ಯೋಗಿ ಆದಿತ್ಯನಾಥ್​ರನ್ನು ಸಿಎಂ ಪಟ್ಟದಿಂದ ಇಳಿಸಿದರೆ ಕೋಪಗೊಳ್ಳುತ್ತಾರೆ ಎಂದ ಬಿಜೆಪಿ ಮಾಜಿ ಶಾಸಕ | Uttar Pradesh CM Yogi Adityanath will become sadhu if loses election says BJP Ex MLA


ಯೋಗಿ ಆದಿತ್ಯನಾಥ್​ರನ್ನು ಸಿಎಂ ಪಟ್ಟದಿಂದ ಇಳಿಸಿದರೆ ಕೋಪಗೊಳ್ಳುತ್ತಾರೆ ಎಂದ ಬಿಜೆಪಿ ಮಾಜಿ ಶಾಸಕ

ಸಿಎಂ ಯೋಗಿ ಆದಿತ್ಯನಾಥ್​

ಬಲ್ಲಿಯಾ: ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಹಾಗೂ ಮಾಜಿ ಶಾಸಕ ರಾಮ್ ಇಕ್ಬಾಲ್ ಸಿಂಗ್ ಇದೀಗ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ವಿರುದ್ಧ  ಅಸಮಾಧಾನ ಹೊರಹಾಕಿದ್ದಾರೆ. ಯೋಗಿ ಆದಿತ್ಯನಾಥ್​ರನ್ನು ಮುಖ್ಯಮಂತ್ರಿ ಹುದ್ದೆಯಿಂದ ತೆಗೆದುಹಾಕಿದರೆ ಅವರು ಮತ್ತೆ ಸನ್ಯಾಸಿಯಾಗಿಯೇ ಮುಂದುವರಿಯುತ್ತಾರೆ ಎಂದು ಅಣಕಿಸಿದ್ದಾರೆ. ಯೋಗಿ ಆದಿತ್ಯನಾಥ್​​ ಅವರು ಗೋರಖ್​ಪುರದ ಗೋರಖ್​ನಾಥ ದೇಗುಲದ ಪ್ರಧಾನ ಅರ್ಚಕರಾಗಿದ್ದರು.  ಅವರನ್ನು ಉಲ್ಲೇಖಿಸಿ ವಾಗ್ದಾಳಿ ನಡೆಸಿದ ರಾಮ್​ ಇಕ್ಬಾಲ್​ ಸಿಂಗ್​, ನಾನು ಆ್ಯಸಿಡ್​​ನ್ನು ಎಂದಿಗೂ ಅಮೃತ ಎಂದು ಹೇಳುವುದಿಲ್ಲ. ಯೋಗಿಯವರನ್ನು ಸಿಎಂ ಹುದ್ದೆಯಿಂದ ಕೆಳಗೆ ಇಳಿಸಿದರೆ ಖಂಡಿತ ಅವರು ಕೋಪಗೊಳ್ಳುತ್ತಾರೆ ಮತ್ತು ಹೋಗಿ ಸಾಧು ಆಗುತ್ತಾರೆ ಎಂದಿದ್ದಾರೆ. 

ಇನ್ನು ಕೃಷಿಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿರುವ ಬಗ್ಗೆ ಕೂಡ ಇಕ್ಬಾಲ್​ ಸಿಂಗ್ ಕಿಡಿಕಾರಿದ್ದಾರೆ. ದಿನನಿತ್ಯದ ಬೆಲೆ ಏರಿಕೆಯಿಂದಾಗಿ ಕೃಷಿಯೂ ದುಬಾರಿಯಾಗುತ್ತಿದೆ ಎಂದು ಆರೋಪಿಸಿದರು. ಸುಹಲ್​ದೇವ್​ ಭಾರತೀಯ ಸಮಾಜ ಪಾರ್ಟಿ ಅಧ್ಯಕ್ಷ ಓಂ ಪ್ರಕಾಶ್​ ರಾಜ್​ಭರ್​​ನನ್ನು ಹೊಗಳಿದ ರಾಮ್​ ಇಕ್ಬಾಲ್​ ಸಿಂಗ್​, ಅವರು ರಾಜಭರ್ ಸಮುದಾಯದ ಏಕೈಕ ನಾಯಕ ಎಂದು ಹೇಳಿದರು. ಬಿಜೆಪಿ ಕೇಂದ್ರ ಸಚಿವ ಅಜಯ್​ ಮಿಶ್ರಾ ಪುತ್ರ ಆಶಿಶ್​ ಮಿಶ್ರಾ ವಿರುದ್ಧ ಕೂಡ ಕಿಡಿ ಕಾರಿದರು.

ಇದನ್ನೂ ಓದಿ: ಅಪ್ಪುಗೆ ಹೃದಯದಲ್ಲಿ ಏರುಪೇರು ಆದಾಗ ಆಶ್ವಿನಿಯ ಮನಸ್ಥಿತಿ ಹೇಗಿತ್ತು ಅನ್ನೋದನ್ನ ಯೋಚಿಸಬೇಕು: ಶಿವರಾಜಕುಮಾರ್

TV9 Kannada


Leave a Reply

Your email address will not be published. Required fields are marked *