ಸಿಂಪಲ್​ ಸ್ಟಾರ್​ ರಕ್ಷಿತ್​ ಶೆಟ್ಟಿ ‘777 ಚಾರ್ಲಿ’ಯ ಕಂಪ್ಲೀಟ್​​ ಶೂಟ್​ ಮುಗಿಸಿ, ‘ಸಪ್ತ ಸಾಗರದಾಚೆ’ ಒಂದು ಹೆಜ್ಜೆ ಇಟ್ಟು ಸದ್ಯ ಉಡುಪಿಯ ತಮ್ಮ ಮನೆಯಲ್ಲಿ ಲಾಕ್​​ಡೌನ್​ ಸಮಯವನ್ನ ಕಳೆಯುತ್ತಿದ್ದಾರೆ. ಇದೇ ಹೊತ್ತಿಗಾಗಲೇ ಎರಡು ಸೂಪರ್​ ಸುದ್ದಿಗಳು ರಕ್ಷಿತ್​ ಟೀಮ್​ನಿಂದ ಸಿಕ್ಕಿದೆ. ಜೂನ್​ 6ರ ರಕ್ಷಿತ್​ ಹುಟ್ಟುಹಬ್ಬದಂದು ‘777 ಚಾರ್ಲಿ’ಯ ಸ್ಪೆಷಲ್​ ಚಾರ್ಲಿ ಟೀಸರ್​ ರಿಲೀಸ್​ ಆಗಲಿದೆ ಅನ್ನೋದು ಒಂದು ಸುದ್ದಿಯಾದ್ರೆ, ಇದೀಗ ಮಲಯಾಳಂನ ಸ್ಟಾರ್​ ನಟ ‘777 ಚಾರ್ಲಿ’ಗೆ ಸಾಥ್​ ನೀಡಿದ್ದಾರೆ ಅನ್ನೋದು ಹೊಸ ಗುಡ್​ ನ್ಯೂಸ್​.

ಹೌದು.. ಮಲಯಾಳಂ ಸಿನಿಮಾ ಅಂದಾಕ್ಷಣ ಅಪ್ರತಿಮ ನಟರ ಹೆಸರುಗಳಲ್ಲಿ ಸೂಪರ್​ ಸ್ಟಾರ್ ಪೃಥ್ವಿರಾಜ್​ ಸುಕುಮಾರನ್​ ಹೆಸರು ಕೂಡ ಪಕ್ಕಾ ಕೇಳಿ ಬರುತ್ತೆ. ಮಲಯಾಳಂ, ತಮಿಳು, ಹಿಂದಿ ಹಾಗೂ ತೆಲುಗು ಸಿನಿಮಾಗಳಲ್ಲಿ ಸೈ ಎನಿಸಿಕೊಂಡಿರುವ ಪೃಥ್ವಿರಾಜ್​, 2019ರಿಂದ ತಮ್ಮ ಪ್ರೊಡಕ್ಷನ್​​ ಮೂಲಕವೂ ಸೌಂಡ್​ ಮಾಡ್ತಿದ್ದಾರೆ. ಯೆಸ್​.. ಮಲಯಾಳಂನಲ್ಲಿ ‘777 ಚಾರ್ಲಿ’ ಸಿನಿಮಾದ ಡಿಸ್ಟ್ರಿಬ್ಯೂಷನ್​​ ಹಕ್ಕುಗಳನ್ನ ಪೃಥ್ವಿರಾಜ್​ ಪ್ರೊಡಕ್ಷನ್ಸ್​​ ಪಡೆದುಕೊಂಡಿದೆ ಅನ್ನೋದು, ಇದೀಗ ‘777 ಚಾರ್ಲಿ’ ಬಳಗದಿಂದ ಬಂದಿರೋ ಅಧಿಕೃತ ಸುದ್ದಿ.

