ಮೈಸೂರು: ಸಚಿವ ಸಿಪಿ ಯೋಗೇಶ್ವರ್ ಹೇಳಿಕೆ ಕೊಟ್ಟ ಮೇಲೆ ರಾಜ್ಯ ಬಿಜೆಪಿ ಸ್ವಲ್ಪ ಗೊಂದಲದಲ್ಲಿದೆ ಅಂತಾ ಹಿರಿಯ ಸಂಸದ ಶ್ರೀನಿವಾಸ್ ಪ್ರಸಾದ್ ಒಪ್ಪಿಕೊಂಡಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೊದಲು ಯತ್ನಾಳ್ ಹೀಗೆ ಗೊಂದಲ ಮೂಡಿಸಿದ್ರು. ಇದೀಗ ಸಿಪಿ ಯೋಗೇಶ್ವರ್ ಬಂದ ಮೇಲೆ‌ ಈ ಗೊಂದಲ ಮತ್ತೆ ಶುರುವಾಗಿದೆ. ಹೈಕಮಾಂಡ್ ನಾಯಕತ್ವ ಬದಲಾವಣೆ ವಿಚಾರದಲ್ಲಿ ಚರ್ಚೆ ಬೇಡ ಎಂದಿದ್ದಾರೆ. ಕಟೀಲ್ ಅವರು ಈ ಮಾತನ್ನ ಎಲ್ಲರಿಗೂ ಹೇಳಿದ್ದಾರೆ. ಹಾಗಾಗಿ ಸದ್ಯಕ್ಕೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದರು.

ಹೈಕಮಾಂಡ್ ಮೀಟ್ ಮಾಡೋಕೆ ಎಲ್ಲರು ಹೋಗಿದ್ದಾರೆ. ವಿಜಯೇಂದ್ರ, ಯೋಗೇಶ್ವರ್ ಬಗ್ಗೆ ದೂರು ಕೊಟ್ಟಿದ್ದಾರೆ. ಅದೇ ಥರ ಯೋಗೇಶ್ವರ್ ಸಹ ನಾಯಕರನ್ನ ಭೇಟಿ ಮಾಡಿದ್ದಾರೆ. ನನ್ನನ್ನು ಸಿಟಿ ರವಿ ಭೇಟಿಯಾಗಿದ್ರು. ಸೌಹಾರ್ದಯುತವಾದ ಭೇಟಿ ಅಷ್ಟೇ ಅಂತ ಅವರೇ ಹೇಳಿದ್ರು. ನಾವು ರಾಜಕಾರಣದ ಬಗ್ಗೆ ಮಾತನಾಡಿಲ್ಲ ಎಂದರು.

The post ಯೋಗೇಶ್ವರ್ ಹೇಳಿಕೆಯಿಂದ ರಾಜ್ಯ ಬಿಜೆಪಿ ಸ್ವಲ್ಪ ಗೊಂದಲದಲ್ಲಿದೆ -ಒಪ್ಪಿಕೊಂಡ ಸಂಸದ appeared first on News First Kannada.

Source: newsfirstlive.com

Source link