ನವದೆಹಲಿ: ಡ್ರೋಣ್ ಆಧುನಿಕ ಶತಮಾನದ ಮಾನವನ ವಿಶಿಷ್ಟ ಆವಿಷ್ಕಾರ. ಅಂಗೈ ಅಳತೆಯ ಈ ಪುಟ್ಟ ಸಾಧನ ಮನಸ್ಸು ಮಾಡಿದರೆ ಯಾವುದೇ ಲೆಕ್ಕಾಚಾರಗಳನ್ನ ಬುಡಮೇಲು ಮಾಡಿಬಿಡಬಹುದು. ಇಂತಹ ಬಲಿಷ್ಠ ಸಾಧನಕ್ಕೀಗ ಇನ್ನಷ್ಟು ಬಲ ಸಿಕ್ಕಿದ್ದು ಮಾನವನ ಭಾವನೆಗಳನ್ನು ಅರಿತುಕೊಂಡು ಕಾರ್ಯ ನಿರ್ವಹಿಸುತ್ತದ್ಯಂತೆ.
ಹೌದು.. ತೆಲುಗಿನಲ್ಲಿ ರಜಿನಿಕಾಂತ್ ಅಭಿನಯದ ‘ಎಂದಿರನ್’ (ರೋಬೋ) ಸಿನಿಮಾ ನಿಮಗೆ ನೆನಪಿರಬಹುದು. ಅದರಲ್ಲಿ ನಾಯಕ ನಿರ್ಮಿಸಿದ ರೋಬೋ ಮನುಷ್ಯನ ಭಾವನೆಗಳನ್ನು ಅರ್ಥ ಮಾಡಿಕೊಂಡು ಏನೆಲ್ಲ ಅವಾಂತರಗಳನ್ನು ಮಾಡಿತ್ತು ಅನ್ನೋದನ್ನ ನಿರ್ದೇಶಕ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದರು. ಅದೇ ರೀತಿ ಇದೀಗ ಮಾನವನ ಸಹಜ ಭಾವನೆಗಳನ್ನು ಅರ್ಥೈಸಿಕೊಂಡು ಕಾರ್ಯ ನಿರ್ವಹಿಸಬಲ್ಲ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ಡ್ರೋನ್ ಅನ್ನು ಬ್ರಿಟಿಷ್ ಡಿಫೆನ್ಸ್ ಕಂಪೆನಿ ಕಂಡುಹಿಡಿದಿದೆ.
ಕಂಪನಿ ನೀಡಿದ ಮಾಹಿತಿಯಂತೆ ಕಂಪ್ಯೂಟರ್ ಮುಂದೆ ಕುಳಿತ ವ್ಯಕ್ತಿಯ ಮನಸ್ಥಿತಿಯಂತೆ ಡ್ರೋಣ್ನ್ನು ಕಂಟ್ರೋಲ್ ಮಾಡಬಹುದಾಗಿದೆ. ಮನುಷ್ಯನ ಮೆದುಳಿನಿಂದ ಸಿಗ್ನಲ್ಗಳನ್ನು ಗ್ರಹಿಸಿ ಡ್ರೋಣ್ ಕಾರ್ಯನಿರ್ವಹಿಸಲಿದೆ. ಇದು ರಕ್ಷಣಾ ವಲಯದಲ್ಲಿ ಬಹಳ ಉಪಯುಕ್ತವಾಗುತ್ತೆ ಅಂತ ಡ್ರೋಣ್ ತಯಾರಕರು ಹೇಳಿದ್ದಾರೆ.
The post ರಜಿನಿಕಾಂತ್ ರೋಬೋ ಚಿತ್ರದ ಕಲ್ಪನೆಗಳನ್ನ ಸತ್ಯ ಮಾಡಿದ ಬ್ರಿಟನ್ ವಿಜ್ಞಾನಿಗಳು..! appeared first on News First Kannada.