ರಣಜಿ ಟೂರ್ನಿಯಲ್ಲಿ ಸರ್ಫರಾಜ್​ ಮಿ. ಕನ್ಸಿಸ್ಟೆಂಟ್​- ಯಂಗ್​​ಸ್ಟರ್​​ಗೆ ತೆರೆಯುತ್ತಾ ಟೀಂ ಇಂಡಿಯಾ ಬಾಗಿಲು?


ಟೀಮ್​ ಇಂಡಿಯಾದ ಪ್ಯೂಚರ್​​ ಸ್ಟಾರ್​​ಗಳ ಅಬ್ಬರ ರಣಜಿ ಟೂರ್ನಿಯಲ್ಲಿ ಜೋರಾಗಿದೆ. ಅದರಲ್ಲೂ ಮುಂಬೈನ ಸರ್ಫರಾಜ್​ ಖಾನ್​ ಬ್ಯಾಟಿಂಗ್​ ಅನ್ನ ಎಲ್ಲರೂ ಗುಣಗಾನ ಮಾಡ್ತಿದ್ದಾರೆ. ಇಷ್ಟೇ ಅಲ್ಲ…, ರಣಜಿ ಟೂರ್ನಿಯ ಮಿಸ್ಟರ್​​ ಕನ್ಸಿಸ್ಟೆಂಟ್​ ಎಂದು ಹಾಡಿ ಹೊಗಳ್ತಿದ್ದಾರೆ.

ಕೊರೊನಾ ಸಂದಿಗ್ಧತೆಯ ನಡುವೆಯೂ ಆರಂಭವಾಗಿರುವ ದೇಶಿ ಕ್ರಿಕೆಟ್​​ನ ರಾಜ ರಣಜಿ ಟ್ರೊಫಿ ಟೂರ್ನಿಯ ಸದ್ದು ದಿನದಿಂದ ದಿನಕ್ಕೆ ಜೋರಾಗಿದೆ. ಒಂದೆಡೆ ಸ್ಟಾರ್​ ಆಟಗಾರರ ಫಾರ್ಮ್​ ಕಂಡುಕೊಳ್ಳುವ ಪ್ರಯತ್ನವಾದ್ರೆ, ಇನ್ನೊಂದೆಡೆ ಯುವ ಆಟಗಾರರು ದಾಖಲೆಗಳನ್ನೇ ಪುಡಿಗಟ್ಟುತ್ತಿದ್ದಾರೆ. ಕೆಲ ಆಟಗಾರರಂತೂ ಕ್ರಿಕೆಟ್​ ದಿಗ್ಗಜರೇ ಬೆರಗಾಗುವಂತಾ ಪ್ರದರ್ಶನ ನೀಡ್ತಿದ್ದಾರೆ. ಅದರಲ್ಲೂ ಮುಂಬೈನ ಸರ್ಫರಾಜ್​ ಖಾನ್​ ಆಟಕ್ಕೆ ಶಹಬ್ಬಾಸ್​ ಅಂತಿದ್ದಾರೆ.

ಮೊದಲ ಪಂದ್ಯದಲ್ಲೇ ಗಮನ ಸೆಳೆದ ಸರ್ಫರಾಜ್​ ಖಾನ್​.!

