಿಆರ್​ಎಸ್​ ಮುಖಂಡನ ಪುತ್ರ, ಮತ್ತವನ ಸ್ನೇಹಿತ ಅರೆಸ್ಟ್​ | Son Of TRS leader and his Friend Arrested In Rape Case At Hyderabad


ಯುವತಿಯನ್ನು ಅಪಹರಿಸಿ ನಿರಂತರ ಅತ್ಯಾಚಾರ; ಟಿಆರ್​ಎಸ್​ ಮುಖಂಡನ ಪುತ್ರ, ಮತ್ತವನ ಸ್ನೇಹಿತ ಅರೆಸ್ಟ್​

ಸಾಂಕೇತಿಕ ಚಿತ್ರ

ಹೈದರಾಬಾದ್: ಇಲ್ಲಿನ ಸೂರ್ಯಪೇಟ್​ ಜಿಲ್ಲೆಯಲ್ಲಿರುವ ಕೊಡಾಡ್​ ಎಂಬ ಪಟ್ಟಣದ ವಾರ್ಡ್​ವೊಂದರ ಕೌನ್ಸಿಲರ್​ ಆಗಿರುವ ಟಿಆರ್​ಎಸ್​ ನಾಯಕನ ಪುತ್ರ ಮತ್ತು ಆತನ ಸ್ನೇಹಿತ ಸೇರಿ, 20ವರ್ಷದ ಯುವತಿಯನ್ನು ಅಪಹರಿಸಿ, ನಿರಂತರವಾಗಿ ಅತ್ಯಾಚಾರ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈಕೆ ಶುಕ್ರವಾರ ತನ್ನ ಸಂಬಂಧಿಯೊಬ್ಬರ ಮನೆಗೆ ಹೋಗಿದ್ದಳು. ಅಲ್ಲಿಂದಲೇ ಅಪಹರಿಸಿ, ಪ್ರತ್ಯೇಕವಾದ ಸ್ಥಳಕ್ಕೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಈ 20ವರ್ಷದ ಯುವತಿ ಕೊಡಾಡ್​​ನಲ್ಲಿ ತನ್ನ ತಾಯಿಯೊಂದಿಗೆ ವಾಸವಾಗಿದ್ದಳು. ಟಿಆರ್​ಎಸ್​ ವಾರ್ಡ್​ ಕೌನ್ಸಿಲರ್​ ಪಾಶಾ ಎಂಬುವರ ಪುತ್ರ ಮೊಹಮ್ಮದ್​ ಗೌಸ್ ಪಾಶಾ ಮತ್ತು ಅವರ ಸ್ನೇಹಿತ ಸಾಯಿರಾಮ್​ ರೆಡ್ಡಿ ಆರೋಪಿಗಳು. ಇವರಿಬ್ಬರೂ ಯುವತಿಯನ್ನು ಆಟೋ ರಿಕ್ಷಾದಲ್ಲಿ ಕಿಡ್ನ್ಯಾಪ್​ ಮಾಡಿದ್ದಾರೆ. ಅದಾದ ಬಳಿಕ ಆಕೆಗೆ ಮತ್ತು ಬರಿಸುವ ಔಷಧಿ ನೀಡಿ, ಯಾರೂ ಇಲ್ಲದ ಸ್ಥಳಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾರೆ. ಮತ್ತು ಆಕೆಯನ್ನು ಅಲ್ಲಿಯೇ ಇಟ್ಟಿದ್ದರು.

ಭಾನುವಾರ ಎಚ್ಚರಗೊಂಡ ಯುವತಿ ಅದು ಹೇಗೋ ಪಾರಾಗಿ ಬಂದು, ತನ್ನ ತಾಯಿಯ ಬಳಿ ಎಲ್ಲವನ್ನೂ ಹೇಳಿಕೊಂಡಿದ್ದಾಳೆ. ನಂತರ ತಾಯಿ-ಮಗಳು ಇಬ್ಬರೂ ಪೊಲೀಸರ ಬಳಿ ಬಂದು ನಡೆದ ವಿಷಯವನ್ನು ತಿಳಿಸಿದ್ದಾರೆ. ಕೊಡಾಡ್​ ಸರ್ಕಲ್​ ಇನ್ಸ್​​ಪೆಕ್ಟರ್​ ನರಸಿಂಹ ರಾವ್​ ಈ ಬಗ್ಗೆ ಮಾಹಿತಿ ನೀಡಿದ್ದು, ಸಂತ್ರಸ್ತೆ ಮತ್ತು ಆಕೆಯ ತಾಯಿ ನೀಡಿದ ದೂರಿನ ಅನ್ವಯ ಇಬ್ಬರ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದೇವೆ. ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದೂ ಹೇಳಿದ್ದಾರೆ. ಪ್ರಕರಣವನ್ನು ತನಿಖೆಗೆ ಒಳಪಡಿಸಲಾಗಿದ್ದು, ಮೊಹಮ್ಮದ್​ ಗೌಸ್ ಪಾಶಾ ಮತ್ತು ಅವರ ಸ್ನೇಹಿತ ಸಾಯಿರಾಮ್​ ರೆಡ್ಡಿಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಅವರಿಬ್ಬರನ್ನೂ ವಿಚಾರಣೆಗೂ ಒಳಪಡಿಸಲಾಗಿದೆ.

TV9 Kannada


Leave a Reply

Your email address will not be published. Required fields are marked *