ಬೆಂಗಳೂರು: ಯೂಥ್ ಕಾಂಗ್ರೆಸ್ ಚುನಾವಣೆಯಲ್ಲಿ ಹ್ಯಾಕಿಂಗ್ ಮಾಡಿ ಆನ್ಲೈನ್ ಮೂಲಕ ವೋಟ್ ಮಾಡಿದ್ರೆ ಒಬ್ಬರಿಗೆ ಹೋಗುವಂತೆ ಮಾಡಿದ್ದರು ಎಂದು ಕಾಂಗ್ರೆಸ್ ನಾಯಕರೇ ನನಗೆ ಹೇಳಿದ್ರು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಈ ನಡುವೆ ಗೃಹ ಸಚಿವರ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ, ಹೋಂ ಮಿನಿಸ್ಟರ್ ಗೆ ಮಾಡೋಕೆ ಬೇರೆ ಕೆಲ್ಸಾ ಇಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ.
ಗೃಹ ಸಚಿವರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡದ ಪ್ರಿಯಾಂಕ್ ಖರ್ಗೆ, ಹೋಂ ಮಿನಿಸ್ಟರ್ ಗೆ ಮಾಡೋಕೆ ಬೇರೆ ಕೆಲ್ಸಾ ಇಲ್ವಾ..? ಬಿಟ್ ಕಾಯಿನ್ ವಿಚಾರ ಪ್ರಸ್ತಾಪ ಮಾಡಿದ ಮೇಲೆ ನನ್ನ ಹೆಸರನ್ನ ಶ್ರೀಕಿ ಜತೆ ಸೇರಿಸುತ್ತಿದ್ದಾರೆ. ಇದರ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗುತ್ತಿದ್ದೇನೆ ಎಂದರು. ಅಲ್ಲದೇ ನೀವು ಶ್ರೀಕಿ ಭೇಟಿ ಮಾಡಿದ್ರಾ ಅನ್ನೋ ಪ್ರಶ್ನೆಗೆ ಉತ್ತರಿಸಿ, ಪ್ರಶ್ನೆ ಎಲ್ಲ ನನಗೆ ಕೇಳ್ತಿರಾ.. ಬಿಜೆಪಿಗೆ ಅವರಿಗೂ ಕೇಳಿ. ದಾಖಲೆ ಹಿಡಿದು ಸುದ್ದಿಗೋಷ್ಠಿ ಮಾಡಿದರೂ ನನಗೆ ಪ್ರಶ್ನೆ ಕೇಳ್ತಿರಾ..? ಅವರಿಗೆ ಪ್ರಶ್ನೆಯೇ ಕೇಳಲ್ಲ, ಅವರನ್ನ ಪ್ರಶ್ನೆ ಮಾಡಿ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದೇ ಜಾರಿಕೊಂಡರು.