ಯುವ ಪ್ರತಿಭೆಗಳ “ಜಾಡಘಟ್ಟ” ಸಿನಿಮಾದ ಆಡಿಯೋ ರಿಲೀಸ್​​​; ಹೇಗಿವೆ ಗೊತ್ತಾ ಸಾಂಗ್ಸ್​?


ಚಂದನವನಕ್ಕೆ ಬಹುತೇಕ ಯುವ ಪಡೆಗಳ ಸದ್ದು ಜೋರಾಗಿಯೇ ನಡೆಯುತ್ತಿದೆ. ಬಣ್ಣದ ಬದುಕು ಎಲ್ಲರನ್ನು ಆಕರ್ಷಿಸುತ್ತದೆ. ಆದರೆ ಕೆಲವರನ್ನು ಮಾತ್ರ ತನ್ನತ್ತ ಸೆಳೆಯುತ್ತದೆ. ಆ ಸಾಲಿಗೆ ಈ ಯುವ ಪಡೆಗಳು ಸೇರ್ಪಡೆಯಾಗುವ ಮೂಲಕ ನಾವು ಕೂಡ ಒಂದು ವಿಭಿನ್ನ ಚಿತ್ರವನ್ನ ಮಾಡಿದ್ದಾರೆ.. ಹಾಗಾಗ್ರೆ ಯಾವ ಚಿತ್ರವದು ಅನ್ನೋ ಪ್ರಶ್ನೆಗೆ ಉತ್ತರ.. “ಜಾಡಘಟ್ಟ”..

ಕೆಲ ದಿನಗಳ ಹಿಂದೆ ಜಾಡಘಟ್ಟ ಚಿತ್ರದ ಆಡಿಯೋ ಲಾಂಚ್ ಆಗಿದೆ.. ಚಿತ್ರರಂಗದಲ್ಲಿ ಸುಮಾರು ಹತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಸಂಕಲನಕಾರನಾಗಿ ಕಿರುತೆರೆ ಹಾಗೂ ಬೆಳ್ಳಿಪರದೆಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವಂತಹ ಯುವ ಪ್ರತಿಭೆ ಎಸ್. ರಘು..
ಈ ಜಾಡಘಟ್ಟ ಚಿತ್ರಕ್ಕೆ ಕಥೆ , ಚಿತ್ರಕಥೆ , ಸಂಭಾಷಣೆ, ಸಂಕಲನ , ನಿರ್ದೇಶನದ ಜತೆಗೆ ನಾಯಕ ನಟನಾಗಿ ಬೆಳ್ಳಿಪರದೆ ಮೇಲೆ ರಘು ಜಾಡ ಘಟ್ಟ ಪ್ರಥಮ ಬಾರಿಗೆ ಮಿಂಚಲು ಹೊರಟಿರುವುದು ಮತ್ತೊಂದು ವಿಶೇಷ.

ಜಾಡಘಟ್ಟ ಎಂಬ ಪದ ಕೇಳಿದಾಕ್ಷಣ ನೆನಪಿಗೆ ಬರುವುದು ಇದು ಯಾವುದಾದರ ಊರು ಎಂಬ ಪ್ರಶ್ನೆ ಬರುವುದು ಸಹಜ. ಹೌದು ಇದು ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿರುವ ಜಾಡ ಘಟ್ಟ ಎಂಬ ಊರು. ಆ ಊರಿನ ಸುತ್ತ ಬರೀ ಬೆಟ್ಟಗಳೇ ಆವರಿಸಿಕೊಂಡಿದೆಯಂತೆ. ಅದು ಚಿತ್ರೀಕರಣಕ್ಕೆ ಸೂಕ್ತವಾದ ಸ್ಥಳ ಎಂದು ನಿರ್ಧರಿಸಿ ನೈಜ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಈ ಚಿತ್ರವನ್ನ ಮಾಡಿದ್ದಾರಂತೆ. ಇದೊಂದು ಕೌಟುಂಬಿಕ ಚಿತ್ರವಾಗಿದ್ದು ತಂದೆ ಮಗನ ಬಾಂಧವ್ಯ, ಪ್ರೀತಿಯ ಸಿಂಚನ , ಗೆಳೆತನ ಹೀಗೆ ಎಲ್ಲಾ ಅಂಶಗಳನ್ನು ಒಳಗೊಂಡಿರುವಂತಹ ಚಿತ್ರ ಇದಾಗಿದೆಯಂತೆ. ಈ ಚಿತ್ರದಲ್ಲಿ ಒಟ್ಟು 4 ಹಾಡುಗಳಿದ್ದು ಅಭಿಷೇಕ್. ಜಿ. ರಾಯ್ ಸಂಗೀತವನ್ನು ನೀಡಿದ್ದಾರೆ. ಬೃಂದಾವನ ಆಡಿಯೋ ಸಂಸ್ಥೆ ಮೂಲಕ ಚಿತ್ರದ ಹಾಡುಗಳು ಲೋಕಾರ್ಪಣೆಗೊಂಡಿವೆ.

