ರಜೆ ಕಳೆಯಲು ಮಜೋರ್ಕಾ ಬಂದಿದ್ದ ಬ್ರಿಟಿಷ್ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ್ದ ಇಟಲಿ ಪ್ರಜೆಯನ್ನು ಸ್ಪೇನ್ ಪೊಲೀಸ್ ಬಂಧಿಸಿದೆ! | Italian accused of raping a British woman while she was on holiday in Majorca arrested in Madrid


ಆರೋಪಿಯು ಸಂತ್ರಸ್ತೆಗೆ ತಿಳಿಸಿದ ತನ್ನ ಹೆಸರನ್ನು ಸಹ ಆಕೆ ಬ್ರಿಟಿಷ್ ಪೊಲೀಸರಿಗೆ ಬಹಿರಂಗಪಡಿಸಿದ್ದಳು. ತನ್ನೊಂದಿಗೆ ಗೆಳೆತನ ಬೆಳೆಸುವ ಉದ್ದೇಶ ವ್ಯಕ್ತಪಡಿಸಿದ ಅವನು ಮನೆಗೆ ಕರೆದೊಯ್ದು ತನ್ನ ಮೇಲೆ ಹಲವಾರು ಬಾರಿ ಲೈಂಗಿಕ ಹಾಗೂ ದೈಹಿಕ ಹಲ್ಲೆ ನಡೆಸಿದನೆಂದು ಅಕೆ ಪೊಲೀಸರಿಗೆ ತಿಳಿಸಿದ್ದಳು.

ರಜೆ ಕಳೆಯಲು ಮಜೋರ್ಕಾ ಬಂದಿದ್ದ ಬ್ರಿಟಿಷ್ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ್ದ ಇಟಲಿ ಪ್ರಜೆಯನ್ನು ಸ್ಪೇನ್ ಪೊಲೀಸ್ ಬಂಧಿಸಿದೆ!

ಮ್ಯಾಡ್ರಿಡ್ ಪೊಲೀಸ್

ರಜೆ ಕಳೆಯಲು ಸ್ಪೇನ್ ಗೆ (Spain) ಬಂದಿದ್ದ ಬ್ರಿಟಿಷ್ ಮಹಿಳೆಯನ್ನು (British Woman) ಮಜೊರ್ಕಾದಲ್ಲಿರುವ ಸ್ಥಳವೊಂದರಲ್ಲಿ ರೇಪ್ ಮಾಡಿದ ಶಂಕಿತ ದುರುಳನೊಬ್ಬನನ್ನು ಮ್ಯಾಡ್ರಿಡ್ ನಲ್ಲಿ (Madrid) ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತೆಯು ಲಂಡನ್ ಗೆ ತೆರಳುವ ಮುನ್ನ ಮೆಟ್ರೊಪಾಲಿಟನ್ ಪೊಲೀಸ್ ಗೆ ದೂರು ಸಲ್ಲಿಸಿದ ಬಳಿಕ ಆರೋಪಿಯನ್ನು ಬಂಧಿಸಲಾಗಿದೆ. ಅವನ ವಯಸ್ಸನ್ನು ಪೊಲೀಸರು ಇದುವರೆಗೆ ಬಹಿರಂಗಪಡಿಸಿಲ್ಲವಾದರೂ ಅವನು ಇಟಲಿ ದೇಶದ ಪ್ರಜೆ ಅನ್ನೋದು ಗೊತ್ತಾಗಿದೆ.

ಸ್ಪೇನ್​ ನ ರಾಷ್ಟ್ರೀಯ ಪೊಲೀಸ್ ಬಾತ್ಮೀದಾರರೊಬ್ಬರು ಅರೋಪಿಯ ಬಂಧನವನ್ನು ಖಚಿತಪಡಿಸಿದ್ದಾರೆ: ‘ಸೆಪ್ಟೆಂಬರ್ 2021 ರಲ್ಲಿ ಮಜೋರ್ಕಾಗೆ ರಜೆ ಕಳೆಯಲು ಬಂದಿದ್ದ ಬ್ರಿಟಿಷ್ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ನ್ಯಾಶನಲ್ ಪೊಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ,’ ಅಂತ ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅತ್ಯಾಚಾರಕ್ಕೊಳಗಾದ ಮಹಿಳೆಯು ಲಂಡನ್ ಗೆ ವಾಪಸ್ಸು ಹೋದ ಬಳಿಕ ಅಧಿಕೃತವಾಗಿ ದೂರು ದಾಖಲಿಸಿದ ಬಳಿಕ ತನಿಖೆಯನ್ನು ಕೈಗೆತ್ತಿಕೊಳ್ಳಲಾಗಿತ್ತು,’ ಎಂದು ಬಾತ್ಮೀದಾರ ಹೇಳಿದ್ದಾರೆ.

