ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಏರಿಕೆಯಾಗುತ್ತಿರುವುದರ ಜೊತೆ ಜೊತೆಗೆ ಆಕ್ಸಿಜನ್ ಮತ್ತು ಕೆಲವು ಮೆಡಿಸಿನ್ ಕೊರತೆ ಎದುರಾದ ಹಿನ್ನೆಲೆ ವಿದೇಶಗಳು ಭಾರತಕ್ಕೆ ಸಹಾಯ ಮಾಡಲು ಮುಂದಾಗಿವೆ.

ಯೂರೋಪ್ ರಾಷ್ಟ್ರಗಳ ಒಕ್ಕೂಟವೂ ಸಹ ಭಾರತಕ್ಕೆ ಆಕ್ಸಿಜನ್ ಮತ್ತು ಮೆಡಿಸಿನ್​ಗಳನ್ನು ಕಳುಹಿಸಲು ಮುಂದಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ಯೂರೋಪ್ ಒಕ್ಕೂಟ ರಾಷ್ಟ್ರಗಳ ಎಮರ್ಜೆನ್ಸಿ ರೆಸ್ಪಾನ್ಸ್ ಕೋಆರ್ಡಿನೇಟರ್.. ಜನೇಜ್ ಲೆನಾರ್ಕಿಕ್.. ಭಾರತದ ಬೇಡಿಕೆಯ ಮೇರೆಗೆ ನಾವು ಇಯು ಸಿವಿಲ್ ಪ್ರೊಟೆಕ್ಷನ್ ಮೆಕ್ಯಾನಿಸಂನ್ನು ಆಕ್ಟಿವೇಟ್ ಮಾಡಿದ್ದೇವೆ. ಯೂರೋಪ್​ ಭಾರತದ ಜನರನ್ನು ಬೆಂಬಲಿಸಲು ತನ್ನಿಂದಾದ ಎಲ್ಲ ನೆರವು ನೀಡಲು ಸಿದ್ಧರಿದ್ದೇವೆ. ನಮ್ಮ ಇಆರ್​ಸಿಸಿ ಈಗಾಗಲೇ ಆಕ್ಸಿಜನ್ ಮತ್ತು ಮೆಡಿಸಿನ್​ನ್ನು ನಿರಂತರವಾಗಿ ಪೂರೈಸಲು ಸಿದ್ಧತೆ ನಡೆಸುತ್ತಿದೆ ಎಂದು ಹೇಳಿದ್ದಾರೆ.

The post ಯೂರೋಪ್​ನಿಂದಲೂ ಭಾರತಕ್ಕೆ ಆಕ್ಸಿಜನ್, ಮೆಡಿಸಿನ್ ಪೂರೈಕೆ.. ಸಿದ್ಧತೆ ನಡೆದಿದೆ ಎಂದ EU appeared first on News First Kannada.

Source: News First Kannada
Read More