ಧಾರವಾಡ: ಧಾರವಾಡ ಜಿ.ಪಂ ಸದಸ್ಯ ಯೋಗೇಶ್​ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಸಿದಂತೆ ಬಂಧನಕ್ಕೊಳಗಾದ ಸೋಮು ನ್ಯಾಮಗೌಡ ಅವರನ್ನ ಒಂದು ದಿನ ಸಿಬಿಐ ವಶಕ್ಕೆ ನೀಡಿ ಬೆಂಗಳೂರು ಜನಪ್ರತಿನಿಧಿಗಳ ನ್ಯಾಯಾಲಯ ಆದೇಶ ಹೊರಡಿಸಿದೆ.

ಇವತ್ತು ಬೆಳಿಗ್ಗೆ ಸೋಮು ನ್ಯಾಮಗೌಡ ಅವರನ್ನ ಗದಗದಲ್ಲಿ ಬಂಧಿಸಲಾಗಿತ್ತು. ಇವರು ಮಾಜಿ ಸಚಿವ ವಿನಯ ಕುಲಕರ್ಣಿ ಆಪ್ತ ಕಾರ್ಯದರ್ಶಿಯಾಗಿದ್ದವರು. ಸೋಮು ನ್ಯಾಮಗೌಡಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಜನ ಪ್ರತಿನಿಧಿಗಳ ನ್ಯಾಯಾಲಯಕ್ಕೆ ಸಿಬಿಐ ಹಾಜರು ಪಡಿಸಿತ್ತು. ವಿಚಾರಣೆ ನಡೆಸಿದ ಕೋರ್ಟ್ ಒಂದು ದಿನ ಸಿಬಿಐ ವಶಕ್ಕೆ ನೀಡಿ ಆದೇಶ ಹೊರಡಿಸಿದೆ.

The post ಯೋಗೇಶ್​ಗೌಡ ಕೊಲೆ ಕೇಸ್; ಸೋಮು ನ್ಯಾಮಗೌಡ ಸಿಬಿಐ ವಶಕ್ಕೆ appeared first on News First Kannada.

Source: newsfirstlive.com

Source link