YES..! ಮುಂಬೈ ರಣಜಿ ತಂಡದ ಯಂಗ್​ ಬ್ಯಾಟ್ಸ್​​​ಮನ್​ ಸರ್ಫರಾಜ್​ ಖಾನ್​ ಮೊದಲ ಪಂದ್ಯದಲ್ಲೇ ಗಮನ ಸೆಳೆದಿದ್ದಾರೆ. ಸೌರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಮುಂಬೈ ಪಡೆ 44 ರನ್​ಗಳಿಸುವಷ್ಟರಲ್ಲೇ 3 ವಿಕೆಟ್​​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆ ಸಂದರ್ಭದಲ್ಲಿ ಕಣಕ್ಕಿಳಿದ ಸರ್ಫರಾಜ್​ ಖಾನ್​ ಜವಾಬ್ಧಾರಿಯುತ ಇನ್ನಿಂಗ್ಸ್​ ಕಟ್ಟಿದ್ರು. ಸೌರಾಷ್ಟ್ರ ಬೌಲಿಂಗ್​ ಯುನಿಟ್​ನ ದಾಳಿಯನ್ನ ಸಮರ್ಥವಾಗಿ ಎದುರಿಸಿದ ಸರ್ಫರಾಜ್​ ಮೊದಲ ದಿನದಾಟದಲ್ಲೇ ಶತಕ ಸಿಡಿಸಿದ್ರು. ಇನ್ನು 2ನೇ ದಿನದಾಟದಲ್ಲಿ ಅದನ್ನ ದ್ವಿಶತಕಕ್ಕೆ ಕನ್ವರ್ಟ್​ ಮಾಡುವಲ್ಲೂ ಯಶಸ್ವಿಯಾದ್ರು.

ಸರ್ಫರಾಜ್​ ಖಾನ್​ ಇನ್ನಿಂಗ್ಸ್​​

ಸೌರಾಷ್ಟ್ರ ವಿರುದ್ಧದ ಪಂದ್ಯದಲ್ಲಿ 401 ಎಸೆತಗಳನ್ನ ಎದುರಿಸಿದ ಸರ್ಫರಾಜ್​ ಖಾನ್​, ಒಟ್ಟು 275 ರನ್​ ಸಿಡಿಸಿದ್ರು. 68.58ರ ಸ್ಟ್ರೈಕ್​ರೇಟ್​​ನಲ್ಲಿ ಬ್ಯಾಟ್​ ಬೀಸಿದ ಸರ್ಫರಾಜ್​ ಇನ್ನಿಂಗ್ಸ್​​ನಲ್ಲಿ 30 ಬೌಂಡರಿ ಹಾಗೂ 7 ಸಿಕ್ಸರ್​​ಗಳು ಒಳಗೊಂಡಿದ್ವು.

ರಣಜಿ ಟೂರ್ನಿಯ ಮಿಸ್ಟರ್​​ ಕನ್ಸಿಸ್ಟೆಂಟ್​ ಈ ಸರ್ಫರಾಜ್..!

ಯೆಸ್..! ಒಂದು ಡಬಲ್​ ಹಂಡ್ರೆಡ್​ ಇನ್ನಿಂಗ್ಸ್​​ನಿಂದ ಸರ್ಫರಾಜ್​ ಖಾನ್​, ಅವರನ್ನ ದಿಗ್ಗಜರೆಲ್ಲಾ ಹೊಗಳ್ತಿಲ್ಲಾ. ಕನ್ಸಿಸ್ಟೆನ್ಸಿ ಕಾರಣದಿಂದ ಸರ್ಫರಾಜ್ ಎಲ್ಲರಲ್ಲೂ ಬೆರಗು ಮೂಡಿಸಿರೋದು. ಕಳೆದ ರಣಜಿ ಋತುವಿನಲ್ಲಿ ಸರ್ಫರಾಜ್ ಖಾನ್​ ಬ್ಯಾಟ್​​ ಅಕ್ಷರಶಃ ರನ್​ ಕೊಳ್ಳೆ ಹೊಡೆದಿತ್ತು. ಕೇವಲ 6 ಪಂದ್ಯಗಳಲ್ಲಿ 928 ರನ್ ಗಳಿಸಿದ್ದರು. 112 ಬೌಂಡರಿಗಳು ಮತ್ತು 22 ಸಿಕ್ಸರ್‌ಗಳನ್ನ ಸಿಡಿಸಿದ್ದ ಯಂಗ್​ ಗನ್​ 154 ಕ್ಕಿಂತ ಹೆಚ್ಚಿನ ಬ್ಯಾಟಿಂಗ್​​ ಸರಾಸರಿಯನ್ನ ಹೊಂದಿದ್ರು.