ಈ ಬಗ್ಗೆ ಟ್ವೀಟ್​ ಮಾಡಿರುವ ನಟ ರಕ್ಷಿತ್​​ ಶೆಟ್ಟಿ, ‘ಮಲಯಾಳಂನಲ್ಲಿ ಪೃಥ್ವಿರಾಜ್​​ ಪ್ರೊಡಕ್ಷನ್ಸ್​​ ಜೊತೆಗಿನ ನಮ್ಮ ಗ್ರ್ಯಾಂಡ್​ ಕೂಡಿಕೆಯ ಬಗ್ಗೆ ಅನೌನ್ಸ್​​ ಮಾಡುತ್ತಿದ್ದೇವೆ, 777 ಚಾರ್ಲಿ ಸಿನಿಮಾವನ್ನ ಮಲಯಾಳಂನಲ್ಲಿ ಪೃಥ್ವಿರಾಜ್ ಪ್ರೊಡಕ್ಷನ್ಸ್ ಪ್ರಸ್ತುತಪಡಿಸಲಿದೆ’ ಅಂತ ಸುದ್ದಿಯನ್ನ ಅಧಿಕೃತವಾಗಿ ರಿವೀಲ್​​ ಮಾಡಿದ್ದಾರೆ.

ಇನ್ನು ಈ ಬಗ್ಗೆ ಸ್ವತಃ ನಟ ಪೃಥ್ವಿರಾಜ್​ ಸುಕುಮಾರನ್​ ಕೂಡ ಟ್ವೀಟ್​ ಮಾಡಿ ಖುಷಿ ಹಂಚಿಕೊಂಡಿದ್ದಾರೆ. ‘777 ಚಾರ್ಲಿ ಸಿನಿಮಾದ ಸಾಕಷ್ಟು ದೃಶ್ಯಗಳನ್ನ ನೋಡುವ ಅವಕಾಶ ನಮಗೆ ಸಿಕ್ಕಿದೆ. 777 ಚಾರ್ಲಿ ಸಿನಿಮಾದ ಜೊತೆ ಕೂಡಿಕೊಂಡಿರೋದಕ್ಕೆ ನಮಗೆ (ಪೃಥ್ವಿರಾಜ್​ ಪ್ರೊಡಕ್ಷನ್ಸ್​) ಬಹಳ ಖುಷಿಯಾಗ್ತಿದೆ. ಮನಸ್ಸಿನ ಆಳಕ್ಕೆ ನಾಟುವಂತ ಕಥೆ, ಅದ್ಭುತವಾಗಿ ಚಿತ್ರಿಸಲಾದ ಸಿನಿಮಾವಿದು’ ಅಂತ ನಟ ಪೃಥ್ವಿರಾಜ್​​ ಮನಬಿಚ್ಚಿ ಟ್ವೀಟ್​ ಮಾಡಿದ್ದಾರೆ.

ಇದೇ ವರ್ಷ ಅಕ್ಟೋಬರ್​ನಲ್ಲಿ ಸಿನಿಮಾ ರಿಲೀಸ್​​ ಮಾಡ್ಬೇಕು ಅನ್ನೋದು ‘777 ಚಾರ್ಲಿ’ ತಂಡದ ಸದ್ಯದ ಪ್ಲ್ಯಾನ್​. ಈಗಾಗಲೇ ಕನ್ನಡ ವರ್ಷನ್​ನ ಕೆಲಸಗಳೆಲ್ಲವೂ ಮುಗಿದಿದ್ದು, ಉಳಿದ ನಾಲ್ಕು ಭಾಷೆಗಳ ಪೋಸ್ಟ್​​ ಪ್ರೊಡಕ್ಷನ್​ ಕೆಲಸಗಳು ಬಿರುಸಿನಿಂದ ನಡೆಯುತ್ತಿದೆ. ಇದೀಗ ಜೂನ್​ 6ರಂದು ‘ಲೈಫ್​ ಆಫ್​​ ಚಾರ್ಲಿ’ ಅನ್ನೋ ಟೈಟಲ್​ನಲ್ಲಿ ಸ್ಪೆಷಲ್​ ಟೀಸರ್​ವೊಂದು ಬಿಡುಗಡೆ ಮಾಡಿ, ನಟ ರಕ್ಷಿತ್​ ಬರ್ತ್​ಡೇಯನ್ನೂ ಸ್ಪೆಷಲ್​​ ಆಗಿ ಸೆಲೆಬ್ರೇಟ್​ ಮಾಡುವ ಇರಾದೆ ‘777 ಚಾರ್ಲಿ’ ಚಿತ್ರತಂಡದ್ದು.

The post ರಕ್ಷಿತ್​ ಶೆಟ್ಟಿ ‘777 ಚಾರ್ಲಿ’ಗೆ ಮಲಯಾಳಂ ಸೂಪರ್​ಸ್ಟಾರ್​​ ಸಾಥ್ appeared first on News First Kannada.

Source: newsfirstlive.com

Source link