ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ; ಪ್ರಿಯಕರ ಆತನ ಸ್ನೇಹಿತನನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಿದ ಪೊಲೀಸ್ | Anekal rape case police arrest lover and his friend and sends to parappana agrahara jail


ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ; ಪ್ರಿಯಕರ ಆತನ ಸ್ನೇಹಿತನನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಿದ ಪೊಲೀಸ್

ಪರಪ್ಪನ ಅಗ್ರಹಾರ

ಕಳೆದ ವಾರ ತನ್ನ ಮೆನೆಗೆ ಬರಲು ಹೇಳಿದ್ದ. ರಾತ್ರಿ ಆಗಿದೆ ಹೇಗೆ ಬರಲಿ ಅಂತ ಯುವತಿ ಪ್ರಶ್ನಿಸಿ ಆತನ ಮನಗೆ ಹೋಗಲು ನಿರಾಕರಿಸಿದ್ದಳು. ಆದ್ರೆ ಇದನ್ನು ಒಪ್ಪದ ಆರೋಪಿ ಪ್ರಿಯಕರ ನಿನಗೆ ನಿಜವಾದ ಪ್ರೀತಿ ಇದ್ದರೆ ಬಾ, ನನ್ನ ಸ್ನೇಹಿತ ಕೂಡ ಅದೇ ರಸ್ತೆಯಿಂದನೇ ಬರ್ತಾನೆ ಅವನ ಜೊತೆ ಬಾ ಎಂದಿದ್ದ.

ಆನೇಕಲ್; ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಘಟನೆ ಆನೇಕಲ್ ತಾಲೂಕಿನಲ್ಲಿ ನಡೆದಿದೆ. ಆನೇಕಲ್ ತಾಲೂಕಿನ ಸೂರ್ಯ ಸಿಟಿಯಲ್ಲಿ ಪ್ರಿಯಕರ ಮತ್ತು ಆತನ ಸ್ನೇಹಿತನ ವಿರುದ್ಧ ಯುವತಿ ಅತ್ಯಾಚಾರ ಆರೋಪ ಮಾಡಿದ್ದಾರೆ. ಈ ಸಂಬಂಧ ಸೂರ್ಯಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೆ ಉತ್ತರ ಭಾರತ ಮೂಲದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಒರಿಸ್ಸಾ ಮೂಲದ ಯುವತಿ ಕಳೆದ ಕೆಲ ತಿಂಗಳಿನಿಂದ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಯುವತಿ ಉತ್ತರ ಭಾರತ ಮೂಲದ ಬಂಧಿತ ಆರೋಪಿಗಳಲ್ಲಿ ಒಬ್ಬನನ್ನು ಪ್ರೀತಿಸುತ್ತಿದ್ದಳು. ಆರೋಪಿ ಪ್ರಿಯಕರ ಕಿತ್ತಗಾನ ಹಳ್ಳಿ ಬಳಿ ವಾಸವಿದ್ದ. ಯುವತಿಯ ಮನೆಯಿಂದ ಅರ್ಧ ಕಿ.ಮಿ ದೂರದಲ್ಲೇ ಇತನ ಮನೆ ಇತ್ತು. ಕೆಲ ದಿನಗಳ ಹಿಂದೆ ಯುವತಿಯನ್ನು ಪರಿಚಯ ಮಾಡಿಕೊಂಡು ಪ್ರೀತಿ ಹೆಸರಲ್ಲಿ ಸಲುಗೆ ಬೆಳೆಸಿದ್ದ. ಇಬ್ಬರೂ ಪ್ರೀತಿಯಲ್ಲಿದ್ದರು. ಆದ್ರೆ ಕಳೆದ ವಾರ ತನ್ನ ಮೆನೆಗೆ ಬರಲು ಹೇಳಿದ್ದ. ರಾತ್ರಿ ಆಗಿದೆ ಹೇಗೆ ಬರಲಿ ಅಂತ ಯುವತಿ ಪ್ರಶ್ನಿಸಿ ಆತನ ಮನಗೆ ಹೋಗಲು ನಿರಾಕರಿಸಿದ್ದಳು. ಆದ್ರೆ ಇದನ್ನು ಒಪ್ಪದ ಆರೋಪಿ ಪ್ರಿಯಕರ ನಿನಗೆ ನಿಜವಾದ ಪ್ರೀತಿ ಇದ್ದರೆ ಬಾ, ನನ್ನ ಸ್ನೇಹಿತ ಕೂಡ ಅದೇ ರಸ್ತೆಯಿಂದನೇ ಬರ್ತಾನೆ ಅವನ ಜೊತೆ ಬಾ ಎಂದಿದ್ದ.

TV9 Kannada


Leave a Reply

Your email address will not be published. Required fields are marked *