ಕಳೆದ ಆವೃತ್ತಿಯಲ್ಲಿ ಅಬ್ಬರಿಸಿದ್ದ ಸರ್ಫರಾಜ್​ ಈ ಆವೃತ್ತಿಯಲ್ಲೂ ರನ್​ ಕೊಳ್ಳೆ ಹೊಡೀತಿದ್ದಾರೆ. ಈ ಸೀಸನ್​ನ ಶತಕವನ್ನೂ ಸೇರಿಸಿದ್ರೆ, ಕಳೆದ 5 ರಣಜಿ ಪಂದ್ಯಗಳಲ್ಲಿ 4 ಶತಕ ಸಿಡಿಸಿದ ಹೆಗ್ಗಳಿಕೆ ಸರ್ಫರಾಜ್​ದ್ದಾಗಿದೆ. ಫಸ್ಟ್​​​ ಕ್ಲಾಸ್​ಗೆ ಮರಳಿದ ಬಳಿಕ ಆಡಿದ 12 ಇನ್ನಿಂಗ್ಸ್​ಗಳೂ ಯುವ ಬ್ಯಾಟ್ಸ್​ಮನ್​ ಪಾಲಿಗೆ ಅವಿಸ್ಮರಣೀಯ ಅಂದ್ರೆ ತಪ್ಪಾಗಲ್ಲ.

ಕಳೆದ 12 ಇನ್ನಿಂಗ್ಸ್​​ಗಳಲ್ಲಿ ಸರ್ಫರಾಜ್​

ಕಳೆದ 12 ಇನ್ನಿಂಗ್ಸ್​ಗಳಿಂದ ಸರ್ಫರಾಜ್​, 1288 ರನ್​ ಕಲೆಹಾಕಿದ್ದಾರೆ. ಇದರಲ್ಲಿ ಒಂದು ಶತಕ , 2 ದ್ವಿಶತಕ ಹಾಗೂ ಇನ್ನೊಂದು ತ್ರಿಶತಕ ಇನ್ನಿಂಗ್ಸ್​ ಸೇರಿವೆ.

ಚೋಟಾ ಸ್ಕೋರ್​​ ಯಾದ್​ ನಹೀ ರಕ್ತಾ, ಬಡಾಯಿ ಮಾರ್​ ನಾ ಪಡ್ತಾ ಹೈ.!

ಚೋಟಾ ಸ್ಕೋರ್​​ ಕೋಯಿ ಯಾದ್​ ನಹೀ ರಕ್ತಾ, ಬಡಾಯಿ ಮಾರ್​ ನಾ ಪಡ್ತಾ ಹೈ.! ಯೆಸ್​​..! ಇದೇ ಸರ್ಫರಾಜ್​ ಖಾನ್​ರ ಸಕ್ಸಸ್​ನ ಮಂತ್ರ. ಸಣ್ಣ ಸ್ಕೋರ್​ ಮಾಡಿದ್ರೆ, ಯಾರೂ ನಮ್ಮನ್ನ ನೆನಪಿನಲ್ಲಿ ಇಟ್ಟು ಕೊಳ್ಳಲ್ಲ. ದೊಡ್ಡ ಸ್ಕೋರ್​ ಕಲೆ ಹಾಕಿದ್ರೆ ಮಾತ್ರ ಗುರುತಿಸಿಕೊಳ್ಳೋಕೆ ಸಾಧ್ಯ ಅನ್ನೋದು ಸರ್ಫರಾಜ್​ ಖಾನ್​ ಲೆಕ್ಕಾಚಾರ. ಹೀಗಾಗಿಯೇ ಆತ ಸದಾ ಬಿಗ್​ ಸ್ಕೋರ್​ ಅನ್ನೇ ಎದುರು ನೋಡ್ತಾನೆ ಸರ್ಫರಾಜ್​ ಸ್ನೇಹಿತರು ಹೇಳೋ ಮಾತಾಗಿದೆ.

