ಬೆಂಗಳೂರು: ಯೋಗಾಭ್ಯಾಸದ ಮೂಲಕ ಇಡೀ ವಿಶ್ವವೇ ಮೆಚ್ಚುವಂತ ಸಾಧನೆಯನ್ನ ನಮ್ಮ ಕನ್ನಡದ ಬಾಲಕ ಮಾಡಿದ್ದಾನೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಾಸವಾಗಿರೋ ಯೋಗ ಯಶವಂತ್ 13 ವರ್ಷಕ್ಕೆ ಯೋಗದಲ್ಲಿ ಗಿನ್ನಿಸ್ ದಾಖಲೆ ಮಾಡಿರೋ ಏಕೈಕ ಬಾಲಕ ಎಂಬ ಕೀರ್ತಿಗೆ ಪಾತ್ರನಾಗಿದ್ದಾನೆ.

ಚಿಕ್ಕ ವಯಸ್ಸಿನಲ್ಲೇ ಯೋಗ ವಿಶ್ವ ಚಾಂಪಿಯನ್ ಎಂಬ ಬಿರುದು ಯಶವಂತ್ ಪಡೆದಿದ್ದಾನೆ. ದೇಶ ವಿದೇಶಗಳಲ್ಲಿ ಯೋಗ ಪ್ರದರ್ಶನ ಮಾಡುವ ಮೂಲಕ ಎಲ್ಲರ ಮನಸ್ಸನ್ನು ಕಾದಿದ್ದಾನೆ. ಯೋಗದಿಂದ ಆರೋಗ್ಯವನ್ನ ಕಾಪಾಡಬಹದು. ಅದರಲ್ಲೂ ಈಗಿರೋ ಕೊರೊನಾದಿಂದ ದೂರವಿರಲು ದೇಹದಲ್ಲಿ ಇಮ್ಯುನಿಟಿ ಪವರ್ ಹೆಚ್ಚು ಮಾಡಲು ಯೋಗ ಅತ್ಯಂತ ಹೆಚ್ಚು ಸಹಾಯಕವಾಗಿದೆ. ಬಾಲ್ಯದಲ್ಲೇ ಡಾ. ರಾಜ್‍ಕುಮಾರ್ ಅಭಿನಯದ ಕಾಮನಬಿಲ್ಲು ಚಿತ್ರದಿಂದ ಪ್ರೇರಣೆ ಹೊಂದಿ ಯೋಗಾಭ್ಯಾಸ ಶುರು ಮಾಡಿದ ಯಶವಂತ್ ಇಂದು ಯೋಗದಲ್ಲಿ ವಿಶೇಷ ಸಾಧನೆ ಮಾಡಿದ್ದಾನೆ.

ಯೋಗದಲ್ಲಿ 180ಕ್ಕೂ ಹೆಚ್ಚು ಬಹುಮಾನ ಪಡೆದಿರುವ ಯಶವಂತ್ ಸಾಧನೆ ನೋಡಿ ತಂದೆ ತಾಯಿ ಕೂಡ ಯೋಗಾಭ್ಯಾಸ ಶುರು ಮಾಡಿಕೊಂಡಿದ್ದಾರೆ. ಯೋಗ ದಿನಚಾರಣೆಯಾಗಿರೋ ಇಂದು ಯಶವಂತ್ ನಂತೆ ನಮ್ಮ ಪುಟಾಣಿ ಮಕ್ಕಳು ಯೋಗದ ಬಗ್ಗೆ ತಿಳಿದು ಯೋಗಾಭ್ಯಾಸ ಮಾಡಿದ್ರೇ ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಲಿದೆ.

The post ಯೋಗದಲ್ಲಿ ವಿಶೇಷ ಸಾಧನೆಗೈದ ಬಾಲಕ appeared first on Public TV.

Source: publictv.in

Source link