Notice: Trying to access array offset on value of type bool in /home/savikannada/public_html/wp-content/plugins/featured-image-from-URL-premium/includes/attachment.php on line 89

Notice: Trying to access array offset on value of type bool in /home/savikannada/public_html/wp-content/plugins/featured-image-from-URL-premium/includes/attachment.php on line 90

ಭಾರತ-ನ್ಯೂಜಿಲೆಂಡ್​ ನಡುವಿನ ಮಹತ್ವದ ಟೆಸ್ಟ್​ ಫೈಟ್​​ಗೆ 8 ದಿನ ಮಾತ್ರ ಬಾಕಿ. ಇಂಗ್ಲೆಂಡ್​ನಲ್ಲಿ ಕ್ವಾರಂಟೀನ್​ ಅವಧಿಯನ್ನ ಮುಗಿಸಿ ನಿನ್ನೆ ಅಂಗಳಕ್ಕಿಳದಿದ್ದ ಟೀಮ್​ಇಂಡಿಯಾ, ಇಂದಿನಿಂದ ಪೂರ್ಣ ಪ್ರಮಾಣದಲ್ಲಿ ಅಭ್ಯಾಸ ನಡೆಸೋ ಯೋಜನೆಯಲ್ಲಿದೆ. ಅದರಲ್ಲೂ ಪ್ಲೇಯಿಂಗ್​ ಇಲೆವೆನ್​ ಆಯ್ಕೆ ಕಗ್ಗಂಟಾಗಿರುವ ಹಿನ್ನೆಲೆಯಲ್ಲಿ ಟೀಮ್​ ಮ್ಯಾನೇಜ್​ಮೆಂಟ್​ ಪ್ರಾಕ್ಟೀಸ್​ ಸೆಷನ್​ಗಳನ್ನೇ ಸೆಲೆಕ್ಷನ್​​ಗೆ ಮಾನದಂಡವಾಗಿ ರೂಪಿಸಲು ಮುಂದಾಗಿದೆ.

ಸೌತ್​​ಹ್ಯಾಂಪ್ಟನ್​​ನಲ್ಲಿಂದು ವೇಗಿಗಳ ಆಡಿಷನ್​
ಮೊಹಮ್ಮದ್​ ಸಿರಾಜ್​ ಸೆಂಟರ್​ ಆಫ್​ ಅಟ್ರ್ಯಾಕ್ಷನ್​

ಯೆಸ್​..! ಇಂದು ನಡೆಯೋ ಫ್ರಾಕ್ಟಿಸ್​ ಸೆಷನ್​ ವೇಗಿಗಳ ಪಾಲಿಗೆ ಆಡಿಷನ್​. ಇರೋ ಆರು ವೇಗಿಗಳ ಪೈಕಿ ಬೆಸ್ಟ್​ ತ್ರಿ ಯಾವುದು ಅನ್ನೋ ಪ್ರಶ್ನೆಗೆ ಉತ್ತರ ಕಂಡುಕೊಳ್ಳೋದು ಕೊಹ್ಲಿ-ಶಾಸ್ತ್ರಿ ಪ್ಲ್ಯಾನ್​ ಆಗಿದೆ. ಇಷ್ಟು ದಿನ ಜಸ್​​ಪ್ರಿತ್​ ಬೂಮ್ರಾ, ಇಶಾಂತ್​ ಶರ್ಮಾ ಹಾಗೂ ಮೊಹದಮ್​ ಶಮಿ ಈ ಮೂವರ ಕಾಂಬಿನೇಷನ್​ನಲ್ಲಿ ಭಾರತ ಕಣಕ್ಕಿಳಿಯಲಿದೆ ಎನ್ನಲಾಗಿತ್ತು. ಆದ್ರೀಗ ಪೈಪೋಟಿ ಎದುರಾಗಿದೆ. ಟೀಮ್​ ಮ್ಯಾನೇಜ್​ಮೆಂಟ್​ನ ಮೂಲಗಳೇ ಹೇಳುವಂತೆ, ಮೊಹಮದ್​ ಸಿರಾಜ್​ ಈ ಆಡಿಷನ್​ ಸೆಂಟರ್​ ಆಫ್​ ಅಟ್ರಾಕ್ಷನ್​ ಅಂತೇ…!

ಅನುಭವಿ ಇಶಾಂತ್​ ಔಟ್​, ಯುವ ವೇಗಿಗೆ ಚಾನ್ಸ್​.?