ಯಂಗ್​​ಸ್ಟರ್​​ಗೆ ತೆರೆಯುತ್ತಾ ಟೀಮ್​ ಇಂಡಿಯಾ ಬಾಗಿಲು.?

ದೇಶಿ ಕ್ರಿಕೆಟ್​​ನಲ್ಲಿ ರನ್​ ಹೊಳೆ ಹರಿಸ್ತಾ ಇರೋ ಸರ್ಫರಾಜ್​ ಖಾನ್​ ಈಗಾಗಲೇ ತಮ್ಮ ಸಾಮರ್ಥ್ಯವನ್ನ ಪ್ರೂವ್​ ಮಾಡಿದ್ದಾರೆ. ಇದರೊಂದಿಗೆ ಸೆಲೆಕ್ಷನ್​ ಕಮಿಟಿ, ಬಿಸಿಸಿಐ ಪ್ರಮುಖರ ಗಮನವನ್ನೂ ಸೆಳೆದಿದ್ದಾರೆ. ಈಗಾಗಲೇ ಟೀಮ್​ ಇಂಡಿಯಾ ಮಿಡಲ್​ ಆರ್ಡರ್​​ ಸಮಸ್ಯೆಯನ್ನೂ ಎದುರಿಸ್ತಾ ಇರೋದ್ರಿಂದ ಸರ್ಫರಾಜ್​ ಆ ಸಮಸ್ಯೆಗೆ ಪರಿಹಾರವಾಗ್ತಾರೆ ಅನ್ನೋ ಮಾತುಗಳು ಕೇಳಿ ಬಂದಿವೆ. ಆದ್ರೆ, ಪೈಪೋಟಿಯ ನಡುವೆ ಅವಕಾಶ ಸಿಗುತ್ತಾ ಅನ್ನೋದೇ ಪ್ರಶ್ನೆಯಾಗಿದೆ.

ಸದ್ಯ ಮುಂಬೈ ಪರ ಮಿಂಚ್ತಾ ಇರೋ ಸರ್ಫರಾಜ್​ ಖಾನ್​, ಕಳೆದ ಕೆಲ ಸೀಸನ್​ನ ಹಿಂದೆ ಉತ್ತರ ಪ್ರದೇಶ ತಂಡಕ್ಕೆ ವಲಸೆ ಹೋಗಿದ್ರು. ಅಲ್ಲಿ ಸರಿಯಾಗಿ ಅವಕಾಶ ಸಿಗದ ಕಾರಣ ಮತ್ತೆ ತವರಿನ ತಂಡಕ್ಕೆ ಕಮ್​ಬ್ಯಾಕ್​ ಮಾಡಿದ್ರು. ಅಂದು ತೆಗೆದುಕೊಂಡಿದ್ದ ಮುಂಬೈ ತಂಡಕ್ಕೆ ಮರಳೋ ನಿರ್ಧಾರ ಇಂದು ಸಾಧನೆಗೆ ವೇದಿಕೆ ಒದಗಿಸಿದೆ. ಸಿಕ್ಕ ಅವಕಾಶದಲ್ಲಿ ಸರ್ಫರಾಜ್​, ಸಾಮರ್ಥ್ಯವನ್ನೂ ನಿರೂಪಿಸಿದ್ದಾರೆ. ಇದೇ ಕನ್ಸಿಸ್ಟೆನ್ಸಿ ಮುಂದುವರೆದ್ರೆ, ಟೀಮ್​ ಇಂಡಿಯಾದಲ್ಲಿ ಕಾಣಿಸಕೊಂಡರೂ ಅಚ್ಚರಿ ಪಡಬೇಕಿಲ್ಲ.

News First Live Kannada


Leave a Reply

Your email address will not be published. Required fields are marked *