‘ಯೂನಿಫಾರ್ಮ್ ಇದ್ದಾಗ ಅದನ್ನೇ ಧರಿಸಬೇಕು’ ಕರ್ನಾಟಕ ಸರ್ಕಾರಕ್ಕೆ ಆದಿತ್ಯ ಠಾಕ್ರೆ ಬೆಂಬಲ;


‘ಶಾಲೆಗಳಲ್ಲಿ ನಿಗದಿಪಡಿಸಿದ ಯುನಿಫಾರ್ಮ್​ಗಳನ್ನೆ ಧರಿಸಬೇಕು, ಇದು ವಿದ್ಯಾರ್ಥಿಗಳ ಕರ್ತವ್ಯ’ಎಂದು ಮಹಾರಾಷ್ಟ್ರದ ಸಚಿವ ಆದಿತ್ಯಾ ಠಾಕ್ರೆ ರಾಜ್ಯದಲ್ಲಿ ಭುಗಿಲೆದ್ದಿರುವ ಸಮವಸ್ತ್ರ ವಿವಾದದ ಕುರಿತು ಪ್ರತಿಕ್ರಿಯಿಸಿದ್ದಾರೆ.

ಶಾಲೆ-ಕಾಲೇಜುಗಳಲ್ಲಿ ನಿಗದಿತ ಸಮವಸ್ತ್ರವಿದ್ದರೆ ಅದನ್ನು ವಿದ್ಯಾರ್ಥಿಗಳು ಅನುಸರಿಸಲೇ ಬೇಕು. ಶಿಕ್ಷಣ ಕೇಂದ್ರಗಳಲ್ಲಿ ಶಿಕ್ಷಣ ಮಾತ್ರ ಕೇಂದ್ರೀಕೃತವಾಗಿರಬೇಕು ಹೊರತು, ರಾಜಕೀಯ ಧಾರ್ಮಿಕ ವಿಚಾರಗಳಲ್ಲ. ಇಂತಹ ವಿಚಾರಗಳನ್ನು ವಿದ್ಯಾ ಮಂದಿರಗಳಿಗೆ ಎಳೆದೊಯ್ಯುವ ಯತ್ನ ನಡೆಸಬಾರದು ಎಂದು ಆದಿತ್ಯ ಠಾಕ್ರೆಸ ಹಿಜಾಬ್​ ವಿಚಾರಚಾಗಿ ರಾಜ್ಯ ಸರ್ಕಾರದ ಪರ ಬ್ಯಾಟ್​ ಬೀಸಿದ್ದಾರೆ.

ಇವತ್ತಿಗೆ ಮುಂದೂಡಲಾಗಿದ್ದ ಹಿಜಾಬ್​ ಪ್ರಕರಣವನ್ನು ಹೋಕೋರ್ಟ್​ನ ಏಕಸದಸ್ಯ ಪೀಠ ಇಂದು ವಿಚಾರಣೆ ನಡೆಸಿದೆ. ಮಧ್ಯಾಹ್ನದ ನಂತರ ವಿಚಾರಣೆ ನಡೆಸಿದ ನ್ಯಾಯಾಲಯ ಅಂತಿಮವಾಗಿ ಈ ವಿವಾದವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಿ ಆದೇಶ ಹೊರಡಿಸಿದೆ.

News First Live Kannada


Leave a Reply

Your email address will not be published.