ಯೆಸ್​​..! ಮೊಹಮದ್​ ಶಮಿ, ಜಸ್​ಪ್ರೀತ್​ ಬೂಮ್ರಾ ಇಬ್ಬರ ಸ್ಥಾನ ಬಹುತೇಕ ಫಿಕ್ಸ್ ಆಗಿದೆ ಎಂದೇ ಹೇಳಲಾಗ್ತಿದೆ. ಹೀಗಾಗಿ ಇದೀಗ ಅನುಭವಿ ಇಶಾಂತ್​, ಯುವ ಸಿರಾಜ್​ ನಡುವೆ ಪೈಪೋಟಿ ಏರ್ಪಟ್ಟಿದೆ ಎನ್ನಲಾಗ್ತಿದೆ. ಆದ್ರೆ, 2011,2014 ಹಾಗೂ 2018 ಈ ಮೂರು ಪ್ರವಾಸಗಳಲ್ಲಿ ಇಂಗ್ಲೆಂಡ್​ ನೆಲದಲ್ಲಿ ಆಡಿದ ಅನುಭವವಿರುವ ಇಶಾಂತ್​ಗೆ ಕೊಕ್​ ನೀಡ್ತಾರಾ ಅನ್ನೋ ಪ್ರಶ್ನೆಯೂ ಉದ್ಭವಿಸಿದೆ. ಅದಲ್ಲದೇ ಟೆಸ್ಟ್​ ಚಾಂಪಿಯನ್​ಶಿಪ್​ ಟೂರ್ನಿಯಲ್ಲೂ ಇಶಾಂತ್​ ಪ್ರದರ್ಶನ ಉತ್ತಮವಾಗೇ ಇದೆ.

WTC ಟೂರ್ನಿಯಲ್ಲಿ ಇಶಾಂತ್​ ಶರ್ಮಾ
ಇನ್ನಿಂಗ್ಸ್​​           20
ಓವರ್​            218
ರನ್​               625
ವಿಕೆಟ್​            36

ಚಾಂಪಿಯನ್​ಶಿಪ್​ ಟೂರ್ನಿಯಲ್ಲಿ ಸಾಲಿಡ್​​ ಪರ್ಫಾಮೆನ್ಸ್..!
ಆದ್ರೂ ಯಾಕೆ ಮಹತ್ವದ ಫೈನಲ್​ ಪಂದ್ಯದಲ್ಲಿ ಕೊಕ್​​.?

ಟೆಸ್ಟ್​​ ಚಾಂಪಿಯನ್​ಶಿಪ್​ ಟೂರ್ನಿಯಲ್ಲಿ ಇಶಾಂತ್​ ಶರ್ಮಾ ಸಾಲಿಡ್​ ಪರ್ಫಾಮೆನ್ಸ್​ನೀಡಿದ್ದಾರೆ. ಜೊತೆಗೆ 101 ಟೆಸ್ಟ್​ ಪಂದ್ಯ ಆಡಿದ ಅನುಭವೂ ಇದೆ. ಇಷ್ಟೇ ಅಲ್ಲ..! ಆಂಗ್ಲರ ನಾಡಲ್ಲಿ 3 ಪ್ರವಾಸಗಳಲ್ಲಿ 12 ಪಂದ್ಯಗಳಲ್ಲಿ ಬೌಲಿಂಗ್​ ಮಾಡಿದ ಅನುಭವವೂ ಇದೆ. ಹಾಗಿದ್ದೂ ಇಶಾಂತ್​ಗೆ ಸ್ಥಾನ ಯಾಕಿಲ್ಲ ಅನ್ನೋದು ನಿಮ್ಮ ಪ್ರಶ್ನೆಯಾಗಿರಬಹುದು. ಅದಕ್ಕೆ ಕೊಹ್ಲಿ ಆ್ಯಂಡ್​ ರವಿಶಾಸ್ತ್ರಿ ಉತ್ತರ ಫಿಟ್​ನೆಸ್​​ ಆನ್ನೋದಾಗಿದೆ.

ಇತ್ತಿಚೆಗಷ್ಟೇ ಆ್ಯಂಕಲ್​ ಇಂಜುರಿಯಿಂದ ಸುಧಾರಿಸಿಕೊಂಡಿರುವ ಡೆಲ್ಲಿ ವೇಗಿ ಲಾಂಗ್​ ಸ್ಪೆಲ್​ಗಳನ್ನ ಮಾಡೋಕೆ ಸಾಧ್ಯಾನಾ ಅನ್ನೋದು ಮೊದಲ ಪ್ರಶ್ನೆಯಾಗಿದೆ. ಅದಲ್ಲದೇ ಅನುಭವಿ ಇಶಾಂತ್​ ಶರ್ಮಾಗೀಗ 33 ವರ್ಷ..!! ಇದು ಮ್ಯಾಚ್​ ಫಿಟ್​ನೆಸ್​ ಮೇಲೆ ಅನುಮಾನ ಮೂಡುವಂತೆ ಮಾಡಿದೆ. ಹೀಗಾಗಿ ಕಳೆದೊಂದು ದಶಕದಿಂದ ಲಾಂಗ್​ ಸ್ಪೆಲ್​ ಮಾಡ್ತಾ ಇರೋ ಇಶಾಂತ್​ಗೆ ವಿಶ್ರಾಂತಿ ನೀಡಿ, ಸಿರಾಜ್​ಗೆ ಅವಕಾಶ ನೀಡೋದು ಮ್ಯಾನೇಜ್​ಮೆಂಟ್​ ಪ್ಲಾನ್​..!

