ರಿಯಾಲಿಟಿ ಶೋವೊಂದರ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟ ಅರುಣ್​ ಗೌಡ ಅಲಿಯಾಸ್​ ಅರು ಗೌಡ, ಸದ್ಯ ಕೊರೊನಾ ರೋಗಿಗಳ ಸೇವೆಗೆ ನಿಂತಿದ್ದಾರೆ. ತಮ್ಮ ಬಳಿ ಇದ್ದ ಟಾಟಾ ಏಸ್​ ಗಾಡಿಯನ್ನ ಕೊರೊನಾ ಪೀಡಿತರಿಗೆ ಮೀಸಲಿಟ್ಟಿದ್ದು, ಬೆಡ್ಸ್​, ಆಕ್ಸಿಜನ್​ ಹಾಗೂ ಔಷಧಿ ಸಪ್ಲೈ ಮಾಡೋದಕ್ಕಾಗಿ ಬಳಸಲು ಫೌಂಡೇಶನ್​ವೊಂದಕ್ಕೆ ನೀಡಿದ್ದಾರೆ.

Lets Be the Change ಅನ್ನೋ ಫೌಂಡೇಶನ್​ ಕೊರೊನಾ ರೋಗಿಗಳಿಗೆ ನೆರವಾಗ್ತಿದ್ದು, ಮೆಡಿಸಿನ್ಸ್​, ಬೆಡ್ಸ್​​ ಹಾಗೂ ಆಕ್ಸಿಜನ್​ ಒದಗಿಸುವ ಕೆಲಸಕ್ಕೆ ಮುಂದಾಗಿದೆ. ಜೊತೆಗೆ ಸೋಂಕಿತರಿಗೆ ಊಟ ನೀಡಲು ಬಯಸುವವರು ಕೂಡ ಈ ಫೌಂಡೇಶನ್​ಗೆ ಕರೆ ಮಾಡಿ ಊಟ ಸಪ್ಲೈ ಮಾಡಬಹುದು. ಈ ಬಗ್ಗೆ ಮಾತನಾಡಿರುವ ನಟ ಅರು ಗೌಡ, ಎಲ್ಲರಲ್ಲೂ ತಮ್ಮ ಕೈಲಾದಷ್ಟು ಉಪಕಾರ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

‘ಕೊರೊನಾದ ಇಂಥ ಸಮಯದಲ್ಲಿ ಎಲ್ಲರೂ ಒಂದೊಂದು ಇನಿಶಿಯೇಟಿವ್​ ತೆಗೆದುಕೊಳ್ಳಬೇಕು ಅಂತ ನಾನು ಕೇಳಿಕೊಳ್ತೀನಿ. ನನ್ನ ಅರು ಗೌಡ ಫೌಂಡೇಶನ್​ನಿಂದ ಒಂದು ಸರ್ಪ್ರೈಸ್​ ವ್ಯಾನ್​ವೊಂದನ್ನ​ ನೀಡಿದ್ದೇನೆ. ನನ್ನ ಹತ್ರ ಇದ್ದಂತ ವ್ಯಾನ್​ ಇದು. ಈ ವ್ಯಾನ್​ ಮೂಲಕ ಸಣ್ಣ ಪುಟ್ಟ ಕೆಲಸಗಳನ್ನ ಮಾಡ್ತಿದ್ವಿ. ಆದ್ರೆ ಇವತ್ತು ನಾನು Lets Be the Change ಫೌಂಡೇಶನ್​​​ ಅವರನ್ನ ಭೇಟಿ ಮಾಡ್ದೆ. ಸದ್ಯ ನಾನು ಈ ಫೌಂಡೇಶನ್​ ಜೊತೆ ಕೈ ಜೋಡಿಸಿದ್ದೇನೆ. ಎಲ್ಲರೂ ಹೊರಗಡೆ ಬಂದು ಏನಾದ್ರೂ ಮಾಡ್ಬೇಕು ಅಂತ ಅಂದುಕೊಳ್ತಿರ್ತೀರ. ಆ ಥರ ಅಂದುಕೊಳ್ಳೋ ಬದಲು, ಈ ಥರ ಫೌಂಡೇಶನ್​ಗಳು ಸಾಕಷ್ಟು ಕೆಲಸಗಳನ್ನ ಮಾಡ್ತಿರ್ತಾರೆ. ಅವರ ಜೊತೆ ಕೈ ಜೋಡಿಸೋದ್ರಿಂದ ಅವರಿಗೂ ಸಹಾಯ ಮಾಡಿದ ಹಾಗೇ ಆಗುತ್ತೆ. ಹಾಗಾಗಿ ಎಲ್ಲರೂ ಸಹಾಯ ಮಾಡ್ಬೇಕು ಅನ್ನೋಕ್ಕಿಂತ ಯಾರೋ ಸಹಾಯ ಮಾಡ್ತಿರುವವರಿಗೆ ಏನಾದ್ರೂ ಕೊಟ್ಟಾಗ ಅವರು ಅದನ್ನ ದೊಡ್ಡ ಮಟ್ಟದಲ್ಲಿ ಮಾಡ್ತಾರೆ.