ಈ ಜಾಡಘಟ್ಟ ಚಿತ್ರವನ್ನು ಶಶಿಮಣಿ ಎಂಬ ನಿರ್ಮಾಪಕಿ ನಿರ್ಮಿಸಿದ್ದಾರೆ. ಇವರು ನಟ , ನಿರ್ದೇಶಕ ರಘು ರವರ ಸೋದರಿ ಕೂಡ ಹೌದು. ಚಿತ್ರರಂಗದಲ್ಲಿ ತಮ್ಮ ಸಹೋದರ ಬೆಳೆಯಲಿ ಎಂಬ ಆಸೆಯಿಂದ ಈ ಚಿತ್ರವನ್ನು ನಿರ್ಮಿಸಿದ್ದು , ಹಾಗೆಯೇ ನಾಲ್ವರಿಗೆ ಅವಕಾಶ ನೀಡುವುದರ ಜೊತೆಗೆ ಇಡೀ ಚಿತ್ರ ತಂಡಕ್ಕೆ ಬೆನ್ನೆಲುಬಾಗಿ ನಿಂತು ತಾವು ಕೂಡಾ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರಂತೆ. ಈ ಚಿತ್ರದಲ್ಲಿ ಯುವ ಪ್ರತಿಭೆ ಸುಹಾನ. ಎಸ್ ನಾಯಕಿಯಾಗಿ ಕಾಣಿಸಿಕೊಂಡಿದ್ದು , ಅವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿರಲಿಲ್ಲ.

ಇನ್ನು ಈ ಚಿತ್ರಕ್ಕೆ ಪ್ರದೀಪ್ ಜೈನ್ ಛಾಯಾಗ್ರಹಣ ಮಾಡಿದ್ದು , ಲಕ್ಷ್ಮೀಕಾಂತ್ ವಸ್ತ್ರ ವಿನ್ಯಾಸ ಮಾಡಿದ್ದಾರೆ. ಗಾಯಕ ಶಶಾಂಕ್ ಶೇಷಗಿರಿ ಈ ಚಿತ್ರಕ್ಕಾಗಿ ಒಂದು ಹಾಡನ್ನು ಹಾಡಿದ್ದಾರೆ. ಯುವ ಪ್ರತಿಭೆ ಚಂದ್ರು ಖಳನಾಯಕ ನಾಗಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ದಾರೆ. ಈ ಚಿತ್ರಕ್ಕೆ ಲಕ್ಷ್ಮೀಕಾಂತ್ ವಸ್ತ್ರ ವಿನ್ಯಾಸ ಮಾಡಿದ್ದು, ಅರ್ಜುನ್ ಸಹ ನಿರ್ದೇಶನವಿದೆ.

ಇದನ್ನೂ ಓದಿ:‘ಲಕ್ಷ್ಯ’ ಟ್ರೈಲರ್ ಲಾಂಚ್ ಮಾಡಿದ ಪವನ್ ಒಡೆಯರ್ -ಚಿತ್ರದ ಸ್ಪೆಷಲ್ ಏನು ಗೊತ್ತಾ..?

ಯುವ ಪ್ರತಿಭೆಗಳು ಸೇರಿಕೊಂಡು ನಿರ್ಮಾಣ ಮಾಡಿರುವ ಈ ಚಿತ್ರವು ಶಶಿಮಣಿ ಪ್ರೊಡಕ್ಷನ್ಸ್ ಮೂಲಕ ಸಿದ್ಧವಾಗಿದೆ. ಸದ್ಯ ಚಿತ್ರ ತನ್ನ ಎಲ್ಲಾ ಕೆಲಸಗಳನ್ನು ಮುಗಿಸಿಕೊಂಡು ಬಿಡುಗಡೆ ಹಂತವನ್ನು ತಲುಪಿದೆ. ಈಗ ಚಿತ್ರತಂಡ ಲಿರಿಕಲ್ ವಿಡಿಯೋ ವನ್ನ ಬಿಡುಗಡೆ ಮಾಡುವ ಮೂಲಕ ಪ್ರಚಾರ ಕಾರ್ಯವನ್ನು ಆರಂಭಿಸಿದೆ.

News First Live Kannada


Leave a Reply

Your email address will not be published. Required fields are marked *