‘ತನ್ನ ಮೇಲೆ ಅತ್ಯಾಚಾರ ನಡೆದ ಸ್ಥಳದ ಬಗ್ಗೆ ಸಂತ್ರಸ್ತೆಯು ಒಂದಷ್ಟು ಮಾಹಿತಿಯನ್ನು ತನ್ನ ದೂರಿನಲ್ಲಿ ನೀಡಿದ್ದಳು. ಅದೊಂದು ಜನವಸತಿ ಪ್ರದೇದಲ್ಲಿರುವ ಮನೆಯಾಗಿದ್ದು ಬಂಧಿತ ವ್ಯಕ್ತಿಯು ಅದು ತನ್ನ ತಂದೆತಾಯಿಗಳಿಗೆ ಸೇರಿದ ಆಸ್ತಿಯೆಂದು ಹೇಳಿದ್ದಾನೆ,’ ಎಂದು ಬಾತ್ಮೀದಾರ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆರೋಪಿಯು ಸಂತ್ರಸ್ತೆಗೆ ತಿಳಿಸಿದ ತನ್ನ ಹೆಸರನ್ನು ಸಹ ಆಕೆ ಬ್ರಿಟಿಷ್ ಪೊಲೀಸರಿಗೆ ಬಹಿರಂಗಪಡಿಸಿದ್ದಳು. ತನ್ನೊಂದಿಗೆ ಗೆಳೆತನ ಬೆಳೆಸುವ ಉದ್ದೇಶ ವ್ಯಕ್ತಪಡಿಸಿದ ಅವನು ಮನೆಗೆ ಕರೆದೊಯ್ದು ತನ್ನ ಮೇಲೆ ಹಲವಾರು ಬಾರಿ ಲೈಂಗಿಕ ಹಾಗೂ ದೈಹಿಕ ಹಲ್ಲೆ ನಡೆಸಿದನೆಂದು ಅಕೆ ಪೊಲೀಸರಿಗೆ ತಿಳಿಸಿದ್ದಳು.

ಆಕೆ ನೀಡಿದ ಮಾಹಿತಿ ಮೇರೆಗೆ ಅರೋಪಿತ ರೇಪ್ ನಡೆಸಿದ ಮನೆಯನ್ನು ಪತ್ತೆ ಮಾಡಿದ ಪೊಲೀಸರು ಅದರ ಗೇಟಿನ ಬಳಿ ಬಾಡಿಗೆಗೆ ನೀಡುವ ಕುರಿತು ಫಲಕವೊಂದು ನೇತಾಡುತ್ತಿರುವುದನ್ನು ಗಮನಿಸಿ ಅದರ ಮೇಲೆ ಒದಗಿಸಲಾಗಿದ್ದ ನಂಬರ್ ಗೆ ಫೋನ್ ಮಾಡಿದ್ದಾರೆ.

ಅವನ ಲುಕ್ಸ್ ನಲ್ಲಿ ಸಾಕಷ್ಟು ಬದಲಾವಣೆಗಳು ಬಂದಿದ್ದರೂ ಸಂತ್ರಸ್ತೆಗೆ ಫೋಟೋಗಳನ್ನು ತೋರಿಸಿದಾಗ ಅವನ ಗುರುತು ಹಿಡಿದಳೆಂದು ಪೊಲೀಸ್ ಬಾತ್ಮೀದಾರ ಹೇಳಿದ್ದಾರೆ.

ತನ್ನ ಮೇಲೆ ರೇಪ್ ನಡೆದ ವಿಷಯವನ್ನು ಸಂತ್ರಸ್ತೆಯು ತನ್ನ ಬ್ರಿಟಿಷ್ ಗೆಳತಿ ಒಬ್ಬರ ಬಳಿ ಹೇಳಿಕೊಂಡಿದ್ದಳಂತೆ. ಬ್ರಿಟಿಷ್ ಪೊಲೀಸ್ ಅಧಿಕಾರಿಗಳು ಆ ಗೆಳತಿಯ ವಿಚಾರಣೆಯನ್ನೂ ನಡೆಸಿದ್ದಾರೆ.

‘ಒಂದು ವರ್ಷ ಕಾಲ ನಡೆದ ಸುದೀರ್ಘ ತನಿಖೆ ಮತ್ತು ಬ್ರಿಟಿಷರ ನಿರಂತರ ಸಹಕಾರದಿಂದ ಸ್ಪೇನ್ ನ್ಯಾಶನಲ್ ಪೊಲೀಸ್ ಕಾರ್ಯಾಚರಣೆಯೊಂದನ್ನು ನಡೆಸಿ ಆರೋಪಿತ ರೇಪಿಸ್ಟ್​​ ನನ್ನು ಮ್ಯಾಡ್ರಿಡ್ ನಲ್ಲಿ ಬಂಧಿಸುವಲ್ಲಿ ಸಫಲರಾಗಿದ್ದಾರೆ. ಮಜೋರ್ಕಾ ರಾಜಧಾನಿ ಪಾಲ್ಮ ಮತ್ತು ಇಟಲಿ ನಡುವೆ ಅವನು ಹಾಯಾಗಿ ತಿರುಗಾಡಿಕೊಂಡಿದ್ದ,’ ಎಂದು ಸ್ಪೇನ್ ನ್ಯಾಶನಲ್ ಪೊಲೀಸ್ ಬಾತ್ಮೀದಾರ ಹೇಳಿದ್ದಾರೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.