ಬೆಂಗಳೂರು:ಯೂಥ್ ಕಾಂಗ್ರೆಸ್ ಎಲೆಕ್ಷನ್ನಲ್ಲಿ ಹ್ಯಾಕಿಂಗ್ ನಡೆಸಲಾಗಿದೆ ಎಂಬ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಹೇಳಿಕೆಯನ್ನು ಗಂಭಿರವಾಗಿ ಪರಿಗಣಿಸಿರುವ ಕೈ ನಾಯಕರು ಈ ವಿಚಾರವನ್ನು ಹೈಕಮಾಂಡ್ ಗಮನಕ್ಕೆ ತರಲು ಮುಂದಾಗಿದ್ದಾರೆ ಎನ್ನಲಾಗಿದೆ.
ನೆನ್ನೆ ನ್ಯೂಸ್ಫಸ್ಟ್ ನಡೆಸಿದ ಸಂದರ್ಶನದಲ್ಲಿ ಯೂಥ್ ಕಾಂಗ್ರೆಸ್ ಎಲೆಕ್ಷನ್ನಲ್ಲಿ ಹ್ಯಾಂಕಿಗ್ ಮಾಡುವ ಮೂಲಕ ಮತದಾನ ನಡೆಸಲಾಗಿದೆ ಎಂದು ಗೃಹ ಸಚಿವರು ಆರೋಪಿಸಿದ್ದರು. ಅವರ ಈ ಆರೋಪ ಸದ್ಯ ಕಾಂಗ್ರೆಸ್ ಪಾಳಯದಲ್ಲಿ ತೀವ್ರ ಗದ್ದಲ ಎಬ್ಬಿಸಿದ್ದು ಆರೋಪದ ಪೂರ್ವಾಪರ ತಿಳಿಯುಲು ಹೈಕಮಾಂಡ್ಗೆ ತಿಳಿಸಲು ಚಿಂತನೆ ನಡೆಸಿದ್ದಾರೆ ಎಂಬ ಮಾತುಗಳಿ ಕೇಳಿ ಬರುತ್ತಿವೆ.
ಇದನ್ನೂ ಓದಿ:ಶ್ರೀಕಿ ಬಳಸಿ ಯೂಥ್ ಕಾಂಗ್ರೆಸ್ ಚುನಾವಣೆ ಹ್ಯಾಕ್; ನಲಪಾಡ್ ವಿರುದ್ಧ ಗೃಹ ಸಚಿವ ಸ್ಫೋಟಕ ಹೇಳಿಕೆ
ಸದ್ಯ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿರುವ ಬಿಟ್ ಕಾಯಿನ್ ವಿಚಾರದಲ್ಲಿ ಕೈ ನಾಯಕರು ತಲೆ ಕೆಡಿಸಿಕೊಂಡಿದ್ದಾರೆ. ಈ ವೇಳೆಯಲ್ಲಿ ಗೃಹ ಸಚಿವರ ಈ ಆರೋಪ ಕಾಂಗ್ರೆಸ್ ನಾಯಕರಿಗೆ ಮುಜುಗರ ತಂದಿದಿಟ್ಟಿದೆ. ಹೀಗಾಗಿ ಯೂಥ್ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ ನಿಜವಾಗಿಯೂಹ್ಯಾಕಿಂಗ್ ಮಾಡಲಾಗಿತ್ತಾ? ಈ ಕುರಿತು ಸಂಪೂರ್ಣ ತನಿಖೆ ಮಾಡಿಸಬೇಕು. ಈ ವಿಚಾರದಲ್ಲಿ ಹೈಕಮಾಂಡ್ ಮಧ್ಯ ಪ್ರವೇಶಿಸಬೇಕೆಂದು ಕೈ ನಾಯಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ:‘ಸಿದ್ದರಾಮಯ್ಯ ಮಾತನಾಡುವಾಗ ಜೈಕಾರ ಹಾಕಿದ್ದಾರೆ ಅಷ್ಟೇ’ ಜಮೀರ್ ಡ್ಯಾಮೇಜ್ ಕಂಟ್ರೋಲ್
ಇದನ್ನೂ ಓದಿ:ಶ್ರೀಕಿ ಬಳಸಿ ಯೂಥ್ ಕಾಂಗ್ರೆಸ್ ಚುನಾವಣೆ ಹ್ಯಾಕ್; ನಲಪಾಡ್ ವಿರುದ್ಧ ಗೃಹ ಸಚಿವ ಸ್ಫೋಟಕ ಹೇಳಿಕೆ
The post ಯೂಥ್ ಕಾಂಗ್ರೆಸ್ ಎಲೆಕ್ಷನ್ ಹ್ಯಾಕಿಂಗ್ ವಿಚಾರ: ‘ಹೈ’ ಗಮನಕ್ಕೆ ತರಲು ಮುಂದಾದ ‘ಕೈ’ ಲೀಡರ್ಸ್ appeared first on News First Kannada.