ಕೊರೊನಾದ ಎರಡನೇ ಅಲೆ ಹಿನ್ನೆಲೆಯಲ್ಲಿ ಅದ್ದೂರಿಯಾಗಿ ಮದುವೆ, ಸಮರಾಂಭಗಳನ್ನ ಮಾಡಿಕೊಳ್ಳೋರು ಮುಂದೂಡುತ್ತಿದ್ದಾರೆ. ಎಲ್ಲಾ ರಾಜ್ಯಗಳ ಸರ್ಕಾರಗಳು ಕೂಡ ಕಠಿಣ ಲಾಕ್​ಡೌನ್ ವಿಧಿಸಿದೆ. ಅದರಂತೆ ತಮಿಳುನಾಡು ಸರ್ಕಾರ ಕೂಡ ಲಾಕ್​ಡೌನ್ ಹೇರಿ, ಜನರ ಅನಗತ್ಯ ಓಡಾಟಕ್ಕೆ, ಗುಂಪು ಸೇರೋದಕ್ಕೆ ಬ್ರೇಕ್ ಹಾಕಿದೆ. ಹೀಗಿದ್ದೂ ತಮಿಳುನಾಡಿನ ಜೋಡಿಯೊಂದು ಕೊರೊನಾಗೆ ಹಾಗೂ ಕೊರೊನಾ ನಿಯಮಗೆ ಕ್ಯಾರೇ ಅನ್ನದೇ ಆಗಸದಲ್ಲಿ ಗಟ್ಟಿಮೇಳ ಬಾರಿಸಿ, ಸಪ್ತಪದಿ ತುಳಿದಿದೆ.

ಹೌದು.. ಮಧುರೈನ ರಾಕೇಶ್ ಹಾಗೂ ಧೀಕ್ಷಣಾ ಅನ್ನೋ ದಂಪತಿ ತಮ್ಮ ಮದುವೆಗಾಗಿ ವಿಶೇಷ ವಿಮಾನವೊಂದನ್ನ ಬುಕ್ ಮಾಡಿ, 130 ಸಂಬಂಧಿಕರನ್ನ ಸೇರಿಸಿ ಮದುವೆಯಾಗಿದ್ದಾರೆ. ಮಧುರೈನಿಂದ ತೂತುಕುಡಿಗೆ ಸಂಚರಿಸುವ ಸಂದರ್ಭದಲ್ಲಿ ವಿವಾಹ ಆಗಿದ್ದು, ಭಾರೀ ಟೀಕೆಗೆ ಕಾರಣವಾಗಿದೆ. ಇನ್ನು ಮದುವೆಗೆ ಆಪ್ತ ಸ್ನೇಹಿತರು ಮತ್ತು ಸಂಬಂಧಿಕರು ಹಾಜರಾಗಿದ್ದರು ಅಂತಾ ಹೇಳಲಾಗಿದೆ.

ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ಮೇ 31 ವರೆಗೆ ಲಾಕ್​ಡೌನ್ ವಿಸ್ತರಿಸಿದೆ. ಸಂಪೂರ್ಣ ಲಾಕ್​ಡೌನ್ ಜಾರಿಗೂ ಇಲ್ಲಿನ ರಾಜ್ಯ ಸರ್ಕಾರ ಒಂದು ದಿನ ಅಗತ್ಯ ವಸ್ತುಗಳ ಖರೀದಿಗಾಗಿ ಫ್ರೀ ಬಿಟ್ಟಿತ್ತು. ಇತ್ತ ಸರ್ಕಾರ ಕೊರೊನಾ ಲಾಕ್​ಡೌನ್​ ವಿಧಿಸುತ್ತಿದ್ದಂತೆ, ಇವರು ತಮ್ಮ ವಿವಾಹವನ್ನ ಸ್ಮರಣೀಯವಾಗಿ ಉಳಿಸಿಕೊಳ್ಳುವ ಉದ್ದೇಶದಿಂದ ವಿಮಾನದಲ್ಲಿ ಮದುವೆಯಾಗಿದ್ದಾರೆ.

RT-PCR ಟೆಸ್ಟ್​ ಮಾಡಿಸಲಾಗಿತ್ತು
ಮದುವೆಗೆ 130 ಮಂದಿ ಆಗಮಿಸಿದ್ದರು. ಕೊರೊನಾ ನಿಯಮದ ಪ್ರಕಾರ 130 ಮಂದಿ ಸೇರುವ ಹಾಗಿಲ್ಲ. ಇನ್ನು ಮದುವೆಯಲ್ಲಿ ಭಾಗಿಯಾಗಿದ್ದ ಎಲ್ಲಾ ಸಂಬಂಧಿಕರಿಗೂ RT-PCR ಟೆಸ್ಟ್​ ಮಾಡಿಸಲಾಗಿತ್ತು ಅಂತಾ ವರದಿಯಾಗಿದೆ.

ಇಡೀ ದೇಶವೇ ಕೊರೊನಾ ಕೊರೊನಾ ಅಂತಾ ಆತಂಕಕ್ಕೆ ಒಳಗಾಗಿದೆ. ಇವರು ಇದ್ಯಾವುದನ್ನೂ ಲೆಕ್ಕಿಸದೇ 130 ಜನರನ್ನ ಸೇರಿಸಿ ವಿಮಾನದಲ್ಲಿ ಮದುವೆ ಆಗಿರೋದು ಟೀಕೆಗೆ ಗುರಿಯಾಗಿದೆ. ಅಂದ್ಹಾಗೆ ತಮಿಳುನಾಡಿನಲ್ಲಿ ಕಳೆದ ಶುಕ್ರವಾರ 36 ಸಾವಿರ ಕೊರೊನಾ ಪ್ರಕರಣಗಳು ದಾಖಲಾಗಿವೆ. ಸರ್ಕಾರದ ಹೊಸ ಗೈಡ್​ಲೈನ್ಸ್​ ಪ್ರಕಾರ ಎಲ್ಲಾ ಖಾಸಗಿ ಸಂಸ್ಥೆಗಳ ನೌಕರರಿಗೆ ಮನೆಯಲ್ಲೇ ಕೆಲಸ ಮಾಡುವಂತೆ ಸೂಚಿಸಲಾಗಿದೆ. ಖಾಸಗಿ ಸಂಸ್ಥೆಯ ವಿಮಾನವೊಂದು ಮದುವೆಗೆ ವೇದಿಕೆ ಕಲ್ಪಿಸಿರೋದು ಕೂಡ ಕೊರೊನಾ ನಿಯಮದ ಪ್ರಕಾರ ತಪ್ಪಾಗಿದೆ. ಈ ಸಂಬಂಧ ತನಿಖೆ ಮುಂದುವರಿದಿದೆ.

The post ರಂಗೋಲಿ ಕೆಳಗೆ ನುಸುಳುತ್ತಿರುವ ಜನ; ಕೊರೊನಾ ನಿಯಮ ತಪ್ಪಿಸಿ ಆಗಸದಲ್ಲೇ ಮದುವೆ appeared first on News First Kannada.

Source: newsfirstlive.com

Source link