ರಜೆ ಮುಗಿಸಿ ಕರ್ತವ್ಯಕ್ಕೆ ವಾಪಸ್ ಆಗಿದ್ದ ಯೋಧ ಪಂಜಾಬ್​ನಲ್ಲಿ ಹೃದಯಾಘಾತದಿಂದ ಸಾವು | Chikkodi Soldier Death due to Heart Attack in Punjab


ರಜೆ ಮುಗಿಸಿ ಕರ್ತವ್ಯಕ್ಕೆ ವಾಪಸ್ ಆಗಿದ್ದ ಯೋಧ ಪಂಜಾಬ್​ನಲ್ಲಿ ಹೃದಯಾಘಾತದಿಂದ ಸಾವು

ಯೋಧ ವಿನಯ್ ಬಾಬಾಸಾಹೇಬ ಭೋಜೆ

ಚಿಕ್ಕೋಡಿ: ರಜೆ ಮುಗಿಸಿ ಕರ್ತವ್ಯಕ್ಕೆ ವಾಪಸ್ ಆಗಿದ್ದ ಯೋಧ (Soldier) ಹೃದಯಾಘಾತದಿಂದ (Heart Attack) ಮೃತಪಟ್ಟಿದ್ದಾರೆ. ಪಂಜಾಬ್​ನಲ್ಲಿ (Punjab) ನಿಪ್ಪಾಣಿ ತಾಲೂಕಿನ ಭೋಜ ಗ್ರಾಮದ ಯೋಧ ಸಾವನ್ನಪ್ಪಿದ್ದಾರೆ. ಪಠಾಣ್ ಕೋಟ ರೈಲು ನಿಲ್ದಾಣದಲ್ಲಿ ವಿನಯ್ ಬಾಬಾಸಾಹೇಬ ಭೋಜೆ (37) ಹೃದಯಾಘಾತದಿಂದ ಮೃತಪಟ್ಟಿದ್ದು, ಸಾವಿನ ಸುದ್ದಿ ಕೇಳಿ ಭೋಜ ಗ್ರಾಮ ಶೋಕ ಸಾಗರದಲ್ಲಿ ಮುಳುಗಿದೆ. ಯೋಧ ಹದಿನೇಳು ವರ್ಷಗಳ ಹಿಂದೆ ಭಾರತೀಯ ಸೇನೆಗೆ ಸೇರ್ಪಡೆಯಾಗಿದ್ದರು. ಕಳೆದ ಹತ್ತು ವರ್ಷಗಳಿಂದ ಮಹಾರಾಷ್ಟ್ರದ ಹಾತಕಣಂಗಲೆ ತಾಲೂಕಿನ ತಿಲವಾಣಿ ಗ್ರಾಮದಲ್ಲಿ ನೆಲೆಸಿದ್ದರು.

ಕಳೆದ ವಾರ ರಜೆಗೆಂದು ಮಹಾರಾಷ್ಟ್ರದ ಹಾತಕಣಂಗಲೆ ತಾಲೂಕಿನ ತಿಲವಾಣಿಗೆ ಬಂದು ರಜೆ ಮುಗಿಸಿ ಪಠಾಣ್ ಕೋಟಗೆ ವಾಪಸಾಗಿದ್ದರು. ರೈಲು ನಿಲ್ದಾಣದಲ್ಲಿ ಇಳಿಯುವಾಗ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಮೃತ ಸೈನಿಕ ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಕೊರೊನಾ ಹಿನ್ನೆಲೆ ಯೋಧನ ಅಂತಿಮ ಸಂಸ್ಕಾರವನ್ನು ಪಂಜಾಬ್​ನಲ್ಲೇ ಮಾಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಿ

TV9 Kannada


Leave a Reply

Your email address will not be published. Required fields are marked *