ಯುವತಿಯ​ ಅಶ್ಲೀಲ ಫೋಟೋ ಸ್ಟೇಟಸ್​ಗಿಟ್ಟ ಯುವಕನ ಬಂಧನ


ಧಾರವಾಡ: ವ್ಯಕ್ತಿಯೋರ್ವ ಯುವತಿಗೆ ಮದುವೆಯಾಗೋದಾಗಿ ನಂಬಿಸಿ ಯುವತಿಯ ನಗ್ನ ಚಿತ್ರವನ್ನು ವಾಟ್ಸಾಪ್​ ಸ್ಟೇಟಸ್​ಗೆ ಇಟ್ಟು ವಿಕೃತಿ ಮೆರೆದಿರುವ ಪ್ರಕರಣ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ.

ಮಹಾರಾಷ್ಟ್ರದ ಶಿರಡಿ ಮೂಲದ ಶುಭಂ ಮಧುಕರ ಕೂಲೆ ಎಂಬಾತ ಧಾರವಾಡದ ನರ್ಸಿಂಗ್ ವ್ಯಾಸಂಗ ಮಾಡುತ್ತಿರುವ ತನಗಿಂತ 20 ವರ್ಷ ಕಿರಿಯ ಯುವತಿಯೊಂದಿಗೆ ವಾಟ್ಸಾಪ್​ ಮೂಲಕ ಸ್ನೇಹ ಬೆಳೆಸಿದ್ದಾನೆ. ಆ ಬಳಿಕ ಸ್ನೇಹ ಪ್ರೀತಿಗೆ ತಿರುಗಿದ್ದು ಮದುವೆಯಾಗೋದಾಗಿ ನಂಬಿಸಿ ನಗ್ನವಾಗಿ ವಿಡಿಯೋ ಕಾಲ್​ ಮಾಡಲು ಹೇಳಿದ್ದಾನೆ.

ಈ ವೇಳೆ ಯುವತಿ ವಿಡಿಯೋ ಕಾಲ್​ನಲ್ಲಿ ನಗ್ನವಾಗಿದ್ದು ರೆಕಾರ್ಡ್​ ಮಾಡಿಕೊಂಡ ಆರೋಪಿ ಅದನ್ನು ಎಡಿಟ್​ ಮಾಡಿ ವಾಟ್ಸಾಪ್​ ಸ್ಟೇಟಸ್​ ಇಟ್ಟು ವಿಕೃತಿ ಮೆರೆದಿದ್ದಾನೆ ಎನ್ನಲಾಗಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತ ಯುವತಿ ನಗರದ ಸೈಬರ್​ ಪೊಲೀಸ್​ ಸ್ಟೇಶನ್​​ ಮೆಟ್ಟಿಲು ಹತ್ತಿದ್ದು ಆರೋಪಿಯ ಮೇಲೆ ಕೇಸ್​ ದಾಖಲಿಸಿದ್ದಾರೆ.

ಇದನ್ನೂ ಓದಿ:ಚಿತ್ರದುರ್ಗದಲ್ಲಿ ವ್ಯಾಕ್ಸಿನ್ ಹಾಕಿಸಿಕೊಳ್ಳಿ ಅಂದ್ರೆ ಮಾರಕಾಸ್ತ್ರ ತೋರಿಸಿದ ಮಹಿಳೆ

The post ಯುವತಿಯ​ ಅಶ್ಲೀಲ ಫೋಟೋ ಸ್ಟೇಟಸ್​ಗಿಟ್ಟ ಯುವಕನ ಬಂಧನ appeared first on News First Kannada.

News First Live Kannada


Leave a Reply

Your email address will not be published. Required fields are marked *