ಉಚ್ಚಾಟಿತ AIADMK ಪಕ್ಷದ ನಾಯಕಿ ಶಶಿಕಲಾ ಅವರು ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಭೇಟಿ ಮಾಡಿದ್ದಾರೆ. ಚೆನ್ನೈನ ಪೋಯಸ್ ಗಾರ್ಡನ್ನಲ್ಲಿರುವ ರಜನಿಕಾಂತ್ ಮನೆಗೆ ಶಶಿಕಲಾ ಭೇಟಿ ನೀಡಿದ್ದಾರೆ.
ಇತ್ತೀಗಷ್ಟೇ ರಜನಿಕಾಂತ್ ಅವರಿಗೆ ದಾದಾ ಸಾಬ್ ಪಾಲ್ಕೆ ಪ್ರಶಸ್ತಿ ಬಂದ ಹಿನ್ನಲೆಯಲ್ಲಿ ಶಶಿಕಲಾ ರಜನಿಕಾಂತ್ ಅವರನ್ನು ಭೇಟಿ ಮಾಡಿ ಶುಭ ಕೋರಿದ್ದು, ಇದೇ ವೇಳೆ ರಜನಿ ಅವರ ಆರೋಗ್ಯದ ಬಗ್ಗೆ ಯೋಗಕ್ಷೇಮ ವಿಚಾರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಕಳೆದ ಅಕ್ಟೋಬರ್ನಲ್ಲಿ ರಜನಿ ಅನಾರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಹೀಗಾಗಿ ಶಶಿಕಲಾ ರಜನಿ ಅವರ ಆರೋಗ್ಯವನ್ನು ವಿಚಾರಿಸಿ ಅವರಿಗೆ ಹೂ ಗುಚ್ಚವನ್ನು ನೀಡಿದ್ದಾರೆ.
ಸದ್ಯ ಶಶಿಕಲಾ ಮತ್ತೆ ತಮಿಳುನಾಡು ರಾಜಕೀಯ ಕ್ಷೇತ್ರದ ಮರುಪ್ರವೇಶಕ್ಕೆ ಚಿಂತನೆ ನಡೆಸಿದ್ದು, ಈ ಸಂದರ್ಭದಲ್ಲಿ ಶಶಿಕಲಾ, ರಜನಿ ಕಾಂತ್ ಅವರನ್ನು ಭೇಟಿಯಾಗಿದ್ದು ತಮಿಳುನಾಡು ರಾಜಕೀಯದಲ್ಲಿ ಭಾರೀ ಕುತೂಹಲನ್ನು ಮೂಡಿಸಿದೆ.