ಒಂದೆಡೆ ಕೊಹ್ಲಿ ನೇತೃತ್ವದ ಟೀಮ್​ ಇಂಡಿಯಾ ಎ ಟೀಮ್​ ಆಂಗ್ಲರ ನಾಡಲ್ಲಿ ಚೊಚ್ಚಲ ಟೆಸ್ಟ್​​ ಚಾಂಪಿಯನ್​ಶಿಪ್​ ಗೆಲ್ಲೋ ಕಸರತ್ತು ನಡೆಸಿದೆ. ಇನ್ನೊಂದೆಡೆ ಯುವ ಆಟಗಾರರನ್ನ ಒಳಗೊಂಡ ಟೀಮ್​ ಇಂಡಿಯಾ ಬಿ ತಂಡವನ್ನ ಶ್ರೀಲಂಕಾ ಸರಣಿಗೆ ಕಳುಹಿಸಿಲು ಬಿಸಿಸಿಐ ಮಾಸ್ಟರ್​​ ಪ್ಲಾನ್​ ರೂಪಿಸಿದೆ. ಇದರ ಜೊತೆಗೆ ಈ ತಂಡಕ್ಕೆ ದ್ರಾವಿಡ್​​ ಮಾರ್ಗದರ್ಶನ ಇರಲಿದೆ ಅನ್ನೋ ಮಾಹಿತಿಯೂ ಹೊರ ಬಿದ್ದಿದೆ.

ಸಿಂಹಳೀಯರ ನಾಡಲ್ಲಿ ಯುವ ತಂಡಕ್ಕೆ ದ್ರಾವಿಡ್​​ ಮಾಸ್ಟರ್​​..!
ನಿವೃತ್ತಿ ಬಳಿಕವೂ ಶ್ರಮಿಸಿದ್ದಕ್ಕೆ ಸಿಗ್ತಾ ಮಹತ್ವದ ಗೌರವ..?
ರಾಹುಲ್​ ದ್ರಾವಿಡ್​​..! ವಿಶ್ವ ಕ್ರಿಕೆಟ್​​ ಶ್ರೇಷ್ಠ ಕ್ರಿಕೆಟರ್​​ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ದಿ ವಾಲ್​ ಅನ್ನೋ ಪದವೇ ದ್ರಾವಿಡ್​​ ಕ್ರಿಕೆಟ್​​ ಲೋಕದ ಎವರ್​ಗ್ರೀನ್​ ಸೂಪರ್​​ ಸ್ಟಾರ್​​ ಅನ್ನೋದನ್ನ ಸಾರಿ ಸಾರಿ ಹೇಳುತ್ತೆ. ನಿವೃತ್ತಿ ಹೇಳಿ ಬಹು ವರ್ಷಗಳೇ ಕಳೆದರೂ ದ್ರಾವಿಡ್​ ಅನ್ನೋ ಹೆಸರು ಇಂದಿಗೂ ಸೆನ್ಸೇಶನಲ್​..! ಆಟದ ಹೊರತಾಗಿ ಪಾಠ ಹೇಳಿಕೊಡೋದ್ರಲ್ಲೂ ದ್ರಾವಿಡ್​ ಪಂಟರ್​…!

ಕಳೆದ ವರ್ಷ ಟೀಮ್​ ಇಂಡಿಯಾ ಕಾಂಗರೂ ನಾಡಲ್ಲಿ, ಐತಿಹಾಸಿಕ ಸಾಧನೆ ಮಾಡಿತ್ತು. ಅದು ಅನುಭವಿಗಳ ಅಲಭ್ಯತೆಯಲ್ಲಿ..! ಅಂದು ಗೋಲ್ಡನ್​ ಚಾನ್ಸ್​ ಗಿಟ್ಟಿಸಿಕೊಂಡ ಯುವ ಆಟಗಾರರೆಲ್ಲಾ ನೀಡಿದ ಪ್ರದರ್ಶನವನ್ನ ಇಡೀ ವಿಶ್ವವೇ ಕೊಂಡಾಡಿತ್ತು. ಅದರ ಜೊತೆಗೆ ದ್ರಾವಿಡ್​​ಗೆ ಧನ್ಯವಾದದ ಮಹಾಪೂರವೇ ಹರಿದುಬಂದಿತ್ತು. ಯಾಕಂದ್ರೆ ಅಂದು ಅನುಭವಿಗಳ ಅಲಭ್ಯತೆಯಲ್ಲಿ ಮಿಂಚಿದ ಯಂಗ್ ಸ್ಟರ್ಸ್​​ಗಳೆಲ್ಲಾ ಪಟ್ಟುಗಳನ್ನ ಕಲಿತಿದ್ದು ದ್ರಾವಿಡ್​​ ಗರಡಿಯಲ್ಲಿ..!

ನಿವೃತ್ತಿ ಬಳಿಕ ಕ್ರಿಕೆಟರ್​​ಗಳು ವಿಶ್ರಾಂತಿಯ ಮೊರೆ ಹೋದ್ರೆ, ದ್ರಾವಿಡ್​​ ಆಯ್ದುಕೊಂಡಿದ್ದು ಭವಿಷ್ಯದ ಭಾರತ ಕಟ್ಟವ ಕಾಯಕ. ನಿವೃತ್ತಿ ನಂತರದಲ್ಲಿ ದ್ರಾವಿಡ್​ ಆಯ್ದುಕೊಂಡ ಹಾದಿಯೇ ಅದನ್ನ ಸಾರಿ ಸಾರಿ ಹೇಳುತ್ತೆ.

