ಯೋಗ ದಿನಾಚರಣೆಯ ಮಾಹಿತಿ ವಿಚಾರದಲ್ಲೂ ರಾಜಕಾರಣ: ಸಂಸದ ಪ್ರತಾಪ್​ ಸಿಂಹ-ಶಾಸಕ ರಾಮದಾಸ್ ನಡುವೆ ಜಟಾಪಟಿ | Politics in World Yoga Day: clash among MP Pratap Sinha MLA Ramadas


ಯೋಗ ದಿನಾಚರಣೆಯ ಮಾಹಿತಿ ವಿಚಾರದಲ್ಲೂ ರಾಜಕಾರಣ: ಸಂಸದ ಪ್ರತಾಪ್​ ಸಿಂಹ-ಶಾಸಕ ರಾಮದಾಸ್ ನಡುವೆ ಜಟಾಪಟಿ

ಶಾಸಕ ರಾಮದಾಸ್, ಸಂಸದ ಪ್ರತಾಪ್​ ಸಿಂಹ

ಜೂನ್​​ 21ರಂದು ಮೈಸೂರಿನಲ್ಲಿ ಯೋಗ ದಿನಾಚರಣೆ ಹಿನ್ನೆಲೆ ಯೋಗ ದಿನಾಚರಣೆಯ ಮಾಹಿತಿ ವಿಚಾರದಲ್ಲೂ ರಾಜಕಾರಣ ಉಂಟಾಗಿದ್ದು, ಸಂಸದ ಪ್ರತಾಪ್​ ಸಿಂಹ-ಶಾಸಕ ರಾಮದಾಸ್ ನಡುವೆ ಜಟಾಪಟಿ ನಡೆದಿದೆ.

ಮೈಸೂರು: ಜೂನ್​​ 21ರಂದು ಮೈಸೂರಿನಲ್ಲಿ ಯೋಗ (World Yoga Day)  ದಿನಾಚರಣೆ ಹಿನ್ನೆಲೆ ಯೋಗ ದಿನಾಚರಣೆಯ ಮಾಹಿತಿ ವಿಚಾರದಲ್ಲೂ ರಾಜಕಾರಣ ನಡೆಯುತ್ತಿದ್ದು, ಮೈಲೇಜ್‌ಗಾಗಿ ಬಿಜೆಪಿ ಸಂಸದ ಪ್ರತಾಪ್​ ಸಿಂಹ ಮತ್ತು ಬಿಜೆಪಿ ಶಾಸಕ ರಾಮದಾಸ್​​ ನಡುವೆ ಜಟಾಪಟಿ ಉಂಟಾಗಿದೆ. ಮೈಸೂರಿನ ಅರಮನೆ ಆವರಣದಲ್ಲಿ ಯೋಗ ದಿನಾಚರಣೆ ಬಗ್ಗೆ ಮಾಹಿತಿ ನೀಡುವ ವೇಳೆ ಮಾಧ್ಯಮಗಳ ಮುಂದೆಯೇ ಬಿಜೆಪಿ ನಾಯಕರ ಪೈಪೋಟಿ ಉಂಟಾಗಿದೆ. ಯೋಗಪಟುಗಳು ಭಾಗಿಯಾಗುವ ಸಂಖ್ಯೆ ವಿಚಾರದಲ್ಲಿ ಗೊಂದಲವಾಗಿದ್ದು, ಕಾರ್ಯಕ್ರಮದಲ್ಲಿ 7ರಿಂದ 8 ಸಾವಿರ ಜನ ಭಾಗಿ ಆಗುತ್ತಾರೆ ಎಂದು ಪ್ರತಾಪ್ ಸಿಂಹ ಹೇಳಿದ್ದು, ಈ ವೇಳೆ ಮಧ್ಯ ಪ್ರವೇಶಿಸಿದ ಶಾಸಕ ಎಸ್​.ಎ. ರಾಮದಾಸ್​ ಈಗಾಗಲೇ 13 ಸಾವಿರ ಜನ ನೋಂದಣಿ ಆಗಿದೆ ಎಂದರು.​​​ ನಾನು ಮಾತಾಡ್ತಿದ್ದೀನಿ ರಾಮದಾಸ್​ಜೀ ಸುಮ್ಮನಿರಬೇಕು ಎಂದು ಶಾಸಕ ರಾಮದಾಸ್​ ವಿರುದ್ಧ ಸಂಸದ ಪ್ರತಾಪ್ ಸಿಂಹ ಸಿಡಿಮಿಡಿಗೊಂಡರು.

TV9 Kannada


Leave a Reply

Your email address will not be published.