ರಕ್ಷಿತ್ ಶೆಟ್ಟಿ ನಟನೆಯ ‘777 ಚಾರ್ಲಿ’ ಸಿನಿಮಾ ನೋಡಿ ಮೆಚ್ಚಿಕೊಂಡ ನಟಿ ರಮ್ಯಾ ಹೇಳಿದ್ದೇನು? | Actress Ramya Divya Spandana watched Rakshit Shetty Starrer 777 Charlie Movie


ರಕ್ಷಿತ್ ಶೆಟ್ಟಿ ನಟನೆಯ ‘777 ಚಾರ್ಲಿ’ ಸಿನಿಮಾ ನೋಡಿ ಮೆಚ್ಚಿಕೊಂಡ ನಟಿ ರಮ್ಯಾ ಹೇಳಿದ್ದೇನು?

ರಕ್ಷಿತ್-ರಮ್ಯಾ

ಆಯ್ದ ಕೆಲ ಸೆಲೆಬ್ರಿಟಿಗಳಿಗೋಸ್ಕರ ಆಯೋಜಿಸಿದ್ದ ‘777 ಚಾರ್ಲಿ’ ವಿಶೇಷ ಶೋನಲ್ಲಿ ರಮ್ಯಾ ಭಾಗಿ ಆಗಿದ್ದಾರೆ. ಅವರಿಗೆ ಸಿನಿಮಾ ಸಾಕಷ್ಟು ಇಷ್ಟವಾಗಿದೆ.

ನಟಿ ರಮ್ಯಾ ಅವರು (Actress Ramya) ನಟನೆ ಹಾಗೂ ರಾಜಕೀಯದಿಂದ ದೂರ ಉಳಿದುಕೊಂಡಿದ್ದಾರೆ. ಅವರು ಮತ್ತೆ ಬಣ್ಣ ಹಚ್ಚಲಿದ್ದಾರೆ ಎನ್ನುವ ಸುದ್ದಿ ಈ ಮೊದಲಿನಿಂದಲೂ ಹರಿದಾಡುತ್ತಲೇ ಇದೆ. ಇದನ್ನು ಸ್ವತಃ ರಮ್ಯಾ ಕೂಡ ಒಪ್ಪಿಕೊಂಡಿದ್ದಾರೆ. ಆದರೆ, ಯಾವ ತಂಡದ ಮೂಲಕ ಅವರು ಕಂಬ್ಯಾಕ್ ಮಾಡಲಿದ್ದಾರೆ ಅನ್ನೋದು ಇನ್ನೂ ಗುಟ್ಟಾಗಿಯೇ ಇದೆ. ಈಗ ಅವರು ರಕ್ಷಿತ್ ಶೆಟ್ಟಿ ನಟನೆಯ ‘777 ಚಾರ್ಲಿ’ ಸಿನಿಮಾ (777 Charlie Movie) ನೋಡಿ ಮೆಚ್ಚಿಕೊಂಡಿದ್ದಾರೆ. ತಂಡಕ್ಕೆ ಅವರು ಶುಭಹಾರೈಸಿದ್ದಾರೆ.

ರಮ್ಯಾ ಅವರು ನಟನೆಯಿಂದ ದೂರ ಉಳಿದುಕೊಂಡಿದ್ದಾರೆ ನಿಜ. ಆದರೆ, ಚಿತ್ರರಂಗದ ಜತೆಗಿನ ನಂಟನ್ನು ಕಡಿದುಕೊಂಡಿಲ್ಲ. ಅವರು ಹಲವು ಸಿನಿಮಾ ತಂಡಗಳ ಬೆನ್ನುತಟ್ಟುತ್ತಿದ್ದಾರೆ. ಈ ಮೊದಲು ಅನೇಕ ಸಿನಿಮಾಗಳಿಗೆ ಅವರು ಪ್ರೋತ್ಸಾಹ ನೀಡಿದ್ದರು. ಈಗ ಆಯ್ದ ಕೆಲ ಸೆಲೆಬ್ರಿಟಿಗಳಿಗೋಸ್ಕರ ಆಯೋಜಿಸಿದ್ದ ‘777 ಚಾರ್ಲಿ’ ವಿಶೇಷ ಶೋನಲ್ಲಿ ರಮ್ಯಾ ಭಾಗಿ ಆಗಿದ್ದಾರೆ. ಅವರಿಗೆ ಸಿನಿಮಾ ಸಾಕಷ್ಟು ಇಷ್ಟವಾಗಿದೆ.

ನಟಿ ರಮ್ಯಾಗೆ ಶ್ವಾನ ಎಂದರೆ ತುಂಬಾನೇ ಇಷ್ಟ. ಬೆಂಗಳೂರಿನಲ್ಲಿ ಬೀದಿ ಬದಿ ನಾಯಿಯನ್ನು ಉದ್ದೇಶಪೂರ್ವಕವಾಗಿ ಹತ್ಯೆ ಮಾಡಿದಾಗ ಇದನ್ನು ಅವರು ವಿರೋಧಿಸಿದ್ದರು. ಈ ಪ್ರತಿಭಟನೆಯಲ್ಲಿ ಅವರು ಕೂಡ ಭಾಗಿ ಆಗಿದ್ದರು. ಈಗ ಶ್ವಾನದ ಬಗ್ಗೆಯೇ ‘777 ಚಾರ್ಲಿ’ ರೆಡಿ ಆಗಿದೆ. ಹೀಗಾಗಿ, ಅವರು ತುಂಬಾನೇ ಇಷ್ಟಪಟ್ಟು ಈ ಸಿನಿಮಾ ವೀಕ್ಷಿಸಿದ್ದಾರೆ.

TV9 Kannada


Leave a Reply

Your email address will not be published.