ಇದೀಷ್ಟೇ ಅಲ್ಲ..! ಕಳೆದ ಆಸ್ಟ್ರೇಲಿಯಾ ಪ್ರವಾಸದ ಬಳಿಕ ಎತ್ತಿರುವ 2.0 ಅವತಾರ ಸಿರಾಜ್​ಗೆ ಪ್ಲಸ್​ ಪಾಯಿಂಟ್​ ಆಗಿದೆ. ಇದಲ್ಲದೇ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಟೂರ್ನಿಯಲ್ಲಿ ಸಿರಾಜ್ ನೀಡಿರುವ ​ಪರ್ಫಾಮೆನ್ಸ್​ ಕೂಡ ಆಯ್ಕೆಗೆ ಮಾನದಂಡವಾಗಿದೆ.

WTC ಟೂರ್ನಿಯಲ್ಲಿ ಮೊಹಮ್ಮದ್ಸಿರಾಜ್​
ಇನ್ನಿಂಗ್ಸ್​​           10
ಓವರ್​           160.2
ರನ್​                452
ವಿಕೆಟ್​             16

ಕರಿಯರ್​ ಆರಂಭದಲ್ಲಿ ದುಬಾರಿ ಸ್ಪೆಲ್​ ಮಾಡ್ತಿದ್ದ ಸಿರಾಜ್​, 13ನೇ ಆವೃತ್ತಿ ಐಪಿಎಲ್​ನಲ್ಲಿ ವಿಕೆಟ್​ ಟೇಕರ್​ ಆಗಿ ಬದಲಾದ್ರು. ಬಳಿಕ ಇದೇ ಇಶಾಂತ್​ ಅಲಭ್ಯತೆಯಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲೂ ಮೋಡಿ ಮಾಡಿದ್ರು. ಇದೀಗ ಅರ್ಧಕ್ಕೆ ನಿಂತ 14ನೇ ಆವೃತ್ತಿ ಐಪಿಎಲ್​ನಲ್ಲೂ ಸಾಲಿಡ್​ ಪರ್ಫಾಮೆನ್ಸ್​ ನೀಡಿದ್ದಾರೆ. ಈ ಅಂಶಗಳೇ ಸಿರಾಜ್ ಮೇಲೆ ಕೋಚ್​-ಕ್ಯಾಪ್ಟನ್​ ಒಲವಿಗೆ ಕಾರಣ ಎನ್ನಲಾಗ್ತಿದೆ. ​

ಅಂಕಿ-ಅಂಶಗಳನ್ನ ಗಮನಿಸಿದ್ರೆ, ಇಬ್ಬರೂ ಸಮಭಲದ ಪ್ರದರ್ಶನ ನೀಡಿದ್ದಾರೆ. ಆದ್ರೆ ಸಿರಾಜ್​ಗೆ ಯಂಗ್​ ವೆಪನ್​ ಅನ್ನೋ ಟ್ಯಾಗ್​ಲೈನ್​ ಇದ್ರೆ, ಇಶಾಂತ್​ಗೆ ​ಅನುಭವಿ ಅನ್ನೋ ಕೋಟಾ ಇದೆ. ಹೀಗಾಗಿ ಯಂಗ್​ VS ಎಕ್ಸ್​​ಪೀರಿಯನ್ಸ್​ ನಡುವಿನ ಫೈಟ್​ನಲ್ಲಿ ಯಾರಿಗೆ ಅವಕಾಶ ಸಿಗಲಿದೆ ಅನ್ನೋದು ಕುತೂಹಲ ಮೂಡಿಸಿದೆ.

The post ಯುವ ವೇಗಿ ಮೊಹಮ್ಮದ್ ಸಿರಾಜ್​ಗಾಗಿ ಸ್ಥಾನ ಬಿಟ್ಟುಕೊಡ್ತಾರಾ ಇಶಾಂತ್ ಶರ್ಮಾ..? appeared first on News First Kannada.

Source: newsfirstlive.com

Source link

Leave a Reply

You missed