ಬಿಗ್‍ಬಾಸ್ ಮನೆಯ ಅಂತಿಮ ದಿನ ಕಣ್ಮಣಿ ರಘುಗೆ ನಾಳೆ ನೀವು ಅಡುಗೆ ಮನೆಯಲ್ಲಿ ಇರುತ್ತೀರಾ ಎಂಬ ಪ್ರಶ್ನೆ ಕೇಳಿದ್ದಾಳೆ. ಆಗ ರಘು ಅಡುಗೆ ಮನೆಯಲ್ಲಿ ಇರುತ್ತೇನೆ ಆದರೆ ಅಡುಗೆ ಮನೆಯಲ್ಲಿ ಇನ್ನೊಬ್ಬರು ಇರುವುದಿಲ್ಲ ಬದಲಾಗಿ ನನ್ನ ಹೆಂಡತಿ ಇರುತ್ತಾಳೆ ಎನ್ನುತ್ತಾರೆ.

ಈ ವೇಳೆ ಅರವಿಂದ್ ಅದು ನಿನ್ನನ್ನು ಇಂದು ಮನೆಯೊಳಗೆ ಬಿಟ್ಟುಕೊಂಡರೆ ಮಾತ್ರ ಎಂದು ರೇಗಿಸುತ್ತಾರೆ. ನೀವು ನನ್ನ ಹೆಂಡ್ತಿ ಸ್ಪೋರ್ಟಿವ್ ಆಗಿ ಇದ್ದಾಳಾ ಎಂದು ಚೇಕ್ ಮಾಡುತ್ತಿದ್ದೀರಾ. ನಾನು ಮನೆಗೆ ಹೋಗಬೇಕಾ, ಇಲ್ಲ ಅಂದರೆ ಎಲ್ಲಾದರೂ ಹೋಗಬೇಕಾ ಗೊತ್ತಾಗುತ್ತಿಲ್ಲ ಎಂದು ರಘು ಕೇಳಿದಾಗ, ನಾವು ಆರೋಗ್ಯ ಮಾತ್ರ ವಿಚಾರಿಸಿದ್ದು, ಇನ್ನು ಮಿಕ್ಕಿದ್ದು ಗಂಡ-ಹೆಂಡತಿಗೆ ಬಿಟ್ಟಿದ್ದು ಎಂದು ಕಣ್ಮಣಿ ಹೇಳುತ್ತಾಳೆ.

ಈ ವೇಳೆ ಶುಭಾ ಪೂಂಜಾ ನನಗೆ ತಿಳಿದಿರುವಂತೆ ರಘುನಾ ಇಲ್ಲೇ ಬಿಟ್ಟು ಬಿಡಿ. ಏಕೆಂದರೆ ಅವರನ್ನು ಮನೆಗೆ ಸೇರಿಸುವುದಿಲ್ಲ ಅನಿಸುತ್ತದೆ ಎಂದರೆ ಅರವಿಂದ್ ಪಾಪ ಅವನ ಬಳಿ ಕಾರ್ಡ್ ಕೂಡ ಇಲ್ಲ ಅಂತಿದ್ದ ಎಂದು ರೇಗಿಸುತ್ತಾರೆ. ಆಗ ಕಣ್ಮಣಿ, ನಿಮಗೆ ಈಗಾಗಲೇ ನಿಮ್ಮ ಹೆಂಡತಿ ವಾಯ್ಸ್ ನೋಟ್ ಕಳುಹಿಸಿದ್ದಾರಲ್ಲ ಎಂದು ಕೇಳಿದಾಗ, ಮಜಾ ಮಾಡಿ ನೀನು ಬಾ, ನಿನಗಿದೆ ಎಂದು ಎದುರಿಸಿದಂತೆ ಇತ್ತು. ನಾನು ಅವಳು ಹೇಳಿದ್ದನ್ನು ಸೀರಿಯಸ್ ಆಗಿ ತೆಗೆದುಕೊಂಡು ಮಜಾ ಏನೋ ಮಾಡಿ ಬಿಟ್ಟೆ. ಆದ್ರೆ ಮುಂದೆ ಏನು ಗೊತ್ತಾಗುತ್ತಿಲ್ಲ ಎನ್ನುತ್ತಾರೆ.

ಹಾಗದರೆ ನಿಮಗೊಂದು ಸಣ್ಣ ಸಿಕ್ರೆಟ್ ಹೇಳಿ ಬಿಡುತ್ತೇನೆ. ಆ ವಾಯ್ಸ್ ನೋಟ್‍ನಲ್ಲಿ ಒಂದೆರಡು ವರ್ಡ್ ನಾವು ಎಡಿಟ್ ಮಾಡಿದ್ದೇವೆ ಎಂದು ಕಣ್ಮಣಿ ರಘುಗೆ ಹೇಳತ್ತಾಳೆ. ಆಗ ರಘು ಏನಂತಾ ಇತ್ತು ಎಂದಾಗ ಕಣ್ಮಣಿ ಹೊರಗೆ ಹೋಗಿ ಲೈವ್‍ನಲ್ಲಿಯೇ ಗೊತ್ತಾಗುತ್ತದೆ ಎಂದಿದ್ದಾಳೆ.

ನಂತರ ಕಣ್ಮಣಿ ಒಂದು ವೇಳೆ ನಿಮ್ಮ ಹೆಂಡತಿ ನಿಮ್ಮನ್ನು ಮನೆಗೆ ಸೇರಿಸಲಿಲ್ಲ ಅಂದರೆ ಏನು ಮಾಡುತ್ತೀರಾ ಎಂದು ಪ್ರಶ್ನಿಸುತ್ತಾಳೆ. ಆಗ ಶುಭಾ, ಪ್ರಶಾಂತ್ ಎಲ್ಲರು ನಮ್ಮ ಮನೆಗೆ ಬರಬಹುದು ಎಂದು ಹೇಳುತ್ತಿದ್ದಾಗ ರಘು, ಈಗಾಗಲೇ ಇದರ ಬಗ್ಗೆ ಸಾಕಷ್ಟು ಬಾರಿ ಯಾರ ಮನೆಯಲ್ಲಿ ಎಷ್ಟು ದಿನ ಇರಬಹುದು ಎಂದು ಮಾತನಾಡಿದ್ದೇವೆ. ನನಗೆ ಹೆಂಡ್ತಿ ಸ್ಥಾನದಲ್ಲಿ ನಿಂತುಕೊಳ್ಳಲು ಬಹಳಷ್ಟು ಜನ ಇದ್ದಾರೆ ಎಂದು ಹೇಳುತ್ತಾರೆ.

ಆಗ ಕಣ್ಮಣಿ ರಘು ಶುಭಾ ಮನೆಗೆ ಹೋದರೆ ಏನಾಗುತ್ತದೆ ಎಂದು ಗೊತ್ತು ತಾನೇ ಎಂದು ನೆನಪಿಸುತ್ತಾರೆ. ಈ ವೇಳೆ ರಘು ಪಾತ್ರೆ ತೊಳೆಯುವಂತೆ, ಬಟ್ಟೆ ಒಗೆಯುವಂತೆ ಸನ್ನೆ ಮಾಡಿ ತೋರಿಸುತ್ತಾರೆ.

 

The post ರಘುಗೆ ಹೆಂಡ್ತಿ ಸ್ಥಾನದಲ್ಲಿ ನಿಂತ್ಕೋಳಕ್ಕೆ ತುಂಬಾ ಜನ ಇದ್ದಾರಂತೆ appeared first on Public TV.

Source: publictv.in

Source link