ರಜಿನಿಗೆ ವಯಸ್ಸು ಆಯ್ತು.. ತಲೈವಾ ಜಮಾನ ಮುಗಿತು.. ಇನ್ಮುಂದೆ ಸಿನಿಮಾ ಮಾಡೋದು ಡೌಟ್ ಅನ್ನೋವ್ರೆ ಜಾಸ್ತಿ. ಆದರೆ, ರಜನಿ ಜೋಶ್ ಕಮ್ಮಿಯಾಗಿಲ್ಲ. ಮೊನ್ನೆಯಷ್ಟೇ ತಲೈವಾ 169ನೇ ಚಿತ್ರ ಅನೌನ್ಸ್ ಮಾಡಿದ್ರು. ಈಗ 170ನೇ ಚಿತ್ರನೂ ಫಿಕ್ಸ್ ಆಗೋಗಿದೆಯಂತೆ. ಅಷ್ಟಕ್ಕೂ, ರಜನಿಯ 170 ಚಿತ್ರಕ್ಕೆ ಡೈರೆಕ್ಟರ್ ಯಾರು? ಯಾವುದು ಆ ಚಿತ್ರ ಅನ್ನೋ ಉತ್ತರ ಇಲ್ಲಿದೆ ಓದಿ..
ಅಣ್ಣಾತ್ತೆ ಚಿತ್ರದ ನಂತರ ಸೂಪರ್ ಸ್ಟಾರ್ ರಜನಿಕಾಂತ್ ಹೊಸ ಸಿನಿಮಾ ಯಾವುದು ಅನ್ನೋದಕ್ಕೆ ಉತ್ತರ ಸಿಕ್ಕಾಗಿದೆ. ಡಾಕ್ಟರ್, ಬೀಸ್ಟ್ ಖ್ಯಾತಿಯ ನೆಲ್ಸನ್ ದಿಲೀಪ್ ಕುಮಾರ್ ಜೊತೆ ತಲೈವಾ 169ನೇ ಚಿತ್ರ ಮಾಡ್ತಿದ್ದಾರೆ. ಈ ಪ್ರಾಜೆಕ್ಟ್ ಅಧಿಕೃತವಾಗಿ ಅನೌನ್ಸ್ ಆಗಿದ್ದು, ಫಸ್ಟ್ ಲುಕ್ ಮೋಷನ್ ಪೋಸ್ಟರ್ ಸಹ ಬಿಡುಗಡೆಯಾಗಿದೆ.
ರಜನಿಯ 170ನೇ ಚಿತ್ರಕ್ಕೆ ಡೈರೆಕ್ಟರ್ ಫಿಕ್ಸ್
ಹೊಸ ನಿರ್ದೇಶಕನ ಜೊತೆ ತಲೈವಾ ಸಿನಿಮಾ
169ನೇ ಚಿತ್ರ ಶುರುವಾದ ಬೆನ್ನಲ್ಲೇ 170ನೇ ಸಿನಿಮಾದ ಕೆಲಸಕ್ಕೂ ಚಾಲನೆ ಕೊಟ್ಟಿದ್ದಾರೆ ರಜನಿ ಬಾಸ್. ತಮಿಳಿನ ಕೆಲವು ವೆಬ್ಸೈಟ್ಗಳು ವರದಿ ಮಾಡಿರುವ ಪ್ರಕಾರ, ರಜನಿಯ 170ನೇ ಚಿತ್ರಕ್ಕೆ ಅರುಣರಾಜ್ ಕಾಮರಾಜ್ ಆಕ್ಷನ್ ಕಟ್ ಹೇಳಲಿದ್ದಾರಂತೆ. ಈ ಸಂಬಂಧ ರಜನಿ ಸ್ಕ್ರಿಪ್ಟ್ ಕುರಿತು ಚರ್ಚಿಸಿದ್ದು, ಗ್ರೀನ್ ಸಿಗ್ನಲ್ ಸಿಕ್ಕಿದೆಯಂತೆ.
ಸದ್ಯ ಅರುಣರಾಜ್ ಕಾಮರಾಜ್ ಅವರು ಉದಯನಿಧಿ ಸ್ಟಾಲಿನ್ ನಟಿಸುತ್ತಿರುವ ‘ನೆಂಜುಕು ನೀದಿ’ (Nenjukku Needhi) ಚಿತ್ರ ಮಾಡ್ತಿದ್ದು, ಈ ಸಿನಿಮಾವನ್ನು ಬೋನಿ ಕಪೂರ್ ನಿರ್ಮಿಸುತ್ತಿದ್ದಾರೆ. ಅರುಣರಾಜ್, ರಜನಿಕಾಂತ್ಗೆ ಸ್ಕ್ರಿಪ್ಟ್ ಮಾಡಿದ ವಿಚಾರ ತಿಳಿದು ಈ ಚಿತ್ರವನ್ನು ತಾವೇ ನಿರ್ಮಿಸಲು ಮುಂದಾಗಿದ್ದಾರಂತೆ.
ಅರುಣರಾಜ್ ಕಾಮರಾಜ್ ಈ ಹಿಂದೆ ಶಿವಕಾರ್ತಿಕೇಯನ್ ಜೊತೆ ‘ಕಣ್ಣಾ’ ಎಂಬ ಚಿತ್ರ ಮಾಡಿದ್ದರು. ಜೊತೆಗೆ ನಟನೆ, ಗೀತೆರಚನೆಯಲ್ಲೂ ಪಳಗಿದ್ದಾರೆ. ರಜನಿ ನಟಿಸಿದ್ದ ಕಬಾಲಿ ಚಿತ್ರದ ನೆರಪ್ಪುಡ ಹಾಡನ್ನು ಬರೆದಿದ್ದು ಇದೇ ಕಾಮರಾಜ್. ಆಗ ಹಾಡು ಬರೆದು ರಜನಿ ಅಭಿಮಾನ ಮೆರೆದಿದ್ದ ಡೈರೆಕ್ಟರ್ ಈಗ ಸಿನಿಮಾ ನಿರ್ದೇಶಿಸುವ ಅವಕಾಶ ಪಡೆದುಕೊಂಡಿದ್ದಾರೆ.