ನಿವೃತ್ತಿ ಬಳಿಕ ರಾಹುಲ್​ ದ್ರಾವಿಡ್​​
2014-15 ಮೆಂಟರ್​, ರಾಜಸ್ಥಾನ್​ ರಾಯಲ್ಸ್​
2016-17 ಮೆಂಟರ್​, ಡೆಲ್ಲಿ ಡೇರ್​​ಡೆವಿಲ್ಸ್​​
2016-18 ಕೋಚ್​​, ಭಾರತ U-19
2019 ನಿರ್ದೇಶಕ, NCA

ತಂಡದಗಳ ಮೆಂಟರ್​​ ಆಗಿ, ಅಂಡರ್​​ 19 ತಂಡದ ಕೋಚ್​ ಆಗಿ ಸಧ್ಯ NCAನ ನಿರ್ದೇಶಕರಾಗಿರುವ ದ್ರಾವಿಡ್​​ ಟೀಮ್​ ಇಂಡಿಯಾ ಯಂಗ್​ ಟ್ಯಾಲೆಂಟ್​ಗಳ ಪಾಲಿನ ಮಾಸ್ಟರ್​​. ಒಬ್ಬ ಯುವ ಆಟಗಾರನಿಗೆ ಸಿಗೋದು ಒಂದೇ ಒಂದು ಅಂಡರ್​​ 19 ವಿಶ್ವಕಪ್​. ಈ ಒಂದು ಅವಕಾಶದಲ್ಲೇ ಆ ಆಟಗಾರನ ಟ್ಯಾಲೆಂಟ್​​ ಅಳೆಯಬೇಕು ಅನ್ನೋದನ್ನ ದ್ರಾವಿಡ್​​ ಅರಿತಿದ್ರು. ಸಮರ್ಥ ಆಟಗಾರರ ಆಯ್ಕೆಯನ್ನ ದ್ರಾವಿಡ್​ ಮಾಡಿದ್ದು ಅಲ್ಲೇ..!

ಇಷ್ಟೇ ಅಲ್ಲ..! ಇಂಡಿಯಾ ಎ ತಂಡದಲ್ಲೂ ಆಟಗಾರರ ಸಾಮರ್ಥ್ಯವನ್ನ ಅಳೆದಿದ್ದ ಅದನ್ನೇ ಟೀಮ್​ಇಂಡಿಯಾ ಆಯ್ಕೆಗೆ ಮಾನದಂಡವಾಗಿಸಿದ್ರು. ಜೊತೆಗೆ ದೇಶಿ ಕ್ರಿಕೆಟ್​​ನಲ್ಲೂ ಟ್ಯಾಲೆಂಟ್​ ಹಂಟ್​ ನಡೆಸಿದ್ದ ದಿ ವಾಲ್​, ಭವಿಷ್ಯದ ಟೀಮ್​ ಇಂಡಿಯಾವನ್ನ ಕಟ್ಟಿದ್ರು. ಶುಭ್​ಮನ್​ ಗಿಲ್​, ಪೃಥ್ವಿ ಶಾ, ರಿಷಭ್​ ಪಂತ್​, ಮೊಹಮದ್​ ಸಿರಾಜ್​ ಸೇರಿದಂತೆ ಹಲ ಯುವ ಆಟಗಾರರು ಪಳಗಿದ್ದು ದ್ರಾವಿಡ್​ ಮಾಸ್ಟರ್​ ಗರಡಿಯಲ್ಲೇ..!

ಭವಿಷ್ಯದ ಟೀಮ್​ ಇಂಡಿಯಾ ಕಟ್ಟುವಲ್ಲಿ ಶ್ರಮಿಸಿರುವ ದ್ರಾವಿಡ್​​ಗೆ ಅದೇ ತಂಡಕ್ಕೆ ಕೋಚ್​ ಆಗುವ ಕಾಲ ಹತ್ತಿರಬಂದಿದೆ. ಆದ್ರೆ, ಮೂಲಗಳು ನೀಡಿರುವ ಈ ಮಾಹಿತಿ ನಿಜವಾಗುತ್ತಾ..? ಅಥವಾ ಲಂಕಾ ಟೂರ್​ಗೆ ಬೇರೆ ಕೋಚ್​​ಗೆ ಮಣೆ ಹಾಕಿ ಬಿಸಿಸಿಐ ಶಾಕ್​ ನೀಡುತ್ತಾ..? ಅನ್ನೋದೆ ಅಭಿಮಾನಿಗಳಲ್ಲಿರುವ ಕುತೂಹಲವಾಗಿದೆ.

The post ಯುವ ಕ್ರಿಕೆಟಿಗರ ಪಾಲಿಗೆ ರಾಹುಲ್ ದ್ರಾವಿಡ್ ‘ಮಹಾನ್​​ ಗುರು’ appeared first on News First Kannada.

Source: newsfirstlive.com

Source link