ಚಿಕ್ಕಮಗಳೂರು: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಮತ್ತೊಮ್ಮೆ ಸಿಎಂ ಆಗುವಂತೆ ಯೋಗಿ ಅಭಿಮಾನಿಗಳು ಪಾದಯಾತ್ರೆಯನ್ನ ಕೈಗೊಂಡಿದ್ದಾರೆ.
ಬೆಂಗಳೂರಿನ ಮಹಾದೇವಪುರ ಹೂಡಿ ಗ್ರಾಮದಿಂದ ಪಾದಯಾತ್ರೆಯನ್ನ ಕೈಗೊಂಡಿರುವ ಯೋಗಿ ಅಭಿಮಾನಿಗಳು, ಒಂಭತ್ತು ದಿನ ಧರ್ಮಸ್ಥಳಕ್ಕೆ 320 ಕಿಲೋಮೀಟರ್ ಪಾದಯಾತ್ರೆ ನಡೆಸಲಿದ್ದಾರೆ. ಸದ್ಯ ಈ ಪಾದಯಾತ್ರೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯನ್ನ ತಲುಪಿದೆ.
ಈ ಪಾದಯಾತ್ರೆಯಲ್ಲಿ ಬೆಂಗಳೂರು, ಹಾಸನ ಮೂಲದ 20 ಕ್ಕೂ ಹೆಚ್ಚು ಯುವಕರು ಭಾಗಿಯಾಗಿದ್ದಾರೆ. ಇನ್ನು ಯೋಗಿ ಆದಿತ್ಯನಾಥರ ಹೆಸರಲ್ಲಿ ತುಲಾಭಾರ ಮಾಡಿ ಪ್ರಸಾದ ಕಳುಹಿಸುವ ಸಂಕಲ್ಪವನ್ನ ಈ ಯುವಕರು ಮಾಡಿದ್ದಾರೆ.