ರಕ್ಷಣೆಗಾಗಿ ಡಾ.ಅಶ್ವತ್ಥ್ ನಾರಾಯಣ ಭೇಟಿಯಾಗಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿರುವುದು ಸರಿಯಲ್ಲ; ಎಂಬಿ ಪಾಟೀಲ್ | Mb patil react to DK Shivakumar statement to tv9


ರಕ್ಷಣೆಗಾಗಿ ಡಾ.ಅಶ್ವತ್ಥ್ ನಾರಾಯಣ ಭೇಟಿಯಾಗಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿರುವುದು ಸರಿಯಲ್ಲ; ಎಂಬಿ ಪಾಟೀಲ್

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂಬಿ ಪಾಟೀಲ್

ಡಿಕೆಶಿ ಮತ್ತು ನನ್ನ ಬಾಂಧವ್ಯ ಚೆನ್ನಾಗಿದೆ ಎಂದು ಹೇಳಿದ ಎಂಬಿ ಪಾಟೀಲ್, ಸಚಿವ ಅಶ್ವತ್ಥ್ ರಕ್ಷಿಸಲು ನಾನು ಸಿಎಂ ಅಲ್ಲ, ಅಧ್ಯಕ್ಷನೂ ಅಲ್ಲ ಎಂದು ತಿಳಿಸಿದರು. ಇನ್ನು ಈ ಹೇಳಿಕೆ ಬಗ್ಗೆ ಮಾತನಾಡಿರುವ ಅಶ್ವತ್ಥ್, ನನಗೆ ಯಾವುದೇ ಭಯ ಇಲ್ಲ.

ಬೆಂಗಳೂರು: ಸಚಿವ ಡಾ.ಅಶ್ವತ್ಥ್ ನಾರಾಯಣ (Ashwath Narayanan) ಮತ್ತು ಎಂಬಿ ಪಾಟೀಲ್ (MB Patil) ಭೇಟಿ ಮಾಡಿದ ವಿಚಾರಕ್ಕೆ ಸಂಬಂಧಿಸಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದರು. ರಕ್ಷಣೆಗಾಗಿ ಸಚಿವ ಅಶ್ವತ್ಥ್ ಎಂಬಿಪಿ ಅವರನ್ನು ಭೇಟಿಯಾಗಿದ್ದರೆಂದು ಹೇಳಿದ್ದರು. ಈ ಹೇಳಿಕೆ ಬಗ್ಗೆ ಟಿವಿ9ಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂಬಿ ಪಾಟೀಲ್, ರಕ್ಷಣೆಗಾಗಿ ಭೇಟಿಯಾಗಿದ್ದರೆಂದು ಡಿಕೆಶಿ ಹೇಳಿರುವುದು ಸರಿಯಲ್ಲ. ಡಿಕೆ ಶಿವಕುಮಾರ್ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದೇನೆ. ಡಿಕೆಶಿ ಹೇಳಿಕೆ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇನೆ ಎಂದರು.