ನಾನು ನನ್ನ ಟಾಟಾ ಏಸ್​ ಗಾಡಿಯನ್ನ ಅವರಿಗೆ ಕೊಡ್ತಾ ಇದ್ದೀನಿ. ಕೊರೊನಾಗೆ ಸಂಬಂಧ ಪಟ್ಟಂತ ಮೆಡಿಸಿನ್ಸ್​, ಬೆಡ್ಸ್​, ಆಕ್ಸಿಜನ್​ ಏನೇ ಇದ್ರು ಇವತ್ತಿನಿಂದ ಇವರ ಸಹಾಯ ಮಾಡ್ತಾರೆ. ನಿಮಗೇ ಆರೋಗ್ಯ ಸಂಬಂಧಿತ ಏನೇ ಬೇಕಾದಲ್ಲಿ 9353218818 ಈ ನಂಬರ್​ಗೆ ಕರೆ ಮಾಡಿ. ಕೊರೊನಾ ಬಂದು ಗುಣಮುಖರಾದವರು ನಿಮ್ಮಲ್ಲಿ ಉಳಿದಂತ ಮೆಡಿಸಿನ್ಸ್​ಗಳನ್ನ, ಹಾಗೇ ಊಟ ಕೊಡಬೇಕು ಅಂದುಕೊಂಡವರು ಈ ಫೌಂಡೇಶನ್​​ನ ಸಂಪರ್ಕಿಸಬಹುದು’ ಅಂತ ನಟ ಅರುಣ್​ ಗೌಡ ತಿಳಿಸಿದ್ದಾರೆ.

ನಟ ಅರುಣ್​ ಗೌಡ ಇತ್ತೀಚೆಗೆ ತೆರೆ ಕಂಡ ಪುನೀತ್​ ರಾಜ್​ಕುಮಾರ್​ ಅಭಿನಯದ ಯುವರತ್ನ ಸಿನಿಮಾದಲ್ಲಿ ವಿಲನ್​ ಆಗಿ ಕಾಣಿಸಿಕೊಂಡಿದ್ದರು. ಈ ಹಿಂದೆ ಪತಿ ಬೇಕು.com, ವಿರಾಟಪರ್ವ ಸಿನಿಮಾಗಳಲ್ಲೂ ನಟಿಸಿದ್ದಾರೆ.

 

View this post on Instagram

 

A post shared by Arunn Ram Gowda (@arunngowdaofficial)

The post ಯುವರತ್ನ ವಿಲನ್​ನಿಂದ ಸಮಾಜ ಸೇವೆ; ತಮ್ಮ ಗಾಡಿಯನ್ನ ಕೊರೊನಾ ಸೋಂಕಿತರ ಸೇವೆಗೆ ನೀಡಿದ ನಟ appeared first on News First Kannada.

Source: newsfirstlive.com

Source link