ರಣಬೀರ್ ಮಾತ್ರ ಹಾಗೆ ಕರೆಯುತ್ತಾರೆ, ಅದು ನನಗೆ ಕೊಂಚವೂ ಇಷ್ಟವಿಲ್ಲ ಎಂದ ರಶ್ಮಿಕಾ ಮಂದಣ್ಣ | Ranbir Kapoor Call me Maam personally not Liked it says Rashmika Mandanna


ರಣಬೀರ್ ಮಾತ್ರ ಹಾಗೆ ಕರೆಯುತ್ತಾರೆ, ಅದು ನನಗೆ ಕೊಂಚವೂ ಇಷ್ಟವಿಲ್ಲ ಎಂದ ರಶ್ಮಿಕಾ ಮಂದಣ್ಣ

ರಣಬೀರ್​-ರಶ್ಮಿಕಾ

‘ಅನಿಮಲ್​’ ಚಿತ್ರದಲ್ಲಿ ರಣಬೀರ್ ಹಾಗೂ ರಶ್ಮಿಕಾ ನಟಿಸುತ್ತಿದ್ದಾರೆ. ಅನೀಲ್ ಕಪೂರ್, ಬಾಬಿ ಡಿಯೋಲ್ ಕೂಡ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಮಿಷನ್ ಮಜ್ನು’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಈ ಸಿನಿಮಾ ಮೂಲಕ ಅವರು ಬಾಲಿವುಡ್​ಗೆ ಕಾಲಿಡುತ್ತಿದ್ದಾರೆ. ಈ ಚಿತ್ರ ತೆರೆಗೆ ಬರುವುದಕ್ಕೂ ಮೊದಲೇ ಅವರಿಗೆ ಬಾಲಿವುಡ್​ನಿಂದ ಸಾಕಷ್ಟು ಆಫರ್​ಗಳು ಬರುತ್ತಿವೆ. ಅಮಿತಾಭ್​ ಬಚ್ಚನ್ ಜತೆ ‘ಗುಡ್​ಬೈ’ ಸಿನಿಮಾದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಇದಲ್ಲದೆ, ರಣಬೀರ್ ಕಪೂರ್ (Ranbir Kapoor) ಚಿತ್ರಕ್ಕೂ ರಶ್ಮಿಕಾ ನಾಯಕಿ ಆಗಿದ್ದಾರೆ. ಈ ಚಿತ್ರದ ಸೆಟ್​ನ ಅನುಭವವನ್ನು ರಶ್ಮಿಕಾ ಹಂಚಿಕೊಂಡಿದ್ದಾರೆ. ರಶ್ಮಿಕಾ ಅವರನ್ನು ರಣಬೀರ್​ ‘ಮ್ಯಾಮ್​’ ಎಂದು ಕರೆಯುತ್ತಾರೆ. ರಣಬೀರ್ ಬಗ್ಗೆ ಇದ್ದ ಗೌರವ ರಶ್ಮಿಕಾಗೆ ಹೆಚ್ಚಿದೆ. ಈ ಬಗ್ಗೆ ಅವರು ಮಾತನಾಡಿದ್ದಾರೆ.

‘ರಣಬೀರ್​ ತುಂಬಾನೇ ಲವೆಬಲ್​. ಅವರನ್ನು ಮೊದಲ ಬಾರಿ ಭೇಟಿ ಮಾಡುವಾಗ ನಾನು ನರ್ವಸ್ ಆಗಿದ್ದೆ. ಆದರೆ, ಐದೇ ನಿಮಿಷಗಳಲ್ಲಿ ಅವರ ಜತೆ ಒಳ್ಳೆಯ ಬಾಂಧವ್ಯ ಬೆಳೆಯಿತು. ಇಡೀ ಇಂಡಸ್ಟ್ರಿಯಲ್ಲಿ ಅವರು ಮಾತ್ರ ನನ್ನನ್ನು ಮ್ಯಾಮ್​ ಎಂದು ಸಂಭೋದಿಸುತ್ತಾರೆ. ನನಗೆ ಅದು ಇಷ್ಟ ಆಗುವುದಿಲ್ಲ’ ಎಂದಿದ್ದಾರೆ ರಶ್ಮಿಕಾ.

‘ಅನಿಮಲ್​’ ಚಿತ್ರದಲ್ಲಿ ರಣಬೀರ್ ಹಾಗೂ ರಶ್ಮಿಕಾ ನಟಿಸುತ್ತಿದ್ದಾರೆ. ಅನಿಲ್ ಕಪೂರ್, ಬಾಬಿ ಡಿಯೋಲ್ ಕೂಡ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾ ಕ್ರೈಮ್ ಕಥೆಯನ್ನುಹೊಂದಿದೆ. ಈ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ.

ರಶ್ಮಿಕಾ ಮಂದಣ್ಣ ಅವರು ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ‘ಗುಡ್​ಬೈ’ ಹಾಗೂ ‘ಮಿಷನ್​ ಮಜ್ನು’ ರಿಲೀಸ್​ಗೆ ರೆಡಿ ಇದೆ. ತಮಿಳಿನ ದಳಪತಿ ವಿಜಯ್ ಚಿತ್ರಕ್ಕೆ ರಶ್ಮಿಕಾ ನಾಯಕಿ. ‘ಪುಷ್ಪ 2’ ಚಿತ್ರದ ಶೂಟಿಂಗ್ ಜುಲೈ ತಿಂಗಳಿಂದ ಆರಂಭಗೊಳ್ಳಲಿದೆ. ‘ಪುಷ್ಪ’ ಹಿಟ್ ಆದ ನಂತರದಲ್ಲಿ ಈ ಚಿತ್ರದ ಬಗ್ಗೆ ನಿರೀಕ್ಷೆ ಮೂಡಿದೆ. ಫಿಲ್ಮ್​​ಫೇರ್​ ಮ್ಯಾಗಜಿನ್​​ಗಾಗಿ ರಶ್ಮಿಕಾ ಫೋಟೋಶೂಟ್ ಮಾಡಿಸಿದ್ದರು. ಈ ಫೋಟೋಗಳು ಸಖತ್ ವೈರಲ್ ಆಗಿದೆ. ರಣಬೀರ್ ‘ಬ್ರಹ್ಮಾಸ್ತ್ರ​’ ಸಿನಿಮಾದ ಕೊನೆಯ ಹಂತದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರದಲ್ಲಿ ಆಲಿಯಾಗೆ ಜತೆಯಾಗಿ ಅವರು ಕಾಣಿಸಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

TV9 Kannada


Leave a Reply

Your email address will not be published.