ಯೋಗ ಬಿಟ್ಟು ಲಗೋರಿ ಆಡಿದ ಬಿಜೆಪಿ ಶಾಸಕಿ ಪೂರ್ಣಿಮಾ; ವೈರಲ್ ವಿಡಿಯೋ ಇಲ್ಲಿದೆ | MLA Poornima has played the Lagori game this video viral on social mediaಯೋಗ ಮಾಡುವ ಬದಲು ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹಿರಿಯೂರು ಪಟ್ಟಣದ ನಿವಾಸದ ಬಳಿ ಮಕ್ಕಳ ಜತೆ ಸೇರಿ ಲಗೋರಿ ಆಟ ಆಡಿದ್ದಾರೆಂದು ವಿಡಿಯೋ ವೈರಲ್ ಆಗಿದೆ.

TV9kannada Web Team


| Edited By: sandhya thejappa

Jun 21, 2022 | 9:44 AM
ಇಂದು (ಜೂನ್ 21) ಅಂತರಾಷ್ಟ್ರೀಯ ಯೋಗ ದಿನಾಚರಣೆ (International Yoga Day). ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಮೈಸೂರಿಗೆ ಆಗಮಿಸಿದ್ದಾರೆ. ದೇಶದ ಮೂಲೆ ಮೂಲೆಯಲ್ಲಿ ಯೋಗಾಭ್ಯಾಸ ಮಾಡುವ ಮೂಲಕ ಯೋಗ ದಿನಾಚರಣೆ ಆಚರಿಸಲಾಗಿದೆ. ಈ ನಡುವೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯೋಗ ಮಾಡುವ ಬದಲು ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹಿರಿಯೂರು ಪಟ್ಟಣದ ನಿವಾಸದ ಬಳಿ ಮಕ್ಕಳ ಜತೆ ಸೇರಿ ಲಗೋರಿ ಆಟ ಆಡಿದ್ದಾರೆಂದು ವಿಡಿಯೋ ವೈರಲ್ ಆಗಿದೆ. ನಮ್ಮಲ್ಲಿನ ಮಗುವಿನ ಗುಣ ಮರೆಯಬಾರದೆಂದು ಫೇಸ್​ಬುಕ್​​ನಲ್ಲಿ ವಿಡಿಯೋ ಸಮೇತ ಶಾಸಕಿ ಪೋಸ್ಟ್ ಮಾಡಿದ್ದಾರೆ.  ಆದರೆ ಮಕ್ಕಳೊಂದಿಗೆ ಶಾಸಕಿ ಯಾವಾಗ ಆಟವಾಡಿದ್ದಾರೆಂದು ತಿಳಿದುಬಂದಿಲ್ಲ.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

TV9 Kannada


Leave a Reply

Your email address will not be published.