ಡಿಕೆಶಿ ಮತ್ತು ನನ್ನ ಬಾಂಧವ್ಯ ಚೆನ್ನಾಗಿದೆ ಎಂದು ಹೇಳಿದ ಎಂಬಿ ಪಾಟೀಲ್, ಸಚಿವ ಅಶ್ವತ್ಥ್ ರಕ್ಷಿಸಲು ನಾನು ಸಿಎಂ ಅಲ್ಲ, ಅಧ್ಯಕ್ಷನೂ ಅಲ್ಲ ಎಂದು ತಿಳಿಸಿದರು. ಇನ್ನು ಈ ಹೇಳಿಕೆ ಬಗ್ಗೆ ಮಾತನಾಡಿರುವ ಅಶ್ವತ್ಥ್, ನನಗೆ ಯಾವುದೇ ಭಯ ಇಲ್ಲ. ಪ್ರತಿಕ್ಷಣ ಭಯದಲ್ಲಿ ಬದುಕುತ್ತಿರುವುದು ಡಿಕೆ ಶಿವಕುಮಾರ್. ಯಾವಾಗ ಜೈಲಿಗೆ ಹೋಗುತ್ತೇನೆ ಎಂದು ಬದುಕುತ್ತಿರುವುದು ಅವರು. ಡಿಕೆ ಶಿವಕುಮಾರ್ ಹೆಸರು ಕೇಳಿದರೆ ಜನಕ್ಕೆ ಗೊತ್ತಾಗುತ್ತದೆ. ಅವರು ಎಷ್ಟು ಭ್ರಷ್ಟಾಚಾರ ಮಾಡಿದ್ದಾರೆ ಎಂದು. ನಾನು ಯಾವುದೇ ಭ್ರಷ್ಟಾಚಾರವನ್ನು ಮಾಡಲಿಕ್ಕೆ ಬಂದಿಲ್ಲ. ನಂಬಿ ಬಂದವರ ಜನರ ಕುತ್ತಿಗೆ ಕುಯ್ಯೋದು ಇವರ ಕೆಲಸ. ಅವರ ಹೇಳಿಕೆಗೆ ಎಳ್ಳುಷ್ಟು ಬೆಲೆ ಇಲ್ಲ. ಕಾಂಗ್ರೆಸ್ ಮುಕ್ತ ರಾಮನಗರವನ್ನು ಮಾಡುತ್ತೇವೆ. ಇಂತಹ ವ್ಯಕ್ತಿಗಳನ್ನು ಮನೆಗೆ ಕಳಿಸುತ್ತೇವೆ ಎಂದರು.

ಇಬ್ಬರು ಮೌನ ವಹಿಸುವಂತೆ ಹಿರಿಯ ಕಾಂಗ್ರೆಸ್ ಮುಖಂಡ ಸಲಹೆ:
ಡಿಕೆ ಶಿವಕುಮಾರ್ ಮತ್ತು ಎಂಬಿ ಪಾಟೀಲ್ ಹೇಳಿಕೆಯಿಂದ ಪಕ್ಷಕ್ಕೆ ಮುಜಗರ ಆಗಿದೆ. ಹೀಗಾಗಿ ಪ್ರಕರಣದ ಬಗ್ಗೆ ಇಬ್ಬರು ಮೌನ ವಹಿಸುವಂತೆ ಹಿರಿಯ ಕಾಂಗ್ರೆಸ್ ಮುಖಂಡ ಸಲಹೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಇದನ್ನ ಮುಂದುವರೆಸಿಕೊಂಡು ಹೋಗವುದು ಬೇಡ. ನಿಮ್ಮ ಹೇಳಿಕೆಗಳಿಂದ ಪಕ್ಷಕ್ಕೆ ದೊಡ್ಡ ಡ್ಯಾಮೇಜ್ ಆಗಲಿದೆ ಎಂದು ಇಬ್ಬರ ನಾಯಕರೊಂದಿಗೆ ಹಿರಿಯ ಕಾಂಗ್ರೆಸ್ ಮುಖಂಡ ಮಾತನಾಡಿದ್ದಾರೆ.

ಪ್ರಕರಣದ ಬಗ್ಗೆ ನೀವು ಯಾವುದೇ ಹೇಳಿಕೆ ಕೊಡ ಬೇಡಿ. ಮುಂದಿನ ವರ್ಷ ಚುನಾವಣೆ ಇದೆ. ನೀವು ಜವಾಬ್ದಾರಿ ಸ್ಥಾನದಲ್ಲಿರುವವರು ಹೀಗೆ ಮಾತನಾಡಿದರೆ ಹೇಗೆ? ಸಾರ್ವಜನಿಕವಾಗಿ ಈ ರೀತಿ ಹೇಳಿಕೆಗಳಿಂದ ಪಕ್ಷಕ್ಕೆ ಡ್ಯಾಮೇಜ್ ಆಗಲಿದೆ. ನೀವು ಈ ವಿಚಾರವನ್ನ ಇಲ್ಲಿಗೆ ಕೈಬಿಡಬೇಕೆಂದು ಮನವೊಲಿಕೆ ಮಾಡಿದ್ದಾರೆ.

TV9 Kannada


Leave a Reply

Your email address will not be published. Required fields are marked *