ಶಿವಮೊಗ್ಗ: ಸಿ.ಪಿ.ಯೋಗೇಶ್ವರ್​ಗೆ ಸರ್ಕಾರದಲ್ಲಿ ಇರಲು ಮನಸ್ಸಿಲ್ಲದಿದ್ದರೆ ಸಂಪುಟದಿಂದ ಹೊರ ಹೋಗಬಹುದು ಅಂತಾ ಸಚಿವ ಕೆಎಸ್​ ಈಶ್ವರಪ್ಪ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಈಶ್ವರಪ್ಪ.. ಸಮಸ್ಯೆಗಳಿದ್ದರೆ 4 ಗೋಡೆಯ ಮಧ್ಯೆ ಕುಳಿತು ಮಾತನಾಡಿ ಬಗೆಹರಿಸಿಕೊಳ್ಳಲಿ. ಅದು ಬಿಟ್ಟು ದೆಹಲಿಗೆ ಹೋಗುವುದು, ಸಿಎಂ ವಿರುದ್ಧ ದೂರು ಹೇಳುವುದು ಸರಿಯಲ್ಲ. ಅವರು ಮೊದಲು ಪಕ್ಷದ ವ್ಯವಸ್ಥೆಯನ್ನು ತಿಳಿದುಕೊಳ್ಳಬೇಕು. ಪಕ್ಷ ಅವರಿಗೆ ಅಗತ್ಯ ಸ್ಥಾನಮಾನ ನೀಡಿದೆ. ಯೋಗೇಶ್ವರ್ ನನ್ನ ಒಳ್ಳೆಯ ಸ್ನೇಹಿತ. ಆದರೂ ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ ಎಂದು ಕಿಡಿಕಾರಿದರು.

ಇದರಿಂದ ನಮಗೆ ಮುಜುಗರವಾಗುತ್ತಿದೆ. ಹೋದ ಕಡೆಯಲ್ಲೆಲ್ಲಾ ಮಾಧ್ಯಮವರು ಕೇಳುತ್ತಾರೆ. ಯಡಿಯೂರಪ್ಪ ಅವರನ್ನು ಬದಲಾಯಿಸುವ ಪ್ರಶ್ನೆಯೇ ಇಲ್ಲ. ವರಿಷ್ಠರು ಇದನ್ನು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಇದು ಮೂರು ಪಕ್ಷದ ಸರ್ಕಾರ ಎಂಬ ಯೋಗೀಶ್ ಹೇಳಿಕೆ ಸರಿಯಲ್ಲ. ಸಿಎಂ ಬದಲಾವಣೆ ಬಗ್ಗೆ ಅಲ್ಲಲ್ಲಿ ಚರ್ಚೆ ನಡೆಯುತ್ತಿರುವುದನ್ನು ಸಚಿವ ಹೇಳಿದ್ದಾರೆ ಅಷ್ಟೇ. ಬಿಜೆಪಿಯಲ್ಲಿ ಅಶಿಸ್ತಿನ ಬೆಳವಣಿಗೆಯನ್ನು ಸಹಿಸುವುದಿಲ್ಲ ಎಂದರು.

The post ‘ಯೋಗೇಶ್ವರ್​ಗೆ ಮನಸ್ಸಿಲ್ಲದಿದ್ರೆ ಸಂಪುಟದಿಂದ ಹೊರ ಹೋಗಬಹುದು’- ಈಶ್ವರಪ್ಪ appeared first on News First Kannada.

Source: newsfirstlive.com

Source link