ಸಾಲು ಸಾಲು ಸರ್ತಿ ಸಾಲು ಸಿನಿಮಾಗಳಲ್ಲಿ ರಚಿತಾ ರಾಮ್ ಬ್ಯುಸಿಯೋ ಬ್ಯುಸಿಯಾಗಿದ್ದಾರೆ. ಇವತ್ತೊಂದು ಸೆಟ್​​ನಲ್ಲಿ ಸೆಟೆಲ್ ಆಗಿದ್ರೆ ನಾಳೆ ನಾಡಿದ್ದು ಮತ್ತೊಂದು ಸಿನಿಮಾ ಸೆಟ್​​​ನಲ್ಲಿ ಸೆಟ್ಲ್ ಆಗ್ತಾ ಬ್ಯುಸಿಯಾಗ್ತಿದ್ದಾರೆ ರಚಿತಾ ರಾಮ್. ಸದ್ಯ ಈಗ ಒಟ್ಟೊಟ್ಟಿಗೆ ಗಂಡ ಮತ್ತು ಹೆಂಡತಿ ಇಬ್ಬರಿಗೂ ಬುಲ್ ಬುಲ್ ರಚಿತಾ ರಾಮ್ ಮೇಲೆ ಲವ್ ಆಗಿದೆ..!! ಗಂಡ ರಚ್ಚು ಜೊತೆ ಕ್ಯಾಮೆರಾ ಮುಂದೆ ಡ್ಯುಯೆಟ್ ಹಾಡ್ತಿದ್ರೆ ರಚ್ಚುಗಾಗಿ ಕ್ಯಾಮೆರಾ ಹಿಂದೆ ಹೆಂಡತಿ ಸ್ಪೆಷಲ್ ಕೇಕ್ ರೆಡಿ ಮಾಡಿ ಕೊಟ್ಟಿದ್ದಾರೆ. ಈ ಒಗಟ್ಟನ್ನ ಬಿಡಿ ಬಿಡಿಯಾಗಿ ಬಿಡಿಸಿ ಹೇಳ್ತಿವಿ ಕೇಳಿ.

ರಚ್ಚುಗೆ ಕೇಕ್​ ರೆಡಿ ಮಾಡಿಕೊಟ್ಟಿದ್ದು ಯಾರು..? 
‘ಲವ್ ಯೂ ರಚ್ಚು’, ರಚಿತಾ ರಾಮ್ ಹಾಗೂ ಕೃಷ್ಣ ಅಜಯ್ ರಾವ್ ನಟನೆಯ ಹೊಸ ಸಿನಿಮಾ.. ‘ಮೊಗ್ಗಿನ ಮನಸು’ ಖ್ಯಾತಿಯ ಶಶಾಂಕ್ ಕಥೆ ಬರೆದಿರುವ ಈ ‘‘ಲವ್ ಯೂ ರಚ್ಚು’’ ಸಿನಿಮಾವನ್ನ ಶಂಕರ್ ಎಸ್​ ರಾಜ್ ಅನ್ನೋರು ಡೈರೆಕ್ಷನ್ ಮಾಡ್ತಿದ್ದಾರೆ. ಇದೇ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದು ಹಾಡೊಂದರ ಚಿತ್ರೀಕರಣದಲ್ಲಿ ಅಜಯ್ ರಾವ್ ಮತ್ತು ರಚಿತಾ ರಾಮ್ ಪಾಲ್ಗೊಂಡಿದ್ದಾರೆ.

ಅತ್ತ ರಚ್ಚು ಜೊತೆ ಅಜಯ್ ರಾವ್ ಡ್ಯುಯೆಟ್ ಹಾಡೋ ಶೂಟ್​​​ನಲ್ಲಿದ್ದಾರೆ.. ಇತ್ತ ರಚ್ಚುಗಾಗಿ ಅಜಯ್ ರಾವ್ ಅವರ ಧರ್ಮಪತ್ನಿ ಸ್ವಪ್ನ ಸ್ಪೆಷಲ್ ಕೇಕ್ ಒಂದನ್ನ ಸಿದ್ಧ ಮಾಡಿಕೊಟ್ಟಿದ್ದಾರೆ. ವಾವ್ ಎಂಥ ಕೇಕ್ ಅಂತ ಚಪ್ಪರಿಸಿಕೊಂಡು ಖುಷಿಯಿಂದ ರಚಿತಾ ಕೇಕ್ ತಿನ್ನುತ್ತಿರೋ ವಿಡಿಯೋ ವೈರಲ್ ಆಗಿದೆ.

The post ರಚ್ಚು ಹ್ಯಾಪಿ ಬರ್ತ್​ಡೇಗೆ ಕೇಕ್​ ರೆಡಿ ಮಾಡಿದ್ದು ಯಾರು ಗೊತ್ತಾ..? appeared first on News First Kannada.

Source: newsfirstlive.com

Source link